Thursday, September 5, 2024

 ಕಥೆ-509

ದೀರ್ಘದಂಡ ನಮನಗಳು

ಅರಿಸ್ಟಾಟಲ್ ಮತ್ತು ಅಲೆಕ್ಸಾಂಡರ್ ಒಂದು ದಿನ ನದಿ ತೀರದಲ್ಲಿ ಹೋಗುತ್ತಾ ಇರುವಾಗ ಆ ನದಿಯಲ್ಲಿ ಒಬ್ಬ ಮನುಷ್ಯನು ತೇಲಿ ಹೋಗುತ್ತಿರುತ್ತಾನೆ . ಅರಿಸ್ಟಾಟಲ್ ನದಿಗೆ ಹಾರಿ ಅವನನ್ನು ರಕ್ಷಣೆ ಮಾಡಬೇಕು ಅನ್ನುವಷ್ಟರಲ್ಲಿ ಅಲೆಕ್ಸಾಂಡರ್ ನದಿಗೆ ಹಾರಿ ಅವನನ್ನು ರಕ್ಷಣೆ ಮಾಡುತ್ತಾನೆ.ಆಗ ಅರಿಸ್ಟಾಟಲ್ ಕೇಳುತ್ತಾನೆ . ಶಿಷ್ಯ ನೀನೇಕೆ ಹೋದೆ ? ನಿನಗೇನಾದರು ಆದರೆ ನಾನು ನಿನ್ನಂಥ ಶಿಷ್ಯನನ್ನು ಕಳೆದುಕೊಳ್ಳುತ್ತಾ ಇದ್ದೆ ಎಂದರು. ಆಗ ಅಲೆಕ್ಸಾಂಡರ್ ಹೇಳುತ್ತಾನೆ . ಗುರುಗಳೇ ನೀವು ನನ್ನನ್ನು ಕಳೆದುಕೊಂಡರೆ ನನ್ನಂಥ ನೂರಾರು ಶಿಷ್ಯರನ್ನು ತಯಾರು ಮಾಡಬಹುದು . ಆದರೆ ನಿಮ್ಮನ್ನು ಈ ಲೋಕ ಕಳೆದುಕೊಂಡರೆ ಅದೆಷ್ಟೋ ಜನ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿತ್ತು ಎಂದನು...


ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ |


ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ|


ಗುರುವೇ ಬ್ರಹ್ಮ, ಗುರುವೇ ವಿಷ್ಣು ಮತ್ತು ಗುರುವೇ ಶಂಕರ. ಗುರುವೇ ನಿಜವಾದ ಪರಮ ಬ್ರಹ್ಮ.


 ನನ್ನ ವೈಯಕ್ತಿಕ ಜೀವನದಲ್ಲಿ ಮಾರ್ಗದರ್ಶನ ನೀಡಿದ ಮತ್ತು ಬೋಧನೆ ಜೊತೆಗೆ, ನೈತಿಕ ಮೌಲ್ಯಗಳು ಮತ್ತು ಶಿಸ್ತನ್ನು ದಯಪಾಲಿಸಿದ ನನ್ನ ಪ್ರೀತಿಯ ಶಿಕ್ಷಕ ಬಳಗಕ್ಕೆ ಧನ್ಯವಾದ ಹೇಳುತ್ತಾ,ಅವರಿಗೆ ನನ್ನ ದೀರ್ಘದಂಡ ನಮನಗಳು... 


ಶಿಕ್ಷಕರನ್ನು ಗೌರವಿಸಲು ಪ್ರತಿ ವರ್ಷ ಸೆಪ್ಟೆಂಬರ್ 5 ಅನ್ನು ಆಚರಿಸಲಾಗುತ್ತದೆ

ನಮ್ಮ ಎರಡನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಭಾರತದಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಡಾ. ರಾಧಾಕೃಷ್ಣನ್ ಅವರು ಭಾರತದ ಮೊದಲ ಉಪರಾಷ್ಟ್ರಪತಿಯಾಗಿದ್ದರು. ಅವರು ಶ್ರೇಷ್ಠ ವಿದ್ವಾಂಸರೂ, ಆದರ್ಶ ಶಿಕ್ಷಕರೂ, ಭಾರತರತ್ನ ಪುರಸ್ಕೃತರೂ ಆಗಿದ್ದರು. ಅವರು 5 ನೇ ಸೆಪ್ಟೆಂಬರ್ 1988 ರಂದು ಜನಿಸಿದರು. ಇದು ಭಾರತದ ರಾಷ್ಟ್ರಪತಿಯಾದ ನಂತರ, ಅವರ ಕೆಲವು ಸ್ನೇಹಿತರು ಮತ್ತು ವಿದ್ಯಾರ್ಥಿಗಳು ಅವರ ಜನ್ಮದಿನವನ್ನು ಆಚರಿಸಲು ಡಾ. ರಾಧಾಕೃಷ್ಣನ್ ಅವರನ್ನು ಸಂಪರ್ಕಿಸಿದರು. ಇದಕ್ಕೆ ಉತ್ತರಿಸಿದ ಅವರು, ಈ ನಿರ್ದಿಷ್ಟ ದಿನಾಂಕದಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸುವ ಬದಲು, ಸೆಪ್ಟೆಂಬರ್ 5 ರಂದು ಭಾರತದಾದ್ಯಂತ ಶಿಕ್ಷಕರ ದಿನವನ್ನು ಆಚರಿಸಿದರೆ ಅದು ಅವರ ವಿಶೇಷತೆಯಾಗಿದೆ. ಅದರ ನಂತರ, ಉತ್ತಮ ಭವಿಷ್ಯಕ್ಕಾಗಿ ನಮ್ಮನ್ನು ಪೋಷಿಸುವ ಮತ್ತು ಸಿದ್ಧಪಡಿಸುವ ನಮ್ಮ ಪ್ರೀತಿಯ ಶಿಕ್ಷಕರನ್ನು ಗೌರವಿಸಲು ಪ್ರತಿ ವರ್ಷ ಸೆಪ್ಟೆಂಬರ್ 5 ಅನ್ನು ಆಚರಿಸಲಾಗುತ್ತದೆ

ವರ್ಷಕ್ಕೊಮ್ಮೆ ಸೆಪ್ಟೆಂಬರ್ 5 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಆದರೆ ವಿದ್ಯಾರ್ಥಿಗಳಿಗೆ ವರ್ಷದ ಪ್ರತಿಯೊಂದು ದಿನವೂ ಶಿಕ್ಷಕರನ್ನು ಗೌರವಿಸುವ ಮನೋಭಾವ ಮತ್ತು ಅದರ ಅನುಕರಣೆ ಇದ್ದೇ ಇರುತ್ತದೆ. ಆದರೆ ವಿಶೇಷವಾಗಿ ಇದನ್ನು ಆಚರಿಸಲು ಸಪ್ಟೆಂಬರ್ 5 ಒಂದು ಉತ್ತಮ ದಿನವಾಗಿದೆ.


*Plants develop by cultivation, Man by education"*


ಜೀವನದಲ್ಲಿ ಈಸಬೇಕು, ಇದ್ದು ಜಯಿಸಬೇಕು ಇದಕ್ಕೆ ಶಿಕ್ಷರ ಮಾರ್ಗದರ್ಶನ ಬೇಕೇಬೇಕು. ಹಾಗಾದರೆ ಶಿಕ್ಷಕ ಎಂದರೆ ಯಾರು? ಹೆಸರೇ ಸೂಚಿಸುವಂತೆ            

ಶಿ-ಶಿಸ್ತು            

ಕ್ಷ-ಕ್ಷಮೆ              

ಕ-ಕರುಣೆ ,


  ಶಿ-ಶಿಸ್ತುಗಾರನಾಗಿ ವಿದ್ಯಾರ್ಥಿಗಳ ಜ್ನಾನದಾಹಕ್ಕೆ ತಕ್ಕಂತೆ

  ಕ್ಷ-ಕ್ಷಣ ಕ್ಷಣಕ್ಕು ಉಲ್ಲಾಸ ಬರಿತನಾಗಿ

 ಕ-ಕಠಿಣವಾದದ್ದನ್ನು ವಿದ್ಯಾರ್ಥಿಗಳ ಮನಸ್ಸಿಗೆ ನಾಟುವಂತೆ ಬಿಡದೇ ಪಠಿಸುವವನೇ ಶಿಕ್ಷಕ.

 

ಮುದ್ದು ಮಕ್ಕಳ ಮನಸ್ಸನ್ನು ಅರಿತು ಅವರನ್ನು ಪ್ರಗತಿಯೆಡೆಗೆ ಕೊಂಡೊಯ್ಯಬಲ್ಲ ಏಕೈಕ ನೇತಾರನೆ ಶಿಕ್ಷಕ.


ಗುರು ವಚನವೇ ಉಪದೇಶ 

ಗುರು ವಚನವೇ ಭಕ್ತಿ 

ಗುರು ವಚನವೇ ಮೋಕ್ಷ ಮಾರ್ಗ 

ಇವು ತಾನು ಪರಮಾರ್ಥ ಕಾಣ ಸರ್ವಜ್ಞ.

ಇದು ಗುರುಗಳ ಶ್ರೇಷ್ಠತೆಯನ್ನು ತೋರುತ್ತದೆ

ಭಾರತಾಂಬೆಯ ಮಡಿಲಿನ ಎಲ್ಲ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು...💐💐💐💐

ಮತ್ತೊಮ್ಮೆ ನನ್ನ ಪ್ರೀತಿಯ ಗುರು - ಗುರು ಮಾತೆಯರ ಬಳಗದಿಂದ ಆಶಿರ್ವಾದ ಬೇಡುವೆ..

ಇಂತಿ:ಶಂಕರಗೌಡ ಬಸಾಪೂರ 

GHS Hiremyageri 

🙏🙏🙏👏👏👏

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು