ಕಥೆ-523
ಕೊಳೆತು ನಾರುತ್ತಿರುವವರ ಮನಸುಗಳಿಗೆ...
ಒಂದು ದಿನ ಪೂಜಾರಿಯು ದೇವಸ್ಥಾನದಿಂದ ಮನೆಗೆ ಬರುವಾಗ ತುಂಬಾ ನೀರಡಿಕೆಯಾಗಿತ್ತು ಸೀದಾ ಮನೆಗೆ ಬಂದ ಪೂಜಾರಿ ತನ್ನ ಹೆಂಡತಿಗೆ ಹೇಳಿದ
ಪೂಜಾರಿ: ನೀರೂ ತಗೊಂಡ ಬಾ
ಹೆಂಡತಿ : ಹಾ ತಂದೆ
ಪೂಜಾರಿ: ಆಹಾ!! ನೀರೂ ತುಂಬಾ ರುಚಿಯಾಗಿವೆ ಯಾವ ಬಾವಿಯಿಂದ ತಂದಿದಿಯಾ??
ಹೆಂಡತಿ: ಮನೆಯಲ್ಲಿ ನೀರೂ ಇರಲಿಲ್ಲ ಪಕ್ಕದ ಮನೆಯಿಂದ ತಂದೆ
ಪೂಜಾರಿ: ಅರೆ ಶೂದ್ರರ ಮನೆಯ ನೀರೂ ಕುಡಿಸಿದಿಯಾ
(ಪೂಜಾರಿ ಬಾಯಲ್ಲಿ ಕೈ ಹಾಕಿ ನೀರೂ ಹೋರಹಾಕಲು ಕಾರಲು ಪ್ರಯತ್ನಿಸಿದ ನಂತರ ಹೆಂಡತಿಗೆ ಮನ ಬಂದಂತೆ ಬೈದ)
ಹೆಂಡತಿ: ತಪ್ಪಾಯಿತು ಇನ್ನೊಂದು ಸಲ ಹೀಗ್ ಯಾವತ್ತು ಮಾಡಲ್ಲ ಅಂತ ಮಾತು ಕೊಟ್ಲು
(ಮತ್ತೆ ಒಂದು ದಿನ ಹೊರಗಿಂದ ಹಸಿದು ಬಂದ ಪೂಜಾರಿ)
ಪೂಜಾರಿ: ಎ ಊಟ ಬಡಿಸು
ಹೆಂಡತಿ : ಊಟ ಏನೂ ಮಾಡಿಲ್ಲ ಹೊಲದಲ್ಲಿ ಬೆಳೆ ಬೆಳೆಯುವ ರೈತ ಶೂದ್ರ, ಅದ್ಕೆ ನೀವು ಬೈತಿರಂತ ಎಲ್ಲ ಹಿಟ್ಟು ಅಕ್ಕಿ ಬೆಳೆ ಹೊರಗೆ ನಾಯಿಗೆ ಹಾಕಿದ್ದೆನೆ ಮತ್ತು ಕಬ್ಬಿಣ ಕಡಾಯಿ ಕೂಡ ಶೂದ್ರ ಜಾತಿಗೆ ಸೇರಿದವನು ಮಾಡಿದ್ದಾನೆ ಅದು ಹೊರಗೆ ಬಿಸಾಕಿದಿನಿ..
ಪೂಜಾರಿ: ಎಂತಹ ಮುಟ್ಟಾಳಿ ನೀ? ಹೋಗ್ಲಿ ಕುಡಿಯಲು ಹಾಲಾದ್ರು ತಂದು ಕೊಡು
ಹೆಂಡತಿ: ಹಾಲು ಕರೆದಿಲ್ಲ ದನ ಕಾಯುವವನು ಶೂದ್ರ ಜಾತಿಯವನೆ ಅವನು ಆಕಳನ್ನ ಮೈ ತೋಳೆದಿದ್ದಾನೆ ಅದ್ಕೆ ಆಕಳನ್ನ ಹೊರ ಹಾಕಿದಿನಿ
(ಸಿಟ್ಟಿಗೆದ್ದ ಪೂಜಾರಿ )
ಪೂಜಾರಿ: ಅರೆ ಎಲ್ಲವು ಮನೆಯಿಂದ ಹೊರಹಾಕಿದಿ, ಆದ್ರು ಆಕಳ ಹಾಲು ಅಪವಿತ್ರ ಹೇಗೆ ಆಗುತ್ತೆ, ಅದು ಆಕಳ ದೇಹದಿಂದ ಬರುತ್ತಲ್ವೆ??
ಹೆಂಡತಿ: ಹಾಗಾದ್ರೆ ನೀರು ಅಪವಿತ್ರ ಹೇಗೆ ಆಗುತ್ತೆ ಅದು ಭೂಮಿಯಿಂದ ಬರುತಲ್ವೆ??
(ಮತ್ತೆ ಸಿಟ್ಟಿಗೆದ್ದು ಹೆಂಡತಿಯ ಮಾತು ಕೇಳಿ ತನ್ನ ಹಣೆಯನ್ನ ಗೊಡೆಗೆ ಹೊಡುಕೊಂಡು ಹೇಳಿದ)
ಪೂಜಾರಿ: ಮನೆ ಹೊರಗೆ ಮಂಚಾ ಹಾಕು ಅಲ್ಲಿ ನಾ ಮಲಗುವೆ
ಹೆಂಡತಿ: ಮಂಚಾನು ಮುರಿದು ಹೊರ ಬಿಸಾಕಿದಿನಿ ಅದು ಒಬ್ಬ ಶೂದ್ರನಿಂದ ಬಂದಿತ್ತು ಅದ್ಕೆ
ಪೂಜಾರಿ: ಎಲ್ಲನು ಸರ್ವನಾಶ ಮಾಡಿ ಬಿಟ್ಟೆ ಮನೆ ಕೂಡ ಸುಡಬೇಕಾಗಿತ್ತು??
ಹೆಂಡತಿ: ಅರೆ ಹೌದು ಮನೆ ಒಂದೆ ಬಾಕಿ ಉಳಿದಿದೆ ಮನೆ ಕೂಡ ಒಬ್ಬ ಮನೆ ಕಟ್ಟುವವ ಶೂದ್ರ ಜಾತಿಗೆ ಸೇರಿದವ ನೀ ಹೊರಗೆ ಬಾ ಮನೆಗೂ ಬೆಂಕಿ ಹಚ್ಚುವೆ, ಇಲ್ಲಾ ಮನೆ ಜೊತೆ ನಿನಗು ಬೆಂಕಿ ಹಚ್ಚಲೆ??
(ಪೂಜಾರಿಗೆ ತನ್ನ ತಪ್ಪಿನ ಅರಿವಾಗಿ ತನ್ನ ಹೆಂಡತಿಗೆ ಕ್ಷಮೆ ಕೇಳಿದ)
ಈ ಸಂದೇಶ ಇನ್ನುಳಿದ, ಶೀಲ ಮಾಡುವ, ಮಡಿವಂತಿಕೆ ತೋರುವ, ಪೂಜಾರಿಗಳಿಗೆ, ಕೊಳೆತ ಮನಸ್ಸುಗಳಿಗೆ ಮುಟ್ಟಿಸುವ ಮೂಲಕ ಜಾತೀಯತೆ ಶಮನ ಮಾಡೋಣ... ಈಗಲೂ ದೇವಸ್ಥಾನಗಳಲ್ಲಿ ದಲಿತರನ್ನು ಕಂಡರೆ ಸಾಕು ಉರಿದು ಬೀಳುವ ಜನವಿದೆ, ಅಷ್ಟೇ ಏಕೆ ಹೋಟೆಲ್‌ಗಳಲ್ಲಿ, ಕಟಿಂಗ್ ಶಾಪ್ ಗಳಲ್ಲಿ, ಭೇದ ಭಾವ ಮಾಡುವ ಸ್ಥಿತಿಯನ್ನು ಹೋಗಲಾಡಿಸಬೇಕಿದೆ..
ಜನರ ಕೊಳೆತು ನಾರುತ್ತಿರುವವರ ಮನಸಿಗೆ ಮುಟ್ಟಿಸುವ ಪ್ರಯತ್ನ ಮಾಡಬೇಕಿದೆ....👍