ಕಥೆ-507
ಯೋಚನೆ ಯಾವಾಗಲೂ ಎತ್ತರವಾಗಿರಬೇಕು.
ಶ್ರೀಮಂತನ ಕಾರನ್ನು ಒಬ್ಬ ಬಡವ ಬಾಲಕ ನೋಡ್ತಾ ನಿಂತಿದ್ದ, ಶ್ರೀಮಂತನಿಗೆ ಆ ಬಡವ ಬಾಲಕನನ್ನು ನೋಡಿ ಕರುಣೆಯಿಂದ ಕಾರಿನಲ್ಲಿ ಕೂಡಿಸಿಕೊಂಡ.
ಬಾಲಕ;- ನಿಮ್ಮ ಕಾರು ತುಂಬಾ ಚೆನ್ನಾಗಿದೆ
ಶ್ರೀಮಂತ: ಗೊತ್ತು, ಇದನ್ನು ನನ್ನ ಅಣ್ಣ ಗಿಫ್ಟ್ ಕೊಟ್ಟಿದ್ದಾನೆ.
ಬಾಲಕ:ನಿಮ್ ಅಣ್ಣ ತುಂಬಾ ಒಳ್ಳೆಯವರು
ಶ್ರೀಮಂತ: ನಂಗೊತ್ತು ನೀನು ಏನು ಯೋಚಿಸುತ್ತಿದ್ದೀಯಾ ಅಂತ, ನಿಂಗೂ ಈ ತರಹದ ಕಾರು ಬೇಕು ಅನ್ನೊ ಆಸೆ ಅಲ್ವಾ?
ಬಾಲಕ: ಇಲ್ಲ, ನಂಗೂ ನಿಮ್ ಅಣ್ಣನ ತರಹ ಆಗೊ ಆಸೆ, ಏಕೆಂದರೆ ನಂಗೂ ತಮ್ಮ ಹಾಗೂ ತಂಗಿ ಇದ್ದಾರೆ.. ಕೇವಲ ಸ್ವಾರ್ಥ ಆಸೆ ಇರಬಾರದು, ನಮ್ಮ ಆಲೋಚನೆ ಮತ್ತು ಯೋಚನೆ ಯಾವಾಗಲೂ ಎತ್ತರವಾಗಿರಬೇಕು. ಅವು ಗೊತ್ತಾಗದ ಹಾಗೆ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ.👍