Sunday, October 13, 2024

 ಕಥೆ-547

ದುರಾಸೆ

ಒಬ್ಬ ಸಿರಿವಂತನಿದ್ದ ಅವನ ವಯಸ್ಸು, ಎಂಬತ್ತು ವರ್ಷ,

ಸಿರಿ – ಸಂಪದ ಯಾವುದಕ್ಕೂ ಕೊರತೆ ಇರಲಿಲ್ಲ. ಆದರೆ ಜೀವನದಲ್ಲಿ ತೃಪ್ತಿ ಮಾತ್ರ ಎಳ್ಳಷ್ಟೂ ಇರಲಿಲ್ಲ. ಎಲ್ಲರಿಗಿಂತಲೂ ಹೆಚ್ಚು ಗಳಿಸಬೇಕೆಂಬ ಆಸೆ ಅವನಿಗೆ. ಓರ್ವ ಸಂತರ ಬಳಿ ಹೋದ. ಸಂತ ಕೇಳಿದ “ಬಂದ ಕಾರಣವೇನು?” ಸಿರಿವಂತನ ಹೇಳಿದ “ಬಡತನದ ಬೇಗೆಯಲ್ಲಿ ಬೆಂದು ಹೋಗಿದ್ದೇನೆ”. ಸಂತ ಕೇಳಿದ “ಅದೆಂಥ ಬಡತನ?” ಸಿರಿವಂತ ಹೇಳಿದ “ನೆರೆಯವರ ಮನೆ ಏಳೆಂಟು ಅಂತಸ್ತಿನದು. ನನ್ನದು ಕೇವಲ ಎರಡೇ ಅಂತಸ್ತಿನ ಮನೆ!” ಸಂತರು ಆತನ ಧನಲೋಭವನ್ನು ಕಂಡು ಮರುಗಿದರು.

  “ಚಿಂತಿಯಿಲ್ಲ ನಿನಗೆ ಎಷ್ಟು ಬೇಕೋ ಅಷ್ಟು ಹರಳುಗಳನ್ನು ತೆಗೆದುಕೊಂಡು ಬೇಗನೇ ಬಾ. ಅದನ್ನೆಲ್ಲ ಚಿನ್ನ, ಬೆಳ್ಳಿ, ಮುತ್ತು, ರತ್ನ ಮಾಡಿಕೊಡುತ್ತೇನೆ” ಎಂದರು ಸಂತರು. “ಆಗಲಿ ಪೂಜ್ಯರೇ” ಎಂದು ಮನೆಗೆ ಹೋದ ಸಿರಿವಂತ. ಒಂದು ಕ್ಷಣವೂ ಬಿಡದೇ ಹಗಲು ರಾತ್ರಿ ಹರಳುಗಳ ಕೂಡಿಸಲು ತೊಡಗಿದ.. ತೊಡಗಿದ.. ವರುಷ ಕಳೆದರೂ ಈತ ಹರಳುಗಳ ಕೂಡಿಸುವುದು ಮುಗಿಯಲೇ ಇಲ್ಲ. ಮನುಷ್ಯನ ಆಸೆಗೊಂದು ಕೊನೆಯು ಎಲ್ಲಿದೆ? ಸಂತರು ಈತನ ದಾರಿ ನೋಡಿ ನೋಡಿ ಹಿಮಾಲಯದತ್ತ ಹೊರಟು ಹೋದರು. ಸಿರಿವಂತನ ಪಾಲಿಗೆ ಉಳಿದದ್ದು ಮುತ್ತು – ರತ್ನಗಳಲ್ಲ; ಬರೀ ಕಲ್ಲು! ಹೊನ್ನಾಗಬೇಕಾಗಿದ್ದ, ಚಿನ್ನದ ಗಣಿಯಾಗಬೇಕಾಗಿದ್ದ ಆತನ ಜೀವನ ದುರಾಸೆಯಿಂದ ಕಲ್ಲು-ಮಣ್ಣಿನ ರಾಶಿಯಾಗಿತ್ತು!.

ಆಸೆಗೆ ಮಿತಿ ಇಲ್ಲದಿದ್ದರೆ, ನಮ್ಮ ಜೀವನ ಹೀಗೆ ಆಗುವುದು.. 

ಕೃಪೆ:ಶ್ರೀ ಸಿದ್ಧೇಶ್ವರ ಸ್ವಾಮೀಜಿ.

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು