ಕಥೆ-505
ಇಂದ್ರಿಯ ನಿಗ್ರಹ
ಅಮೇರಿಕದೋಳೊಬ್ಬಳು ಪ್ರೊಪೋಸ್ ಮಾಡಿದಾಗ ಸ್ವಾಮಿ ವಿವೇಕಾನಂದ ನಡ್ಕೊಂಡ ರೀತಿ .
ಒಂದ್ಸಲಿ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಬಗ್ಗೆ ಭಾಷಣ ಮಾಡಕ್ಕೆ ಅಮೇರಿಕಕ್ಕೆ ಹೋಗಿದ್ರಂತೆ. ಅವರ ಬುದ್ಧಿವಂತಿಕೆ ನೋಡಿ ನಿಬ್ಬೆರಗಾದ ಅಮೇರಿಕನ್ ಹೆಂಗಸೊಬ್ಬಳಿಗೆ ಒಂದು ವಿಚಿತ್ರವಾದ ಆಸೆ ಶುರುವಾಯಿತಂತೆ.
ಹೋಗಿ ಕೇಳೇ ಬಿಟ್ಳಂತೆ, ‘ನನ್ನ ಮದುವೆ ಆಗ್ತೀರಾ?’ ಅಂತ.
ಆಗ ವಿವೇಕಾನಂದರು ‘ಈ ಯೋಚನೆ ಯಾಕೆ ಬಂತು?’ ಅಂದ್ರಂತೆ.
ಅದಕ್ಕೆ ಆಕೆ, ‘ನಿಮ್ಮ ಬುದ್ಧಿವಂತಿಕೆ ನೋಡಿ ನಾನು ಮೂಕವಿಸ್ಮಿತಳಾಗಿಬಿಟ್ಟಿದೀನಿ. ನನಗೆ ನಿಮ್ಮ ಥರಾನೇ ಒಂದು ಮಗು ಬೇಕು, ಕೊಡ್ತೀರಾ? ನನ್ನ ಮದುವೆ ಆಗ್ತೀರಾ?’ ಅಂದಳಂತೆ.
ಆಗ ವಿವೇಕಾನಂದರು ಥಟ್ಟಂತ ಕೊಟ್ಟ ಉತ್ತರ ಹೀಗಿತ್ತಂತೆ:
‘ನಿಮ್ಮ ಆಸೆ ನನಗೆ ಅರ್ಥ ಆಯಿತು. ಆದರೆ ಅಂಥ ಒಂದು ಮಗೂನ ಹೆರೋದು... ಅದು ಬುದ್ಧಿವಂತವಾಗಿದೆಯೋ ಇಲ್ಲವೋ ಅಂತ ಅರ್ಥ ಮಾಡ್ಕೊಳೋದು... ಇದೆಲ್ಲ ಬಹಳ ದೊಡ್ಡ ಪ್ರಕ್ರಿಯೆ... ತುಂಬಾ ಸಮಯ ತೊಗೊಳೋ ಕೆಲಸ... ಕೊನೆಗೆ ಬೇಕಾದ ಫಲ ಸಿಗದೇನೂ ಇರಬಹುದು. ಆದ್ದರಿಂದ ಅದಕ್ಕಿಂತ ಒಳ್ಳೇ ಆಯ್ಕೆ ಕೊಡ್ತೀನಿ, ಕೇಳಿ: ನಿಮಗೆ ನನ್ನ ಥರ ಇರೋ ಬುದ್ಧಿವಂತ ಮಗು ಬೇಕು ತಾನೇ? ನಾನೇ ಇದೀನಲ್ಲ, ನನ್ನೇ ನಿಮ್ಮ ಮಗುವಾಗಿ ಸ್ವೀಕರಿಸಿಕೊಂಡು ಬಿಡಿ... ನನ್ನ ತಾಯಿಗೆ ಸಮಾನ ನೀವು... ಇದರಿಂದ ನಿಮ್ಮ ಆಸೆ ಈಡೇರಿ ನೆಮ್ಮದಿ ಸಿಗುತ್ತದೆ...’
ಉತ್ತರ ಕೇಳಿ ಆಕೆ ದಂಗಾದಳು!
ವಿವೇಕಾನಂದರದ್ದು ಅದ್ಭುತ ವ್ಯಕ್ತಿತ್ವ.ಇಂದ್ರಿಯನಿಗ್ರಹದಲ್ಲಿ ಇಷ್ಟು ಪಳಗಿರುವ ವ್ಯಕ್ತೀನೇ, ಇಂತಹ ಅದ್ಭುತವಾದ ಉತ್ತರ ಕೊಡಕ್ಕೆ ಸಾಧ್ಯ ಅನ್ನೋದರಲ್ಲಿ ಎರಡು ಮಾತಿಲ್ಲ. ಇಂಥವರು ಯಾವಾಗಲೂ ಪೂಜ್ಜನೀಯರಾಗಿರುತ್ತಾರೆ
ಕೃಪೆ : ಕಿಶೋರ್.