ಕಥೆ-522
ಅತಿಥಿ ದೇವೋಭವ
ಇದು ನಿಜವಾಗಿಯು ನಡೆದ ಘಟನೆ ನಮ್ಮ ದೇಶ ಅತಿಥಿ ಸತ್ಕಾರಕ್ಕೆ ಪ್ರಸಿದ್ಧಿ. ಶ್ರೀ ಬಾಲ ಗಂಗಾಧರ ತಿಲಕರ ಕಾಲದಲ್ಲಿ ಅವರ ಮನೆಯಲ್ಲೇ ನಡೆದ ಘಟನೆ, ಸಾಮಾನ್ಯವಾಗಿ ಇಂಥವರಿಂದ ನಮ್ಮ ದೇಶದಲ್ಲಿ ಅತಿಥಿ ಸತ್ಕಾರಕ್ಕೆ ಹೆಸರು ಬಂದಿರೋದು, ಅದಕ್ಕೆ ಮಾನ್ಯತೆ ಕೊಡುವುದು ಸಹಜ ಗುಣ ನಮ್ಮ ಭಾರತೀಯರದು . ಇದು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಅದಕ್ಕಾಗಿ ಅತಿಥಿ ದೇವೋಭವ ಎಂದು ಕರೆಯುವುದು..
ಆಗಿನ ಕಾಲದಲ್ಲಿ , ಈಗಿನ ತರಹ ಕಬ್ಬಿಣದ ಕಪಾಟು ಇಲ್ಲ ತಿಜೋರಿ ಇರುತ್ತಿರಲಿಲ್ಲ . ಹಾಗಾಗಿ ನಗ ನಾಣ್ಯಗಳನ್ನು, ಒಡವೆಗಳನ್ನು ಅಕ್ಕಿ ಡಬ್ಬದಲ್ಲಿ ಇಲ್ಲ ಧಾನ್ಯವನ್ನು ಶೇಕರಿಸುವ ದೊಡ್ಡ ದೊಡ್ಡ ಡಬ್ಬಿಗಳಲ್ಲಿ ಶೇಖರಿಸುತಿದ್ದರು.
ಆ ದಿನ ಬೆಳಗ್ಗೆ ತಿಲಕರ ಮನೆಗೆ ಒಬ್ಬ ಭಿಕ್ಷುಕ ಭವತಿ ಭಿಕ್ಷಾಂದೇಹಿ ಎಂದು ಬೇಡುವುದಕ್ಕೆ ಬಂದ,ಭಿಕ್ಷೆ ಹಾಕುವಾಗ ಮನೆಯ ಸೊಸೆ ಅಕ್ಕಿ ಡಬ್ಬದಲ್ಲಿ ಇಟ್ಟಿದ್ದ ಮುತ್ತಿನ ಮೂಗುತಿಯನ್ನು ಕೂಡ ಅಕ್ಕಿಯ ಜತೆಗೆ ಭಿಕ್ಷುಕನ ಪಾತ್ರೆಗೆ ಹಾಕಿ ಬಿಡುತ್ತಾಳೆ. ಭಿಕ್ಷೆ ಹಾಕಿದ ಸೊಸೆಗೂ , ಭಿಕ್ಶುಕನಿಗೂ ಏನು ಮಾಡುವುದು ತಿಳಿಯದೆ ಇಬ್ಬರೂ ಮೂಕರಾಗಿ ಒಬ್ಬರನ್ನೊಬ್ಬರು ನೋಡುತ್ತಾ ನಿಂತು ಬಿಟ್ಟರು. ಸೊಸೆಗೆ ಕೊಟ್ಟ ಮೂಗತಿಯನ್ನು ಹೇಗೆ ವಾಪಸ್ಸು ಕೇಳುವುದು , ಎಂಬ ಸಂಕೋಚ ಭಿಕ್ಷುಕನಿಗೆ ಆ ಮೂಗುತಿಯನ್ನು ವಾಪಸ್ಸು ಕೊಟ್ಟರೆ ಮನೆಯ ಒಡತಿ ತಪ್ಪಾಗಿ ತಿಳಿದು ಕೊಂಡರೆ ಎಂಬ ಭಯ . ಹಾಗಾಗಿ ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಾ ನಿಂತು ಬಿಟ್ಟರು. ಅಷ್ಟರಲ್ಲಿ ಅಲ್ಲಿಗೆ ಬಂದ ಬಾಲಗಂಗಾಧರ ತಿಲಕರು, ಇವರಿಬ್ಬರ ಸಮಸ್ಯೆಯನ್ನು ಅರಿತು ಕೊಂಡು , ನೋಡಮ್ಮ ನೀನು ಮೂಗತಿಯನ್ನು ದಾನ ಮಾಡಿ ಆಯಿತು. ಅದು ಯಾರಿಗೆ ಸೇರಬೇಕೋ ಅವರಿಗೆ ಸೇರಿದೆ. ಆ ಭಿಕ್ಷುಕನಿಗೆ ಈಗ ಅದರ ಮೇಲೆ ಹಕ್ಕು. ಆ ಭಿಕ್ಷುಕನಿಗೆ ಆ ಮೂಗತಿಯ ಮೇಲೆ ಈಗ ಹಕ್ಕು ಅವನನ್ನು ತೆಗೆದು ಕೊಂಡು ಹೋಗಲು ಹೇಳು ಎಂದು ಸಮಸ್ಯೆ ಬಗೆ ಹರಿಸಿದರು.
ಇದು ಭಾರತೀಯರ ಸಂಸ್ಕೃತಿ . ಇದು ಭಾರತೀಯರ ಉದಾರತೆ. ಇದು ಭಾರತದಲ್ಲಿ ಮಾತ್ರ ಸಾಧ್ಯ. ಪಶ್ಚಿಮ ದೇಶಗಲ್ಲಿ ಹಣ ಮಾಡುವುದು, ತಾನು ಮೊದಲು ಬದುಕ ಬೇಕು,ತಮ್ಮ ಮುಂದಿನ ಭವಿಷ್ಯ ಮುಖ್ಯ, ಸ್ವಾರ್ಥತೆ ಹೆಚ್ಚಿ , ಇಂತಹ ವಿಚಾರ ಮನಸ್ಸಿಗೆ ಬರುವುದು ಕಷ್ಟ.
ನಮ್ಮ ಭಾರತದ ಇತಿಹಾಸದಲ್ಲಿ , ಕಥೆಗಳು ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಿವೆ. ಕೇವಲ ನೀತಿ ಕಥೆಯಾಗದೆ ಅವುಗಳು ನಮಗೆ ದಾರಿ ದೀಪವಾಗಿವೆ. ತೆನಾಲಿ ರಾಮನ ಕಥೆಗಳು, ಪಂಚ ತಂತ್ರ ಕಥೆಗಳು, ಜಾನಪದ ಕಥೆಗಳು, ಅಕ್ಬರ್ ಬೀರಬಲ್ ಕಥೆಗಳು, ಹೀಗೆ ಅನೇಕ ಕಥೆಗಳು ನಮಗೆ ಆದರ್ಶವಾಗಿವೆ. ಅಜ್ಜ ಅಜ್ಜಿಯರ ಜೊತೆ ಬೆಳೆಯುತ್ತಿದ್ದ ಮಕ್ಕಳಿಗೆ ರಾತ್ರಿ ಕಥೆ ಹೇಳಿ ಮಲಗಿಸಿವುದು ಸರ್ವೇ ಸಾಮನ್ಯವಾಗಿತ್ತು. ಈಗ ವಿಭಕ್ತ ಕುಟುಂಬಗಳ ಆರ್ಭಟದಲ್ಲಿ ಮಕ್ಕಳು ಅಜ್ಜ ಅಜ್ಜಿಯರನ್ನು ಮತ್ತು ಕತೆಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ..
ಕೃಪೆ: ಮುಖ ಪುಸ್ತಕ.