ಕಥೆ-540
ಅವಿಚಾರದ ಫಲ
ಒಬ್ಬ ಬ್ರಾಹ್ಮಣ ತನ್ನ ಊರಿನಿಂದ ಪರ ಊರಿಗೆ ಪ್ರಯಾಣಿಸುತ್ತಿದ್ದನು. ಆಗ ದಾರಿಯಲ್ಲೇ ಅವನು ನೀರಡಿಕೆ, ಬಿಸಿಲಿನಿಂದ ಬಳಲಿ ಮುಂದೆ ನಡೆಯಾಲಾದನು. ತುಂಬಾ ದಣಿದಿದ್ದರಿಂದ ಮಾರ್ಗ ಮಧ್ಯದಲ್ಲೇ ಇದ್ದ ಒಂದು ಈಚಲ ಮರದ ಕೆಳಗೆ ಕುಳಿತುಕೊಂಡನು.
ಅವನು ಕುಳಿತುಕೊಂಡ ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿಗೆ ಒಬ್ಬ ಹಾಲಿನ ವ್ಯಾಪಾರಿ ಬಂದನು. ಆಗ ಆ ಬ್ರಾಹ್ಮಣನು ಹಾಲು ಮಾರುವವನ ಬಳಿ ಬಂದು ಹಾಲನ್ನು ಕೊಂಡುಕೊಂಡನು. ಹಾಲು ಮಾರುವವನು ಹೋದ ನಂತರ ಅವನು ಈಚಲ ಮರದ ಕೆಳಗೆ ಕುಳಿತು ಹಾಲು ಕುಡಿಯತೊಡಗಿದನು.
ಆಗ ಅದೇ ಹಾದಿಯಲ್ಲೇ ಹೋಗುತ್ತಿದ್ದ ನಾಲ್ಕಾರು ಅವನ ಪರಿಚಯಸ್ಥರು ಅವನು ಕುಡಿಯುತ್ತಿರುವುದು ಹೆಂಡ ಎಂದು ಭಾವಿಸಿ ಊರಿಗೆ ತೆರಳಿ ಎಲ್ಲರ ಬಳಿಯೂ ಅವನು ಹೆಂಡ ಕುಡಿಯುತ್ತಾನೆ ಎಂದು ಹೇಳಿದರು
ಬ್ರಾಹ್ಮಣನು ಊರಿಗೆ ಹೋದ ಮೇಲೆ ಜನರು ಅವನನ್ನು ಭ್ರಷ್ಟನೆಂದು ಹೀಯಾಳಿಸಿ, ಹಿಂಸೆ ನೀಡಿ, ಅವನನ್ನು ಗಡಿಪಾರು ಮಾಡಿದರು.
ನಾವು ಒಂದು ಕೆಟ್ಟ ಸ್ಥಳದಲ್ಲಿ ಕುಳಿತು ಒಳ್ಳೆ ಕೆಲಸ ಮಾಡಿದರೂ ಅದು ಕೆಟ್ಟದ್ದಾಗಿಯೇ ಪರಿಣಮಿಸುತ್ತದೆ. ಅದರಂತೆ
ನಾವು ಒಳ್ಳೆಯವರಾಗಿದ್ದು ದುಷ್ಟರೊಂದಿಗೆ ಸ್ನೇಹವನ್ನು ಮಾಡಿದರೆ ನಮ್ಮನ್ನು ದುಷ್ಟರೆಂದು ತಿಳಿಯುತ್ತಾರೆ.
ಕೃಪೆ :ಕಿಶೋರ್.