ಕಥೆ-545
ಆಯುಧ ಪೂಜೆಯ ಶುಭಾಶಯಗಳು
ಭಾರತದಾದ್ಯಂತ ಸಾಂಪ್ರದಾಯಿಕವಾಗಿ ನವರಾತ್ರಿ ಮತ್ತು ವಿಜಯದಶಮಿ ಹಬ್ಬ ಆಚರಿಸಲಾಗುತ್ತದೆ.
ಮೈಸೂರು ಒಡೆಯರ ಮನೆತನದಲ್ಲಿ ಇಂದಿಗೂ ಸಹ, ಶಸ್ತ್ರಾಸ್ತ್ರಗಳಿಗೆ ಪದ್ಧತಿ ಪ್ರಕಾರ ಪೂಜೆ ಸಲ್ಲಿಸಲಾಗುತ್ತದೆ..
ನವರಾತ್ರಿಯ ಕೊನೆಯ ದಿನದ ಆಚರಣೆ ಮಹಾನವಮಿಯಂದು ಆಯುಧ ಪೂಜೆಗೆ ಹೆಚ್ಚಿನ ಮಹತ್ವ. ತರಕಾರಿ ಹೆಚ್ಚುವ ಚಾಕುವಿನಿಂದ ಹಿಡಿದು ದೇಶದ ರಕ್ಷಣೆಗಾಗಿ ಬಳಸಲಾಗುವ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಕೂಡ ಆಯುಧ ಪೂಜೆಯಂದು ಪೂಜಿಸಲಾಗುತ್ತದೆ.
ಮೈಸೂರಿನ ವಿಜಯ ದಶಮಿಗೆ ವಿಶೇಷ ಪಾರಂಪರಿಕ ಇತಿಹಾಸವಿದೆ. ಚಾಮುಂಡೇಶ್ವರಿ ಮಹಿಷಾಸುರನನ್ನು ನವರಾತ್ರಿಯ ಒಂಬತ್ತನೇ ದಿನದಂದು ಸಂಹರಿಸಿದ ನಂಬಿಕೆಯ ದ್ಯೋತಕವಾಗಿ ಒಂಬತ್ತನೇ ದಿನದಂದು ಆಯುಧ ಪೂಜೆ ಮಾಡಲಾಗುತ್ತದೆ.
ಇನ್ನು ಮಹಾಭಾರತದಲ್ಲಿ ಪಾಂಡವರು ಹದಿಮೂರು ವರ್ಷಗಳ ವನವಾಸ ಮುಗಿಸುತ್ತಾರೆ. ಬಳಿಕ ಒಂದು ವರ್ಷ ಅಜ್ಞಾತವಾಸ ಮುಗಿಸುತ್ತಾರೆ. ಈ ಅಜ್ಞಾತವಾಸದ ಅಂತಿಮ ದಿನವೇ ವಿಜಯದಶಮಿ. ಅಜ್ಞಾತವಾಸದ ಸಮಯದಲ್ಲಿ ಪಾಂಡವರು ಬನ್ನಿಗಿಡದಲ್ಲಿ ಬಚ್ಚಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲ ತೆಗೆದು ವಿರಾಟರಾಜನ ಶತ್ರುಗಳ ವಿರುದ್ಧ ಪಾಂಡವರು ವಿಜಯವನ್ನು ಸಾಧಿಸುತ್ತಾರೆ.ಎಂಬ ನಂಬಿಕೆಯ ದ್ಯೋತಕವಾಗಿದೆ...
ಇನ್ನು ಆಯುಧ ಪೂಜೆಯ ಆರಂಭ ನೋಡುವುದಾದರೆ, ಮೊದಲೆಲ್ಲ ಯುದ್ಧಕ್ಕೆ ಹೋಗುತ್ತಿದ್ದ ರಾಜಕುಟುಂಬಸ್ಥರು, ನವರಾತ್ರಿಯ ಒಂಭತ್ತನೇ ದಿನದಂದು ಪೂಜೆ ಸಲ್ಲಿಸುತ್ತಾರೆ. ಇದನ್ನು ಕಂಡ ಪ್ರಜೆಗಳು ಸಹ ತಾವು ಬಳಸುವ ಆಯುಧ, ವಾಹನ, ಅಡಿಗೆಗೆ ಬಳಸುವ ಕತ್ತಿ ಚಾಕುವಿಗೆಲ್ಲ ಪೂಜೆ ಸಲ್ಲಿಸಲು ಶುರು ಮಾಡಿದರು. ಅಂದಿನಿಂದ ಆಯುಧ ಪೂಜೆ ಆರಂಭವಾಯಿತು.
ನಾವು ಬಳಸುವ ಆಯುಧಕ್ಕೆ, ಒಂದು ಪೂಜೆಯ ಗೌರವ ಸಲ್ಲಲಿ, ನಮ್ಮನ್ನು ಕಾಪಾಡುವ ಆಯುಧಕ್ಕೆ ಒಂದು ದಿನವಾದರೂ ವಿಶ್ರಾಂತಿ ಸಿಗಲಿ ಎಂಬ ನಂಬಿಕೆ..
ಎಲ್ಲರಿಗೂ ಆಯುಧ ಪೂಜೆ ಶುಭಾಶಯಗಳು
💐💐💐💐💐