Tuesday, October 15, 2024

 ಅಕ್ಟೋಬರ್ 15

ವಿಶ್ವ ವಿದ್ಯಾರ್ಥಿಗಳ ದಿನದ ಶುಭಾಶಯಗಳು

💐💐💐💐💐💐💐💐💐

 (World Students Day)

*ಭಾರತದ ಕ್ಷಿಪಣಿ ಮನುಷ್ಯ, ಭಾರತ ಕಂಡ ಶ್ರೇಷ್ಠ ವಿಜ್ಞಾನಿ, ಶಿಕ್ಷಕ ಡಾ: ಎ.ಪಿ.ಜೆ ಅಬ್ದುಲ್ ಕಲಾಂ ರ ಜನ್ಮ ದಿನದ ಸವಿನೆನಪಿಗಾಗಿ 'ವಿಶ್ವ ವಿದ್ಯಾರ್ಥಿಗಳ ದಿನ'ವನ್ನು ಪ್ರತಿವರ್ಷ ಅಕ್ಟೋಬರ್ 15 ರಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.* 

*ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಇಡೀ ವಿಶ್ವದಲ್ಲಿಯೇ ಪ್ರಸಿದ್ಧವಾದ ಹೆಸರು. ಅವರು 21 ನೇ ಶತಮಾನದ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ*.

*2010 ರಲ್ಲಿ ವಿಶ್ವಸಂಸ್ಥೆಯು (ಯುಎನ್‌ಒ) ಅಕ್ಟೋಬರ್ 15 ದಿನವನ್ನು 'World Students Day' ಎಂದು ಘೋಷಿಸಿತು. ಈ ಮೂಲಕ ಅವರು ಶಿಕ್ಷಣವನ್ನು ಉತ್ತೇಜಿಸಲು ಪಟ್ಟ ಪ್ರಮಾಣಿಕ ಪ್ರಯತ್ನವನ್ನು ಸಹ ನೆನೆಯುವುದು ಇದರ ಉದ್ದೇಶವು ಆಗಿದೆ.*


*ಎಲ್ಲಾ ಮಕ್ಕಳಿಗೆ ಶೈಕ್ಷಣಿಕ ಸಾಧ್ಯತೆಗಳು ಲಭ್ಯವಾಗಬೇಕೆಂದಿದ್ದರು*...


*'ಕನಸು ಎಂದರೆ ನೀವು ಮಲಗಿರುವಾಗ ಕಂಡಿದ್ದು ಅಲ್ಲ ಯಾವುದು ನಿಮ್ಮನ್ನು ಮಲಗಲು ಬಿಡುವುದಿಲ್ಲವೋ ಅದೇ ನಿಜವಾದ ಕನಸು*... 


*ಕಲಿಯುವಿಕೆ, ಇದು ನಿರಂತರ, ಮತ್ತು ಅನಂತ.....* *ಜೀವಮಾನವಿಡೀ ನಾವು ಕಲಿಯುತ್ತಲೇ ಇರಬೇಕು ಹಾಗೂ ಮುನ್ನಡೆಯುತ್ತಲೇ ಇರಬೇಕು. ತಮ್ಮ ಸುತ್ತಮುತ್ತಲಿರುವ ವಸ್ತು, ವಿಷಯ ಹಾಗೂ* *ಆಗುಹೋಗುಗಳ ಬಗ್ಗೆ ಸತತವಾಗಿ ಅರಿಯುತ್ತಾ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿರುವುದೇ ಜೀವನದ ಜೀವಾಳ.*

*ಜ್ಞಾನವನ್ನು ಹೆಚ್ಚಿಸಿಕೊಳ್ಳಲು ನಮಗೆ ನೆರವಾಗುವ ಪ್ರತಿ ವ್ಯಕ್ತಿ ವಿಷಯಕ್ಕಿಂತಲೂ ಗುರುವಿನ ಮಹತ್ವ ಅತಿ ಹೆಚ್ಚು. ಹಾಗಾಗಿ ಗುರುವಿನ ಮೂಲಕ ಹೆಚ್ಚು ಹೆಚ್ಚು ಜನರಿಗೆ ಫಲ ದೊರಕಲೆಂದೇ* *ಗುರುಕುಲಗಳು ಪ್ರಾರಂಭಿಸಲ್ಪಟ್ಟವು*

*ದೊಡ್ಡ ಮತ್ತು ಕಠಿಣ* *ಪರಿಶ್ರಮದಿಂದ ದೊಡ್ಡ ಕನಸುಗಳನ್ನು ಕಾಣಲು* *ವಿದ್ಯಾರ್ಥಿಗಳಿಗೆ ಸ್ವತಃ ಒಂದು ಮಾದರಿಯಾಗುವುದು ಬಹಳ ಮುಖ್ಯ. ಅಂಥಹ ಮಾದರಿ ಎಂದರೆ ಡಾ.ಅಬ್ದುಲ್ ಕಲಾಮರು.. ರಾಷ್ಟ್ರ, ಸಮಾಜ ಮತ್ತು ವಿದ್ಯಾರ್ಥಿಗಳ ಸುಧಾರಣೆಗಾಗಿ ತಮ್ಮ ಜೀವನವನ್ನು ಕಳೆದ ವ್ಯಕ್ತಿಯನ್ನು ಸ್ಮರಿಸಲು ನಮಗೊಂದ ಅವಕಾಶ*..💐💐💐💐💐💐💐

*ಈ ಸಮಾಜವೇ ಒಂದು ವಿಚಿತ್ರ. ಮಾತನಾಡಿದರೆ ಮಾತಿನಲ್ಲಿರುವ ತಪ್ಪನ್ನು ಹುಡುಕುತ್ತಾರೆ, ಮೌನಿಯಾದರೆ ನಮ್ಮನ್ನೇ ತಪ್ಪಾಗಿ ಚಿತ್ರಿಸುತ್ತಾರೆ*. 


*ಅದೃಷ್ಟದ ಮೇಲೆ ಎಂದಿಗೂ ನಂಬಿಕೆ ಇಡಬೇಡಿ. ನಿಮ್ಮ ಕಠಿಣ ಶ್ರಮದ ಮೇಲೆ ನಂಬಿಕೆ ಇಡಿ, ಯಶಸ್ಸು ನಿಮ್ಮದಾಗುತ್ತದೆ*.

ಡಾ:ಎಪಿಜೆ ಅಬ್ದುಲ್ ಕಲಾಂ


*ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ವಿಶ್ವ ವಿದ್ಯಾರ್ಥಿಗಳ ದಿನದ ಶುಭಾಶಯಗಳು*...


💐💐💐💐💐

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು