ಕಥೆ-519
"ಪ್ರಜಾಪ್ರಭುತ್ವ ದಿನ"
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ,
"ಪ್ರಜಾಪ್ರಭುತ್ವಕ್ಕಾಗಿ ಕರ್ನಾಟಕದಲ್ಲಿ ಮಾನವ ಸರಪಳಿ” (ಸಮಾನತೆ, ಭ್ರಾತೃತ್ವ ಮತ್ತು ಸ್ವಾತಂತ್ರ್ಯ) ಎಂಬ ಧೈಯವಾಕ್ಯದೊಂದಿಗೆ
ಬೀದರನಿಂದ ಚಾಮರಾಜನಗರದವರೆಗೆ, ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಗದಗ ಗಡಿಯಲ್ಲಿನ ಬೆಳಗಟ್ಟಿಯಿಂದ ವಿಜಯನಗರ ಗಡಿಯ ಮುನಿರಾಬಾದವರೆಗೆ ಈ ದಿನ ಬೆಳಗ್ಗೆ 8:30 ಗಂಟೆಯಿಂದ 9:30 ಗಂಟೆಯವರೆಗೆ ಮಾನವ ಸರಪಳಿಯನ್ನು ನಿರ್ಮಿಸಲಾಯಿತು.
ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ಸರಕಾರವೇ ಪ್ರಜಾಪ್ರಭುತ್ವ ಸರ್ಕಾರ, ನಮ್ಮ ಆಡಳಿತವನ್ನು ನಾವೇ ಮಾಡಿಕೊಳ್ಳುತ್ತಿದ್ದೇವೆ ಆದರೆ ಪ್ರಜ್ಞಾವಂತರಾದವರು ಮತದಾನದಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿಲ್ಲ ಇದು ವಿಷಾದನೀಯವಾದರೂ ಈ ಮೂಲಕ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ.
ಕಾನೂನುಗಳು ಪ್ರಜೆಗಳ ಹಿತಕ್ಕಾಗಿ ಇದ್ದು, ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಮತದಾನದ ಉದ್ದೇಶ ಪ್ರಜಾಪ್ರಭುತ್ವವನ್ನು ಭದ್ರಗೊಳಿಸಿಕೊಂಡು ಪ್ರಜೆಗಳ ಪ್ರಭುತ್ವವನ್ನು ಸಾಧಿಸಿಕೊಳ್ಳುವುದು.ಮತಚಲಾವಣೆ ನಮ್ಮ ಹಕ್ಕು ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಸರ್ವರ ಪಾಲ್ಗೊಳ್ಳುವಿಕೆ ಅವಶ್ಯವಾಗಿದ್ದು, ಅದರಲ್ಲೂ ಯುವಕರು ಹೆಚ್ಚು ಸಕ್ರಿಯರಾಗಬೇಕು ಹಾಗೂ ಮತದಾನವನ್ನು ಯಾರೂ ಅಸಡ್ಡೆ ಮಾಡದೇ ಈ ಪವಿತ್ರ ಕಾರ್ಯದಲ್ಲಿ ಪಾಲ್ಗೊಳ್ಳಬೇಕು..
ನಮ್ಮ ಮತ, ನಮ್ಮ ಹಕ್ಕು, ನಮ್ಮ ಸರ್ಕಾರ