ಕಥೆ-537
ಮ್ಯಾಗೇರಿಯಲ್ಲಿ ಮಾದರಿ
ಸ್ಮರಣೀಯ ತಾಲೂಕ ಕ್ರೀಡಾಕೂಟ..
ಆಧುನಿಕ ಶೈಕ್ಷಣಿಕ ಸಾಮಾಜಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನಕ್ಕೆ ಮೊದಲ ಆದ್ಯತೆ ನೀಡಬೇಕಾಗಿದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು, ದೈಹಿಕ, ಮಾನಸಿಕ ನೆಮ್ಮದಿಗೆ ಕ್ರೀಡೆ ಹಾಗೂ ಯೋಗದ ಅವಶ್ಯಕತೆ ಇದೆ...
ಕ್ರೀಡೆ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ... ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ, ಸದೃಢವಾದ ಮನಸ್ಸು ಸದೃಢವಾದ ದೇಹದಿಂದ ಸಾಧ್ಯವಾಗುತ್ತದೆ.. ಯಾವ ವ್ಯಕ್ತಿಯಲ್ಲಿ ಸದೃಢವಾದ ಮನಸ್ಸು ಇರುತ್ತದೋ ಆ ವ್ಯಕ್ತಿ ಬಂದಿಲ್ಲ ಒಂದು ರಂಗದಲ್ಲಿ ಸಾಧಕರಾಗಿರುತ್ತಾರೆ.. ಇಂತಹ ಸಾಕಷ್ಟು ಸದೃಢವಾದ ಮನಸ್ಸುಗಳನ್ನು ನಮ್ಮ ಹಿರೇಮ್ಯಾಗೇರಿಯಲ್ಲಿ ಕಾಣಬಹುದು.. ಈ ವರ್ಷದ
2024-25 ಸಾಲಿನ ಯಲಬುರ್ಗಾ-ಕುಕನೂರ ತಾಲೂಕ ಮಟ್ಟದ ಕ್ರೀಡಾಕೂಟವನ್ನು ನಮ್ಮಲ್ಲಿ ಆಯೋಜನೆ ಮಾಡಬೇಕೆಂದು ಹಿರೇಮ್ಯಾಗೇರಿ ಸದೃಢ ಮನಸ್ಸುಗಳು ನಿರ್ಧಾರ ಮಾಡಿಯಾಗಿತ್ತು, ಅದಕ್ಕೆ ಯಾವುದೇ ಅಡೆತಡೆ ಸಾಧ್ಯವಿಲ್ಲ... ಕ್ರೀಡಾಕೂಟಗಳಲ್ಲಿ ಸಾಮಾನ್ಯವಾಗಿ ಜಗಳಗಳಾಗುವುದು ಸಹಜ, ವಿಶೇಷವೆಂದರೆ ಹಿರೇಮ್ಯಾಗೇರಿಯ ಕ್ರೀಡಾಕೂಟದಲ್ಲಿ ಜಗಳಗಳು ಬಲೂ ದೂರ, ಜಗಳಗಳು ಅಗದಂತೆ ಕ್ರೀಡಾಕೂಟ ನಡೆಸಿಕೊಡುವುದು ಹಿರೇಮ್ಯಾಗೇರಿಗೆ ಬಲುಚಂದ.. ಈ ಕ್ರೀಡಾಕೂಟ ಹಿರೇಮ್ಯಾಗೇರಿಗೆ ದೊಡ್ಡ ಹಬ್ಬ..
ಆಟಕ್ಕೆ ತಕ್ಕ ಸಭಾಂಗಣ,
ಆಟಗಳ ರಸದೌತಣ,
ಊಟದ ರಸದೂರಣ..
ಎಷ್ಟೋ ದೈಹಿಕ ಶಿಕ್ಷಣ ಶಿಕ್ಷಕರು ರಾಜ್ಯಮಟ್ಟದ ರೀತಿಯಲ್ಲಿ ತಯಾರಿ ಮಾಡಿದ್ದೀರಿ ಎಂದು ಸಂತೋಷವನ್ನು ವ್ಯಕ್ತಪಡಿಸಿದರು. ನಿಜ, ಬ್ಯಾರಿಕೇಡ್ ಬಳಸಿ ಕ್ರೀಡಾಂಗಣವನ್ನು ಬಣ್ಣ ಬಣ್ಣದಿಂದ ಸಿಂಗಾರಗೊಳಿಸಿದ್ದು ಎಂಥವರನ್ನಾದರೂ ಮನ ಸೆಳೆಯುವ ದೃಶ್ಯವಾಗಿತ್ತು. ಇದರ ತಯಾರಿಗೆ 15 ದಿನಗಳ ಕಾಲ, 200ಕ್ಕೂ ಹೆಚ್ಚು ಯುವಕರು, ಅಲ್ಲದೆ ಕ್ರೀಡಾ ಪ್ರೇಮಿಗಳು,ಹಿರಿಯರು,ದಾನಿಗಳು,ಸಂಘಟಕರು, ಜಾತಿ ಮತ ಬೇಧ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ..
ದೊಡ್ಡ ಕನಸು ನನಸು ಮಾಡಲು ಶ್ರಮಪಡಲೇಬೇಕು. ಹಿರೇಮ್ಯಾಗೇರಿಯಲ್ಲಿ ಕಬಡ್ಡಿ ಆಟ ಅನುವಂಶೀಯವಾಗಿ ಬರ್ತಾ ಇದೆ ಏನೋ ಅನ್ನೊ ಭಾಸವಾಗುತ್ತಿದೆ... ನಮ್ಮ ಹಿರೇಮ್ಯಾಗೇರಿಯಲ್ಲಿ ಅತ್ಯಂತ ಹೆಚ್ಚು ಪ್ರಿಯವಾದ ಶಬ್ದ ಯಾವುದೆಂದರೆ "ಕಬಡ್ಡಿ" ಸಣ್ಣ ಸಣ್ಣ ಮಕ್ಕಳಿಂದ ಬರುವ ಮೊದಲ ಶಬ್ದವೆಂದರೆ ಅದು "ಕಬಡ್ಡಿ" ಇರಬೇಕು.. ಅದರಲ್ಲೂ ಶಾಲಾ ಕಾಲೇಜುಗಳ ಕಬಡ್ಡಿ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಆಡಿರೋ ಪವಾಡಿಗೌಡರ, ಶಿವು ಡಿವಟರ್ ರಂತಹ ಪ್ರತಿಭೆಗಳು ಇವೆ.. ಮುಂದಿನ ದಿನಮಾನಗಳಲ್ಲಿ ರಾಷ್ಟ್ರ, ಅಂತ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂಥಹ ಪ್ರತಿಭೆಗಳು ನಮ್ಮ ಹಿರೇಮ್ಯಾಗೇರಿಯಿಂದ ಹೊರಹೊಮ್ಮಲಿ ಎಂಬುದು ನಮ್ಮೆಲ್ಲರ ಆಶಯ..
ಆದರೆ ಎಷ್ಟೋ ವಿದ್ಯಾರ್ಥಿಗಳು ಆಟದ ಬದಲಾಗಿ ಓದಿನಲ್ಲಿ ಪ್ರತಿಭಾವಂತರಾಗಿದ್ದರೂ ಕಬಡ್ಡಿ ಆಟದ ವ್ಯಾಮೋಹಕ್ಕೆ ಒಳಗಾಗಿ ಓದಿನಲ್ಲಿ ಹಿಂದುಳಿದು ಓದಿನಲ್ಲಿ ಸಾಧನೆ ಮಾಡಬೇಕಾದವರು ಮಾಡಲಾಗುತ್ತಿಲ್ಲ.. ದಿನಾಲು ಕ್ರೀಡಾಂಗಣದಲ್ಲಿರುವಂತೆ ವಿದ್ಯಾರ್ಥಿಗಳು,ಯುವಕರು ಗ್ರಂಥಾಲಯದಲ್ಲಿ ಇರುವಂತಾಗಬೇಕು.. ಕ್ರೀಡೆಗೆ ಇರುವ ಪ್ರೋತ್ಸಾಹ, ಕ್ರೀಡೆಯ ಜೊತೆಗೆ ಓದಿಗೂ,ಸ್ಪರ್ಧಾತ್ಮಕ ಪರೀಕ್ಷೆಗೂ, ವೃತ್ತಿಪರ ಪದವಿಗಳಿಗೂ,ಮತ್ತು ವೈಯಕ್ತಿಕ ವೃತ್ತಿಗಳಿಗೂ,ಊರಿನ ಪರಿಸರಕ್ಕೂ ಕೊಟ್ಟಿದ್ದೆ ಆದರೆ ಹಿರೇಮ್ಯಾಗೇರಿ ಸರ್ವತೋಮುಖ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ..
ತಾನಾಗಿ ಅಥವಾ ಅನಿವಾರ್ಯತೆ ಬಂದಾಗ ಈ ತರಹದ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಚಂದ, ಪದೇ ಪದೇ ಈ ತರಹದ ಕಾರ್ಯಕ್ರಮಗಳನ್ನು ನಾವಾಗಿ ಹಾಕಿಕೊಂಡರೆ ದಾನಿಗಳು ಮತ್ತು ಸಂಘಟಿಕರು ನಿರಾಸಕ್ತಿ ತೋರುತ್ತಾರೆ. ಆಗ ಕಾರ್ಯಕ್ರಮಗಳು ಸಪ್ಪೆಯಾಗುತ್ತವೆ.
ಎರಡು ದಿನಗಳ ಈ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಹೋಳಿಗೆ, ಸಿರಾ ಮತ್ತು ಬುಂದೆಗಳು ಸಿಹಿ ಬೋಜನಕ್ಕೆ ಸಾಕ್ಷಿಯಾದವು... ಹಿರೇಮ್ಯಾಗೇರಿಯಲ್ಲಿ ಮತ್ತೊಂದು ವಿಶೇಷವೇನೆಂದರೆ ಉಚಿತವಾಗಿ ಭೋಜನ ತಯಾರು ಮಾಡಿಕೊಡುವ ತಂಡವಿದೆ ಅವರ ಸೇವಾ ಮನೋಭಾವನೆ ನಿಜಕ್ಕೂ ಶ್ಲಾಘನೀಯ..
ನಮ್ಮ ಹಿರೇಮ್ಯಾಗೇರಿ ಪ್ರೌಢಶಾಲಾ ಬಾಲಕರ ತಂಡ, ತವರು ಆಟವಾದ ಕಬಡ್ಡಿ ಸ್ಪರ್ಧೆಯಲ್ಲಿ ತಾಲೂಕು ಮಟ್ಟ ವಿಜೇತರಾದ ಕ್ಷಣ, ಸಡಗರ ಸಂಭ್ರಮವನ್ನು ಹೊತ್ತು ತಂದಿತ್ತು...
ತಾಲೂಕು ಮಟ್ಟದ ಕ್ರೀಡೆಗಳು ಹಿರೇಮ್ಯಾಗೇರಿಯಲ್ಲಿ ಯಶಸ್ವಿಯಾಗಲು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಭಾಗಿಯಾದವರೆಲ್ಲರೂ ಅಭಿನಂದನಾರ್ಹರು...
ಕ್ರೀಡೆಯಲ್ಲಿ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿದಾಗ ನಾವೆಲ್ಲರೂ ಒಂದೇ ಎಂಬ ಮನೋಭಾವ ಮೂಡುತ್ತದೆ. ಗ್ರಾಮೀಣ ನೈಜ ಪ್ರತಿಭೆಗಳು ಬೆಳೆಯಬೇಕು. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ನಮ್ಮ ಹಿರೇಮ್ಯಾಗೇರಿ ಪ್ರೌಢಶಾಲಾ ಬಾಲಕರ ಕಬಡ್ಡಿ ತಂಡವು ನಾಳೆ ನಡೆಯಲಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಗೆದ್ದು ಬೀಗಲಿ ಎಂದು ಶುಭ ಹಾರೈಸೋಣ...👍
💐💐💐💐💐💐💐💐💐💐💐💐