ಕಥೆ-581
I am the best....👍
ಇವತ್ತಿನ ಕಥೆಯಲ್ಲಿ ಆತ್ಮವಿಶ್ವಾಸವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು.. ಎಂಬುದನ್ನು ಶಾರುಖ್ ಖಾನ್ ಅವರ ಮಾತಲ್ಲಿ ಕೇಳುವುದಾದರೆ....
'ಐ ಆ್ಯಮ್ ದಿ ಬೆಸ್ಟ್' ಎಂದು ಆಗಾಗ ನಾನು ಹೇಳಿಕೊಳ್ಳುತ್ತಲೇ ಇರುತ್ತೇನೆ. ಇದನ್ನು ನಾನು ಅಹಂಕಾರದಿಂದ ಹೇಳುತ್ತೇನೆ ಎಂದು ಹಲವರು ಭಾವಿಸುತ್ತಾರೆ. ಆದರೆ, ನಾನು ಈ ಮಾತು ಹೇಳುವ ಉದ್ದೇಶವೇ ಬೇರೆ. ನನಗೆ ಸೋಲುವುದಕ್ಕೆ ಇಷ್ಟವಿಲ್ಲ. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದಕ್ಕೆ, ನಾನು ಈ ಮಾತುಗಳನ್ನು ಹೇಳುತ್ತಿರುತ್ತೇನೆ. ನಾನು ಬಹಳ ಕೆಳಮಟ್ಟದಿಂದ ಇಲ್ಲಿಯವರೆಗೂ ನಡೆದು ಬಂದೆನು. ಸಾಕಷ್ಟು ಕಷ್ಟಪಟ್ಟು ಈ ಹಂತಕ್ಕೆ ಬಂದು ಮುಟ್ಟಿದವನು. ನಾನೂ ಒಬ್ಬ ಸಾಮಾನ್ಯ. ನನ್ನಲ್ಲಿ ಹಲವು ನ್ಯೂನತೆಗಳಿವೆ ಮತ್ತು ಹಲವು ವಿಷಯಗಳಲ್ಲಿ ನಾನು ಸಿಕ್ಕಾಪಟ್ಟೆ ಅವಮಾನಗಳನ್ನು ಅನುಭವಿಸಿದ್ದೇನೆ. ಅದು ನನ್ನ ಎತ್ತರ, ಧ್ವನಿ ಇರಬಹುದು....ನನ್ನ ಮ್ಯಾನರಿಸಂ ಬಗ್ಗೆಯೂ ಸಾಕಷ್ಟು ಟೀಕೆಗಳನ್ನು ಮಾಡಿದ್ದರು... ಚಿತ್ರರಂಗಕ್ಕೆ ಬಂದ ಹೊಸತರಲ್ಲಿ, ನಾನು ಹೆಚ್ಚು ದಿನ ಇಲ್ಲಿ ಉಳಿಯುವುದಿಲ್ಲ ಎಂದು ಹಲವರು ಭವಿಷ್ಯ ನುಡಿದಿದ್ದರು. ನಾನು ಬಹಳ ಬೇಗ ಫಿನಿಷ್ ಆಗುತ್ತೇನೆ ಎಂದಿದ್ದರು. ಆದರೆ, ನಾನು ಅದನ್ನೆಲ್ಲ ಮೀರಿ ಬಂದೆ. ಆದರೆ, ಆ ಅವಮಾನಗಳು ನನ್ನ ಮನಸ್ಸಿನಲ್ಲಿ ಹಸಿರಾಗಿವೆ. ಅವುಗಳಿಂದ ನಾನು ಸಾಕಷ್ಟು ಪಾಠಗಳನ್ನು ಕಲಿತೆ, ಟೀಕಿಸುವವರು ಇದ್ದೇ ಇರುತ್ತಾರೆ ಅವು ನಮಗೆ ಸಮಂಜಸ ಅನ್ನಿಸಿಕೊಂಡಾಗ ಅವುಗಳನ್ನು ನಾವು ತಿದ್ದುಕೊಂಡು ಆತ್ಮವಿಶ್ವಾಸದಿಂದ ಮುನ್ನಡೆದಾಗ ನಾವು ದಿ ಬೆಸ್ಟ್ ಆಗಿರುತ್ತೆವೆ, ಆತ್ಮವಿಶ್ವಾಸ ಎಲ್ಲಾ ಕಾರ್ಯಗಳ ಕೀಲಿ ಕೈ, ಅದೇ ಕಾರಣಕ್ಕೆ ನಾನು ಆಗಾಗ 'ಐ ಆ್ಯಮ್ ದಿ ಬೆಸ್ಟ್' ಎಂದು ಹೇಳಿಕೊಳ್ಳುತ್ತಿರುತ್ತೇನೆ.
-ಶಾರುಖ್ ಖಾನ್ (ನಟ)