ಕಥೆ-544
ಉಪ್ಪಿನ ಋಣ ತೀರಿಸಿದ, ಉಕ್ಕಿನ ಗುಣ ತೋರಿಸಿದ..
ದೇಶಕ್ಕಾಗಿ ಮಿಡಿದ ಮಹಾ ಚೇತನ, ಜಗತ್ತಿನ ನಂಬರ್-1 ಶ್ರೀಮಂತರಾಗಬೇಕಿದ್ದ ಅವರು, ಜಗತ್ತಿನ ನಂಬರ್-1 ಹೃದಯ ಶ್ರೀಮಂತರಾದವರು, ಅವರೇ ರತನ್ ಟಾಟಾ..
ರತನ್ ಟಾಟಾ ಅವರು ಯುವ ಉದ್ಯಮಿಗಳಿಗೆ ಪ್ರಮುಖ ಸ್ಫೂರ್ತಿಯಾಗಿದ್ದಾರೆ ಮತ್ತು ಅವರ ಲೋಕೋಪಕಾರಿ ಕೊಡುಗೆಗಳು ಜಾಗತಿಕ ಮಟ್ಟದಲ್ಲಿ ಜನರ ಮೇಲೆ ಪ್ರಭಾವ ಬೀರಿವೆ. ಅವರ ಕೈಗಾರಿಕಾ ಪರಿಣತಿಯು ಭಾರತೀಯ ಉದ್ಯಮದ ಬೆಳವಣಿಗೆಯನ್ನು ಮಾತ್ರ ಸಾಧ್ಯವಾಗಿಸಿಲ್ಲ, ಭಾರತ ಜಾಗತಿಕವಾಗಿ, ಕೈಗಾರಿಕಾ ದೈತ್ಯನಾಗಿ ಬೆಳೆಯುವಂತೆ ಮಾಡಿದೆ.
ಉಪ್ಪಿನಿಂದ ಉಕ್ಕಿನವರೆಗೂ ಉದ್ಯಮಗಳನ್ನು ಜಾಗತಿಕ ಮಟ್ಟದಲ್ಲಿ ತಲೆ ಎತ್ತುವಂತೆ ಮಾಡಿದ್ದಲ್ಲದೆ, ಉದ್ಯಮ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಒಳ್ಳೆಯ ಹೆಸರು ತಂದು ಕೊಟ್ಟವರಲ್ಲಿ ಪ್ರಮುಖರು..
ಅಜ್ಜಿಯ ಆರೋಗ್ಯಕ್ಕೋಸ್ಕರ ಮದುವೆಯನ್ನು ಮರೆತು ಬ್ರಹ್ಮಚಾರಿಯಾದರು..
21 ವರ್ಷಗಳಲ್ಲಿ, ಅವರು ಟಾಟಾ ಗ್ರೂಪ್ ಅನ್ನು ಮುನ್ನಡೆಸಿದ್ದರಿಂದ, ಅದರ ಆದಾಯವು 40 ಪಟ್ಟು ಹೆಚ್ಚಾಗಿದೆ ಮತ್ತು ಲಾಭವು 50 ಪಟ್ಟು ಹೆಚ್ಚಾಗಲು ಕಾರಣವಾಗಿದೆ.
ಮಾರುಕಟ್ಟೆ ಕುಸಿತ, ಆರ್ಥಿಕ ಹಿಂಜರಿತ ಸಂದರ್ಭದಲ್ಲಿ, ವಿವಿಧ ಕಂಪನಿಗಳು ತಮ್ಮ ನೌಕರರನ್ನು ತೆಗೆದು ಹಾಕಿದರೆ, ಇವರು ತಮ್ಮ ಸಂಸ್ಥೆಯ ಯಾವುದೇ ನೌಕರರನ್ನು ತೆಗೆದು ಹಾಕದೆ, ಉಳಿದ ಸಂಸ್ಥೆಗಳಿಗೂ ನೌಕರರು ತೆಗೆಯದಂತೆ ಮನವಿ ಮಾಡಿದ್ದರು..
ಬಾಂಬೆಯಲ್ಲಿ ಮಳೆಗೆ ಸಿಕ್ಕ 4 ಜನರ ಕುಟುಂಬವನ್ನು ಮೋಟಾರ್ ಬೈಕ್‌ನಲ್ಲಿ ನೋಡಿದ ಅವರು,ಭಾರತೀಯ ಬಡವರ ಕೈಗೆಟುಕುವ ಬೆಲೆಯಲ್ಲಿ ಕಾರನ್ನು ರಚಿಸಲು ನಿರ್ಧರಿಸಿದರು. ಅದಕ್ಕಾಗಿ ಕೇವಲ ಒಂದು ಲಕ್ಷ ರೂಪಾಯಿದಲ್ಲಿ ನ್ಯಾನೋ ಕಾರ್ ಸೃಷ್ಟಿಸಿದ್ದು ಇತಿಹಾಸ.
ನಮ್ಮ ಶ್ರೀಮಂತಿಕೆಯ ಆಡಂಬರವು, ಬಡವರಿಗೆ ವ್ಯಂಗ ಮಾಡಿದಂತೆ, ಹಾಗಾಗಿ ಸಾಮಾನ್ಯರಲ್ಲಿ ನಾವು ಸಾಮಾನ್ಯ ಆಗಿರಬೇಕೆಂದು ಸಾಮಾನ್ಯರಾಗಿ ಬದುಕಿದರು..
ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎನ್ನುವಂತೆ ಬಾಳಿದರು. ಮನಸ್ಸು ಮಾಡಿದ್ದರೆ ಅವರು ಪ್ರಪಂಚದ ನಂಬರ್-1 ಶ್ರೀಮಂತರಾಗಬಹುದಿತ್ತು, ಆದರೆ ಸಂಸ್ಥೆಯ ಲಾಭಾಂಶದಲ್ಲಿ ಶೇಕಡ 60 ಭಾಗವನ್ನು ಅವರು ಸಮಾಜ ಸೇವೆ ರೂಪದಲ್ಲಿ ಆರೋಗ್ಯ, ಶಿಕ್ಷಣ, ಆಟೋಮೊಬೈಲ್, ಇಂಧನ, ಬ್ಯಾಂಕಿಂಗ್, ಐಟಿ, ವಿಪತ್ತು ನಿರ್ವಹಣೆ, ಬಡತನ ನಿರ್ಮೂಲನೆ ಮುಂತಾದ ಕ್ಷೇತ್ರಗಳಿಗೆ ಕೊಟ್ಟು ಹೃದಯ ಶ್ರೀಮಂತಿಕೆ ಮೆರೆದರು..
ಕರೋನಾ ಸಂದರ್ಭದಲ್ಲಿ ಸಮಾಜ ಸೇವೆಯ ಕಾರ್ಯ ಎಲ್ಲರಿಗೂ ಮಾದರಿಯಾಗಿತ್ತು..
ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ನನಗೆ ನಂಬಿಕೆ ಇಲ್ಲ. ನಾನು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ ಮತ್ತು ನಂತರ ಅವುಗಳನ್ನು ಸರಿ ಮಾಡುತ್ತೇನೆ. - ರತನ್ ಟಾಟಾ
ಅವರ ವೃತ್ತಿಜೀವನದ ಅವಧಿಯಲ್ಲಿ ಅವರಿಗೆ ನೀಡಲಾದ ಅನೇಕ ಇತರ ಗೌರವಗಳಲ್ಲಿ, ಅವರು ಭಾರತದ ಎರಡು ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮವಿಭೂಷಣ (2008) ಮತ್ತು ಪದ್ಮಭೂಷಣ (2000) ಗಳನ್ನು ಪಡೆದಿದ್ದಾರೆ .
ಜೀವನದಲ್ಲಿ ಏರಿಳಿತಗಳು ಸಹಜ ಇಸಿಜಿಯಲ್ಲಿಯೂ ಸಹ ಸರಳ ರೇಖೆಯನ್ನು ಹೊಂದಿಲ್ಲ.. ಜಯ ಬಂದಾಗ ಹಿಗ್ಗದೆ, ಸೋಲು ಬಂದಾಗ ಕುಗ್ಗದೇ ಮುನ್ನಡೆಯುತ್ತಿರಬೇಕು -
ರತನ್ ಟಾಟಾ