Sunday, August 25, 2024

 ಕಥೆ-498

ಬದುಕು ಬಂಗಾರವಾಗುವುದೆಂತು

ಈ ಪ್ರಪಂಚದಲ್ಲಿ ಮನುಷ್ಯನನ್ನು ತಿದ್ದಲು ಅನೇಕ ವಿಧಾನಗಳಿರಬಹುದು. ಆದರೆ, ಅವುಗಳಲ್ಲಿ ಬಹು ಮುಖ್ಯವಾದವು ಎರಡು ಬಹುಮಾನ ಮತ್ತು ಶಿಕ್ಷೆ. ಒಳ್ಳೆಯ ಕೆಲಸ ಮಾಡಿದಾಗ ಬಹುಮಾನ ಕೊಟ್ಟರೆ, ಮುಂದಕ್ಕೂ ಇಂತಹ ಒಳ್ಳೆಯ ಕೆಲಸ ಮಾಡುತ್ತಿರಬೇಕು ಹಾಗೂ ಬಹುಮಾನ ಪಡೆಯುತ್ತಿರಬೇಕು ಎಂಬ ಆಕರ್ಷಣೆ ಪರೋಕ್ಷ ಸಂದೇಶವನ್ನೂ ನೀಡಿದಂತಾಗುತ್ತದೆ.


ಅದೇ ರೀತಿಯಲ್ಲಿ ಕೆಟ್ಟ ಕೆಲಸ ಮಾಡಿದವರಿಗೆ ನೀಡುವ ಶಿಕ್ಷೆಯೂ ಪರೋಕ್ಷ ಶಿಕ್ಷಣವಾಗಬೇಕು ಹಾಗೂ ಮುಂದಕ್ಕೆ ಎಂದೂ ಅಂತಹ ತಪ್ಪು ಕೆಲಸ ಮಾಡದಂತೆ ಆತನನ್ನು ತಿದ್ದುವಂತಹ ಸಂದೇಶವನ್ನೂ ನೀಡಬೇಕು. ಆದರೆ ಬಹುಮಾನದ ಮೂಲಕವೇ ಒಬ್ಬ ವ್ಯಕ್ತಿಯನ್ನು ತಿದ್ದಿದ ಜಾರ್ಜ್ ವಾಷಿಂಗ್ಟನ್ ಅವರ ದೃಷ್ಟಾಂತ ಅತ್ಯಂತ ಸ್ವಾರಸ್ಯಕರವಾಗಿದೆ.


ಅಮೇರಿಕಾ ದೇಶದ ಅಧ್ಯಕ್ಷರಾಗಿದ್ದ ಜಾರ್ಜ್ ವಾಷಿಂಗ್ಟನ್ ಅವರು ಅತ್ಯಂತ ಜನಪ್ರಿಯರಾಗಿದ್ದರು. ಆದರೆ, ಅವರ ನೌಕರನಾಗಿದ್ದ ನಿಕೋಲಸ್ ಎಂಬಾತನು ತೀರಾ ಕೀಳು ಸ್ವಭಾವದ ವ್ಯಕ್ತಿಯಾಗಿದ್ದು, ಜನರಿಗೆ ಬಹಳಷ್ಟು ತೊಂದರೆ ಕೊಡುತ್ತಿದ್ದನು. ಅಧ್ಯಕ್ಷರ ಹಿರಿಮೆಯನ್ನು ಮನ್ನಿಸಿ ಜನರು ಆ ನೌಕರನನ್ನು ಆರಂಭದಲ್ಲಿ ಸಹಿಸಿಕೊಂಡರು. ಆದರೆ ನೌಕರನ ಉಪಟಳ ಸಹಿಸಲಸಾಧ್ಯವೆಂದಾದಾಗ, ಜನರು ಒಬ್ಬೊಬ್ಬರಾಗಿಯೇ ಅಧ್ಯಕ್ಷರ ಬಳಿ ಬಂದು ನಿಕೋಲಸ್‌ನ ಬಗ್ಗೆ ದೂರು ಹೇಳತೊಡಗಿದರು.


ಈ ರೀತಿಯಾಗಿ ಅನೇಕ ಮಂದಿ ದೂರಿಕೊಂಡಾಗ ಜಾರ್ಜ್ ವಾಷಿಂಗ್ಟನ್‌ರಿಗೂ ಆತನನ್ನು ತಿದ್ದಲು ಏನಾದರೂ ಮಾಡಬೇಕೆನ್ನಿಸಿತು. ಅವರು ಒಂದು ಉಪಾಯ ಮಾಡಿದರು. ನಿಕೋಲಸ್‌ನನ್ನು ತನ್ನ ಖಾಸಗಿ ಕೊಠಡಿಗೆ ಕರೆದು ಅವನ ಕೈಯಲ್ಲಿ ಒಂದು ಚಿನ್ನದ ನಾಣ್ಯವನ್ನು ಇಟ್ಟು ಹೀಗೆಂದರು.. ನಾಳೆ ಇಡೀ ದಿನ ನೀನು ಒಳ್ಳೆಯವನಾಗಿದ್ದು, ನಿನ್ನ ಬಗ್ಗೆ ದೂರುಗಳು ಬರದೇ ಇದ್ದರೆ, ಈ ನಾಣ್ಯ ನಿನಗೇ ಬಹುಮಾನ ಎಂದರು. ನಿಕೋಲಸ್ ಬಹಳ ಸಂತಸಪಟ್ಟು ಇಡೀ ದಿನ ಒಳ್ಳೆಯವನಾಗಿದ್ದ. ಯಾರು ಎಷ್ಟೇ ಕೀಟಲೆ ಮಾಡಿದರೂ ಸುಮ್ಮನಿದ್ದ. ಮರುದಿನ ವಾಷಿಂಗ್ಟನ್ ಅವರು ನಿಕೋಲಸ್‌ನನ್ನು ಕರೆದು, ಒಂದು ಚಿನ್ನದ ನಾಣ್ಯಕ್ಕಾಗಿ ಇಡೀ ದಿನ ಒಳ್ಳೆಯವನಾಗಿಬಿಟ್ಟೆ. ಅಭಿನಂದನೆಗಳು. ಜನರಿಗೋಸ್ಕರ ನಿನ್ನ ಇಡೀ ಬದುಕನ್ನೇ ಬಂಗಾರದ ಬದುಕನ್ನಾಗಿ ಮಾಡಬಾರದೇಕೆ ಎಂದು ಪ್ರಶ್ನಿಸಿದಾಗ ನಿಕೋಲಸ್‌ನ ಹೃದಯ ತುಂಬಿ ಬಂತು. ಹಾಗೇ ಆಗಲಿ ಸಾರ್ ಅಂದು ಬಿಟ್ಟ.


ಮಾನವರನ್ನು ಒಳ್ಳೆಯ ಪುರಸ್ಕಾರದಿಂದಲೂ ತಿದ್ದಬಹುದು ಎಂಬುದಕ್ಕೆ ಇದೊಂದು ದೃಷ್ಟಾಂತ. ಶಿಕ್ಷಣ ರಂಗದಲ್ಲಿ ಅಧ್ಯಾಪಕರು ಮಕ್ಕಳಿಗೆ ತಪ್ಪು ಮಾಡಿದಾಗ ಶಿಕ್ಷೆಯನ್ನೂ, ಒಳ್ಳೆಯ ಕೆಲಸ ಮಾಡಿದಾಗ ಬಹುಮಾನವನ್ನೂ ಕೊಟ್ಟು ತಿದ್ದುತ್ತಾರೆ.ಇದೇ ರೀತಿಯಲ್ಲಿ ಮಾನವ ಸಮಾಜವನ್ನು ತಿದ್ದಲು ಸಾಧ್ಯ. ಸೂಕ್ತ ರೀತಿಯಲ್ಲಿ ತಿದ್ದಿದಾಗ ಬದುಕು ಬಂಗಾರವಾಗಲು ಸಾಧ್ಯ.


ಕೃಪೆ:ಡಾ.ಡಿ.ವೀರೇಂದ್ರ ಹೆಗ್ಗಡೆ.

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು