Wednesday, September 4, 2024

 ಕಥೆ-508

ಸಮಯ ಪ್ರಜ್ಞೆ

ಸಮಯ ಎಂಬುದು ನಿಂತ ನೀರಲ್ಲ. ಸಮಯಕೋಸ್ಕರ ನಾವೂ ಕಾಯಬೇಕೆ ಹೊರತು ಸಮಯ ನಮಗಾಗಿ ಕಾಯುವುದಿಲ್ಲ. `ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು~ ಎಂಬ ನಾಣ್ಣುಡಿಯಂತೆ ಒಂದು ಬಾರಿ ಹೋದ ಸಮಯ ಮತ್ತೆಂದಿಗೂ ನಮ್ಮ ಜೀವನದಲ್ಲಿ ಬಾರದು.

ಸಮಯ ಪ್ರಜ್ಞೆ ಇರದೇ ಹೋದರೆ ಜೀವನದಲ್ಲಿ ಏನನ್ನೂ ಸಾಧಿಸಲಾಗದು. ಸಮಯದ ಪರಿಮಿತಿಯಲ್ಲಿ ಸದುಪಯೋಗ ಪಡಿಸಿಕೊಳ್ಳದಿದ್ದರೆ ಅದರಿಂದಾಗುವ ಹಾನಿ, ಹಿಂಸೆ, ಆತಂಕ, ಮುಜುಗರ, ಎಚ್ಚರಿಕೆ ಮರೆಯಲಾರದಂತಾಗುತ್ತದೆ.

ಶಿವಯ್ಯ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿ ಇಂತಹ ಅನುಭವ ಆಗಿತ್ತು. ಪ್ರತಿ ಸೆಮಿಸ್ಟರ್ ಪರೀಕ್ಷೆ ಆರಂಭವಾಗುವುದಕ್ಕಿಂತ ಮುಂಚೆಯೇ, ಪಠ್ಯಕ್ರಮದ ಪ್ರಾಯೋಗಿಕ ವಿಷಯಗಳಿಗೆ ಸಂಬಂಧಿಸಿದ ವರದಿ ಸಿದ್ಧಪಡಿಸಿ ಪತ್ರಿಕೋದ್ಯಮ ವಿಭಾಗಕ್ಕೆ ಸಲ್ಲಿಸಬೇಕಾಗಿತ್ತು.

  ಅವರು ಪರೀಕ್ಷೆ ಆರಂಭಕ್ಕೆ 10 ದಿನಗಳಿರುವಾಗಲೇ ಬರೆದು ಮುಗಿಸಿದ್ದರು. ಅವರ ಸ್ನೇಹಿತರಲ್ಲಿ ಮೂರ್ನಾಲ್ಕು ಜನ ಅವರದೇ ವರದಿ ಆಧರಿಸಿ ಬರೆದಿದ್ದರು. ಆದರೆ, ಅವರೆಲ್ಲ ವಿಳಂಬ ಇಲ್ಲದೇ ವರದಿ ಸಲ್ಲಿಸಿದ್ದರು. ಆದರೆ, ನಿರ್ಲಕ್ಷ್ಯ, ಸೋಮಾರಿತನದಿಂದಾಗಿ ಪರೀಕ್ಷೆ ಆರಂಭಕ್ಕೆ ಎರಡು ದಿನ ಇರುವಾಗ ವರದಿ ಸಲ್ಲಿಸಲು ಪತ್ರಿಕಾ ವಿಭಾಗಕ್ಕೆ ಹೋದಾಗ, ಸಮಯ ಮೀರಿದೆ. ವಿಭಾಗದ ಮುಖ್ಯಸ್ಥರ ಅನುಮತಿ ಪತ್ರ ತಗೊಂಡು ಬಂದ್ರೆ, ವರದಿ ಸ್ವೀಕರಿಸುತ್ತೇನೆ. ಇಲ್ಲಂದ್ರೆ ಇಲ್ಲ ಎಂದು ಉಪನ್ಯಾಸಕರು ಕಡ್ಡಿ ಮುರಿದಂತೆ ಹೇಳಿ ಮರಳಿ ಕಳಿಸಿದ್ದರು. ಸ್ನೇಹಿತರ ಸಮಯ ಪ್ರಜ್ಞೆಯು ಅವರನ್ನು ಮತ್ತಷ್ಟು ನಾಚಿಸುವಂತೆ ಮಾಡಿತ್ತು.

ಮುಖ್ಯಸ್ಥರನ್ನು ಭೇಟಿಯಾಗಲು ಭಯ. ಆತಂಕದಿಂದಲೇ ಅವರ ಚೇಂಬರ್‌ಗೆ ಹೋದರು. ನಮಸ್ಕಾರ ಸರ್, ಎಂದೊಡನೆ ಏನು ವಿಷಯ ಎಂದು ಕೇಳಿದರು. ಸರ್ ವರದಿ ಸಲ್ಲಿಸಬೇಕು ಅಂದರು. ಇದಕ್ಕೆ ಮುಖ್ಯಸ್ಥರು ನಾಡಿದ್ದು ಪರೀಕ್ಷೆ ನಿಮಗೆ ಸ್ವಲ್ಪನಾದರೂ ಸಮಯ ಪ್ರಜ್ಞೆ ಇದೆಯೇ.ಒಬ್ಬ ಪತ್ರಕರ್ತ ಸಮಯ ಪ್ರಜ್ಞೆ ಹೊಂದಿದ್ದರೆ ಮಾತ್ರ ಪತ್ರಿಕಾ ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯ. ಒಂದು ಕಾರ್ಯಕ್ರಮಕ್ಕೆ ಸುದ್ದಿ ಮಾಡಲು ಹೋಗಿದ್ದಾಗ, ಕಾರ್ಯಕ್ರಮದ ಉದ್ಘಾಟನೆ ಸಂದರ್ಭ, ಅಧ್ಯಕ್ಷ, ಅತಿಥಿಗಳ ಭಾಷಣ ಮುಗಿದ ಮೇಲೆ ಹೋದ್ರೆ ಏನು ವರದಿ ಮಾಡುವಿರಿ. ಹೀಗೆ ಮಾಡಿದಾಗ ಪತ್ರಿಕಾ ಸಂಸ್ಥೆ ನಿಮ್ಮ ಮೇಲೆ ನಂಬಿಕೆ ಇಡುತ್ತದೆಯೇ ? ಸಮಯವನ್ನು ನಾವೂ ಸದುಪಯೋಗ ಮಾಡಿಕೊಳ್ಳಬೇಕು ಎಂದೆಲ್ಲಾ ಛೀಮಾರಿ ಹಾಕಿ ಕಳಿಸಿದರು. 200 ರೂಪಾಯಿ ದಂಡ ಪಾವತಿಸಿ ವರದಿ ಸ್ವೀಕರಿಸಿ ಎಂದು ಉಪನ್ಯಾಸಕರಿಗೆ ಸೂಚಿಸಿದರು.

ವಿ.ವಿ ಆವರಣದಲ್ಲಿರುವ ಬ್ಯಾಂಕ್‌ನಲ್ಲಿ ರೂ 200 ಕಟ್ಟಿದರು ಶಿವಯ್ಯ. ಅವರಿಗೆ ಹಣ ಹೋಗಿದ್ದು ಬೇಜಾರಾಗಿರಲಿಲ್ಲ. ಆದರೆ ಅವರದೇ ವರದಿ ನೋಡಿ ಬರೆದಿದ್ದ ಸ್ನೇಹಿತರು ಮುಂಚಿತವಾಗಿ ವರದಿ ಸಲ್ಲಿಸಿದ್ದರು. ಆದರೆ ಮೊದಲು ಬರೆದರೂ ನಿರ್ಲಕ್ಷ್ಯ, ಸೋಮಾರಿತನದಿಂದ 200 ರೂಪಾಯಿ ದಂಡ ಕಟ್ಟಿದ್ದೆನಲ್ಲ ಎಂಬ ಕೊರಗು, ಮುಜುಗರ ಕೆಲವು ದಿನಗಳು ಕಾಡುತ್ತಲೇ ಇತ್ತು.  

ಐದು ನಿಮಿಷದ ಮಹತ್ವ ತಿಳಿಯಬೇಕಾದರೆ ರೈಲು, ವಿಮಾನ ತಪ್ಪಿಸಿಕೊಂಡವರಿಗೆ ಗೊತ್ತಿರುತ್ತದೆ. ಒಂದು ವರ್ಷದ ಮಹತ್ವ ತಿಳಿಯಬೇಕಾದರೆ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗೆ ಗೊತ್ತು ಅದರ ಅನುಭವ. 

ಹಣ ಕಳೆದುಕೊಂಡರೆ ಮತ್ತೆ ಪಡೆಯಬಹುದು. 

ಸಮಯ ಹೋದರೆ ಅದನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ನಾವು ಜೀವನದಲ್ಲಿ ಯಾರಿಂದಲೂ ಕಲಿಯಲಾರದ್ದನ್ನು ಸಮಯ-ಸಂದರ್ಭ ಕಲಿಸುತ್ತದೆ. ಸಮಯ ನಿಲ್ಲದ ಹೊತ್ತುವಿನಂತೆ. ಅದನ್ನು ನಾವೇ ಅನುಸರಿಸಿಕೊಂಡು ಹೋದಾಗ ಮಾತ್ರ ಸಮಯ ನಮ್ಮ ಸ್ವತ್ತಾಗುತ್ತದೆ. ಆಗ ಯಶಸ್ಸು ನಮ್ಮದಾಗುತ್ತದೆ.👍

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು