ಕಥೆ-520
ಈದ್ ಮಿಲಾದ ಶುಭಾಶಯಗಳು
ಪ್ರವಾದಿ ಮಹಮ್ಮದರ ಜನ್ಮದಿನವನ್ನು ಈದ್ ಮಿಲಾದ ಹಬ್ಬವಾಗಿ ಆಚರಿಸಲಾಗುತ್ತಿದೆ.
ಪ್ರವಾದಿ ಮಹಮ್ಮದರು ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಜನಿಸಿದರು. ಕ್ರಿಸ್ತ ಶಕ 540 ಯಲ್ಲಿ ಮೆಕ್ಕಾ ಬಳಿಯ ಹಿರಾ ಎಂಬ ಗುಹೆಯಲ್ಲಿ ಜ್ಞಾನೋದಯವನ್ನು ಪಡೆದರು ಎಂದು ಹೇಳಲಾಗುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಿ ಇಸ್ಲಾಂ ಧರ್ಮವನ್ನು ಸ್ಥಾಪಿಸಿದರು. ಅನೇಕ ಒಳ್ಳೆಯ ಸಂದೇಶವನ್ನು ಜನರಲ್ಲಿ ಸಾರಿದರು. ಸೌದಿ ಅರೇಬಿಯಾವನ್ನು ದೇವರ ಆರಾಧನೆಗೆ ಮೀಸಲಾದ ರಾಜ್ಯವಾಗಿ ಸ್ಥಾಪಿಸಿದರು. ಕ್ರಿ.ಶ. 632 ರಲ್ಲಿ ಅವರ ಮರಣದ ನಂತರ, ಅನೇಕ ಅನುಯಾಯಿಗಳು ಅವರ ಜೀವನ ಮತ್ತು ಬೋಧನೆಗಳನ್ನು ಸ್ಮರಿಸಲು ಹಲವಾರು ಅಧಿಕೃತ ಹಬ್ಬಗಳನ್ನು ಆಚರಿಸಲು ಪ್ರಾರಂಭಿಸಿದರು.
ಮುಸ್ಲಿಮ ಬಾಂಧವರು ಈ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ. ಪ್ರವಾದಿ ಮಹಮ್ಮದರ ಜನ್ಮ ಮತ್ತು ಬೋಧನೆಗಳನ್ನು ನೆನಪಿಟ್ಟುಕೊಳ್ಳಲು, ಚರ್ಚಿಸಲು ಮತ್ತು ಗೌರವಿಸಲು ಸಭೆಗಳನ್ನು ನಡೆಸಲಾಗುತ್ತದೆ. ಅನೇಕ ಭಕ್ತರು ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಶುಭಾಶಯಗಳನ್ನು ಕಳುಹಿಸುತ್ತಾರೆ.
ಈದ್-ಮಿಲಾದ್ ಹಬ್ಬವನ್ನು ಇಸ್ಲಾಮಿಕ್ ಕ್ಯಾಲೆಂಡರ್‌ನ ಮೂರನೇ ತಿಂಗಳಲ್ಲಿ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಅನೇಕ ಸ್ಥಳಗಳಲ್ಲಿ ಮೆರವಣಿಗೆಗಳನ್ನು ಮಾಡಲಾಗುತ್ತದೆ. ಕೆಲವು ಸ್ಥಳಗಳಲ್ಲಿ, ಮಸೀದಿಗಳಲ್ಲಿ ಪ್ರಾರ್ಥನೆಗಳನ್ನು ಮಾಡಲಾಗುತ್ತದೆ. ಈ ದಿನದಂದು ಮಸೀದಿಗಳಲ್ಲಿ ವಿಶೇಷವಾಗಿ ಅಲಂಕರಿಸಲಾಗುವುದು ಮತ್ತು ಪವಿತ್ರ ಪುಸ್ತಕ ಕುರಾನ್ ಅನ್ನು ಓದಲಾಗುತ್ತದೆ. ಅದೇ ಸಮಯದಲ್ಲಿ ಮೊಹಮ್ಮದ್ ಸಾಹೇಬರ ಸಂದೇಶಗಳು ಭಿತ್ತರಿಸಲಾಗುತ್ತದೆ.
ಈ ವಿಶೇಷ ಸಂದರ್ಭದಲ್ಲಿ, ಸಾಂಪ್ರದಾಯಿಕ ರುಚಿಕರವಾದ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಬಡವರಿಗೆ ವಿತರಿಸಲಾಗುತ್ತದೆ. ಈದ್ ಮಿಲಾದ್ ದಿನ ಬಡವರಿಗೆ, ನಿರ್ಗತಿಕರಿಗೆ ದಾನ ಮಾಡುವುದರಿಂದ ಅಲ್ಲಾಹನು ಸಂತೋಷಗೊಳ್ಳುತ್ತಾನೆ. ಆ ಕುಟುಂಬದ ಮೇಲೆ ತನ್ನ ಆಶೀರ್ವಾದವನ್ನು ಕರುಣಿಸುತ್ತಾನೆ ಎನ್ನುವ ನಂಬಿಕೆ ಮುಸ್ಲಿಂ ಬಾಂದವರದ್ದು.
ಎಲ್ಲಾ ಧರ್ಮಗಳು ಸಾರುವ ಸಂದೇಶ ಒಂದೇ ಅದು ಮಾನವನಾಗು.. ಎಂದು👍