Monday, September 30, 2024

 ಕಥೆ-533

ಪಂಡಿತನಿಂದಾಗದ ಉತ್ತರ ಪತ್ನಿಯಿಂದ


ಒಂದು ಸಾರಿ ಒಬ್ಬ ನೇಪಾಳಿ ಪಂಡಿತನಿಗೆ ಅವರ ಗುರುಗಳು ...3...ಪ್ರಶ್ನೆಗಳನ್ನು ಕೇಳಿದರು ...ಮತ್ತು ಹೇಳಿದರು ..,"ನೀನು ಯಾವತ್ತು ..ಈ ಮೂರೂ..ಪ್ರಶ್ನೆ ಗಳಿಗೆ ಯಾವಾಗ .ಉತ್ತರ ಹೇಳುತ್ತಿಯೋ...ಅಂದು..ನಿನಗೆ..ಬ್ರಹ್ಮೋಪದೇಶ..ಮಾಡುತ್ತೇನೆ ..ಎಂದು ಹೇಳಿದರು ..


ಆ ನೇಪಾಳದ ಪಂಡಿತ ..ಪ್ರತಿಯೊಂದು ರಾಜ್ಯಕ್ಕೆ ಹೋಗುವುದು ..3..ಪ್ರಶ್ನೆ ಗಳನ್ನು ಕೇಳುವುದು ..ಉತ್ತರ ದೊರಕದೆ ..ನಿರಾಶನಾಗಿ ..ಮುಂದಿನ ರಾಜ್ಯಕ್ಕೆ ಹೋಗುವುದು ..


ಒಂದು ದಿನ ಹೀಗೆ ಮೈಸೂರ ರಾಜ್ಯಕ್ಕೆ..ಬಂದ. ರಾಜನ ಆಸ್ಥಾನಕ್ಕೆ ಬಂದ..ರಾಜನಿಗೆ..ತನ್ನ ಸಮಸ್ಯೆ ಹೇಳಿದ ..ರಾಜ..ಹೇಳಿದ..,"ಪಂಡಿತರೆ..ನೀವು ನಿಮ್ಮ ..3..ಪ್ರಶ್ನೆ ಗಳನ್ನು ನಮ್ಮ ...ವಿದ್ವಾಂಸರ ಮುಂದೆ ಹೇಳಿ..ಅವರು ಅದಕ್ಕೆ ಸರಿಯಾದ ಉತ್ತರ ಕೊಡುತ್ತಾರೆ .."


ಆ ನೇಪಾಳಿ..ಪಂಡಿತ ಹೇಳಿದ..3..ಪ್ರಶ್ನೆ ಗಳು..


1)..ಎಂಜಲು..ಆಹಾರ ನನಗೆ ಶ್ರೇಷ್ಟ..


2)...ತಿಂದು..ಉಗುಳಿದ್ದು..ನನಗೆ .. ಶ್ರೇಷ್ಟ...


3)..ಹೆಣದ ಬಟ್ಟೆ ..ನನಗೆ ಶ್ರೇಷ್ಟ...


ಪಂಡಿತ ಹೇಳಿದ..ಇವೇ..ನನ್ನ ಗುರುಗಳು ಕೇಳಿದ..ಪ್ರಶ್ನೆ ಗಳು..ನೀವು..ಉತ್ತರ ಸರಿಯಾಗಿ ಹೇಳಿದರೆ ...ನಾನು..ನೇಪಾಳಕ್ಕೆ...ಹೋಗುತ್ತೇನೆ..


ರಾಜ್ಯದ ..ಆಸ್ಥಾನದ ..ವಿದ್ವಾಂಸರು ತಲೆ ಕೆರೆದುಕೊಂಡರು..ಉತ್ತರ ಹೊಳೆಯಲಿಲ್ಲ ..ರಾಜನಿಗೂ ಉತ್ತರ ಹೊಳೆಯಲಿಲ್ಲ ..

ರಾಜನು..3..ದಿವಸ..ಸಮಯ ಕೇಳಿದನು..

ವಿದ್ವಾಂಸರು ತಮ್ಮ ಮನೆಗೆ ಹೋಗಿ..ಎಲ್ಲಾ ಗ್ರಂಥಗಳನ್ನು ..ತಿರುವಿಹಾಕಿದರು.. ಉತ್ತರ ಸಿಗಲಿಲ್ಲ ..

ಒಬ್ಬ ವಿದ್ವಾಂಸರು ಊಟಮಾಡುವದನ್ನು..ಬಿಟ್ಟರು.. ಅವರ ಹೆಂಡತಿ ಕಾರಣ ಕೇಳಿದಳು..ಮತ್ತು ..ಸಹಾಯ ಮಾಡುವೆ..ಎಂದಳು.

ವಿದ್ವಾಂಸರು ಹೇಳಿದರು. "ಎಂಥೆಂಥ ..ವಿದ್ವಾಂಸರಿಗೆ ತಿಳಿಯಲಾರದ್ದು...ನಿನಗೆ ...ಹೇಳಲು.ಬರುತ್ತದೆಯೇ.."


ಹೆಂಡತಿ ಹೇಳಿದಳು.."ಪುರಾಣ ಕಾಲದಲ್ಲಿ ..ಯಾಜ್ಞವಲ್ಕ್ಯ ಮಹರ್ಷಿಗಳ ಜೊತೆ ಯಲ್ಲಿ ವೇದಗಳನ್ನು ಹೇಳುತ್ತಿದ್ದರು ಯಾರು ಗೊತ್ತಾ..?..ಅವರ..ಪತ್ನಿಯರು..


ಗಾರ್ಗೇಯಿ..ಮತು..ಮೈತ್ರೇಯಿ.....ನಾವು..ಸಾಮಾನ್ಯ ಇಲ್ಲ ..ನಿಮ್ಮ ಸಮಸ್ಯೆ ಹೇಳಿ."


ಗಂಡ...3..ಪ್ರಶ್ನೆ ಗಳನ್ನು ಹೇಳಿದ.

ಹೆಂಡತಿ ..ಅವನ್ನು ಕೇಳಿ..ನಕ್ಕಳು..ಅವುಗಳಿಗೆ ಉತ್ತರ ಹೇಳಿದಳು..ಗಂಡ...ಬೆಚ್ಚಿಬಿದ್ದು ...ಆಸ್ಥಾನಕ್ಕೆ ಓಡಿಹೋಗಿ ..ರಾಜನಿಗೆ ಹೇಳಿ ..ಸಭೆ ಕರೆಸಿದ..


ಆ ವಿದ್ವಾಂಸ...ಹೇಳಿದ..ನಿಮ್ಮ ಮೊದಲಿನ ಪ್ರಶ್ನೆಗೆ ...ಎಂಜಲು..ಆಹಾರ ಅಂದರೆ ...ಹಾಲು...ಕರು..ಕುಡಿದ ಮೇಲೆ...ನಾವು..ಹಾಲನ್ನು ಹಿಂಡುತ್ತೇವೆ.

ಎರಡನೆಯ ಪ್ರಶ್ನೆಗೆ ..ತಿಂದು ಉಗುಳಿದ್ದು..ಅಂದರೆ ..ಜೇನುನೊಣ..ಮಕರಂದವನ್ನು ಹೀರಿ..ತನ್ನ..ರಸವನ್ನು ಗೂಡಿನಲ್ಲಿ..ಉಗುಳುತ್ತದೆ.....ಅದೇ..ಜೇನು..

ನಿಮ್ಮ ಮೂರನೆಯ ಪ್ರಶ್ನೆ ಗೆ ಉತ್ತರ .."ಹೆಣದ ಬಟ್ಟೆ ..ಅಂದರೆ ..ರೇಶ್ಮೆ..ಹುಳಗಳನ್ನುಸಾಯಿಸಿ..ಅದರ ಮೇಲಿನ..ಗೂಡಿನಿಂದ...ರೇಶ್ಮೆಯ ದಾರವನ್ನು ತೆಗೆಯುತ್ತಾರೆ.

ರಾಜ ಬಹಳ..ಸಂತೋಷ ಪಟ್ಟು..ಆ ವಿದ್ವಾಂಸರನ್ನು ..ಸನ್ಮಾನಿಸಿ...ಆ.. ನೇಪಾಳದ ಪಂಡಿತನಿಗೆ ..ಸತ್ಕಾರಮಾಡಿ... ಗೌರವದಿಂದ ಕಳುಹಿಸಿದ.. ಕೃಪೆ: ದತ್ತಾತ್ರೇಯ ರಂಗೋಪ.

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು