ಕಥೆ-510
ಅಹಂಭಾವ
‘ಫಿಲಿಬ್’ ನು ಮೆಸೆಡೋನಿಯಾ ರಾಜ್ಯದ ದೊರೆ ಆಗಿದ್ದ. ಅವನು ಅಲೆಗ್ಜಾಂಡರ್ ನ ತಂದೆ. ಅಥೆನ್ಸ್ ಪಟ್ಟಣದ ಸುತ್ತಮುತ್ತ ಸುವಿಸ್ತಾರ ರಾಜ್ಯ ಕಟ್ಟಿದ್ದ. ಅಪಾರ ಸಿರಿ ಸಂಪದವಿತ್ತು ಯಾವುದಕ್ಕೂ ಏನೂ ಕೊರತೆ ಇರಲಿಲ್ಲ. ಮಹಾಶೂರ, ವೀರ, ಧೀರನೆಂಬ ಬಿರುದಾಂಕಿತನಾಗಿದ್ದ. ಅಂಥ ಫಿಲಿಬ್ ದೊರೆ ತಾನು ಮಲಗುವ ಕೋಣೆಯ ಮೇಲೆ ಒಂದು ಫಲಕ ಹಾಕಿದ್ದ. “ನೆನಪಿರಲಿ; ನೀನು ಮನುಷ್ಯ ಮಾತ್ರ!” ಎಂದು ಅದರ ಮೇಲೆ ಬರೆಯಲಾಗಿತ್ತು. ಪ್ರತಿನಿತ್ಯ ಮಲಗುವಾಗ ಫಿಲಿಬ್ ದೊರೆ ಅದನ್ನು ಓದಿ, ಸ್ವಲ್ಪ ಹೊತ್ತು ಅದರ ಮೇಲೆ ಚಿಂತನೆ ಮಾಡಿ ಮಲಗುತ್ತಿದ್ದ. ಒಂದು ದಿನ ಮಗ ಅಲೆಗ್ಜಾಂಡರ್ ಕೇಳಿದ; “ತಂದೆಯೇ, ನೀವು ಬರೆಯಿಸಿರುವ ಈ ಫಲಕದ ಉದ್ದೇಶವೇನು?” ಫಿಲಿಬ್ ಹೇಳಿದ “ನಾನು ಎಲ್ಲರಿಗಿಂತ ವಿಶೇಷನೆಂಬ ಅಹಂಭಾವ ಮೂಡದಿರಲಿ” ಎಂಬುದೇ ಅದರ ಉದ್ದೇಶ.
ಅಹಂಗೆ ಹೋಗಿ ಬ್ರಹ್ಮ ಕೆಟ್ಟ ಎನ್ನುವ ಹಾಗೆ, ನಾವು ಸಣ್ಣ ಪುಟ್ಟ ಕಾರ್ಯ ಮಾಡಿದಾಗ ದೊಡ್ಡ ಅಹಂ, Igo ಭಾವನೆ ನಮ್ಮಲ್ಲಿ ಮೂಡುತ್ತದೆ.. ಈ ಅಹಂ ಭಾವನೆ, ನಮ್ಮನ್ನೇ ಹೊಸಕಿ ಹಾಕುತ್ತದೆ ಅದು ನಮಗೆ ಗೊತ್ತಾಗುವುದಿಲ್ಲ.
ಕೃಪೆ:ಶ್ರೀ ಸಿದ್ಧೇಶ್ವರ ಸ್ವಾಮೀಜಿ,