Monday, November 18, 2024

 ಕಥೆ-584

ಕನಕ ಜಯಂತಿ ಶುಭಾಶಯಗಳು

ಜಪವ ಮಾಡಿದರೇನು,

ತಪವ ಮಾಡಿದರೇನು,

ವಿಪರೀತ ಕಪಟಗುಣವುಳ್ಳವರು”


“ಯಾವಾಗ ನಮ್ಮಲ್ಲಿರುವ ʼನಾನುʼಎಂಬ ಅಹಂ ನಿಮ್ಮನ್ನು ಬಿಟ್ಟು ಹೋಗುತ್ತದೆಯೋ


ಅವತ್ತು ನಾವು ಮೋಕ್ಷಕ್ಕೆ ಅರ್ಹರಾಗುತ್ತೀರಿ”


ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ.. ಅನೇಕ ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದವರು ಕನಕದಾಸರು..


ಕನಕದಾಸರು ಕಾಗಿನೆಲೆಯ ಆದಿಕೇಶವರಾಯ ಅಂಕಿತ ನಾಮದಿಂದ ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ, ಕನ್ನಡ ಸಾಹಿತ್ಯ ಹಾಗೂ ಕರ್ನಾಟಕ ಸಂಗೀತಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.


ಪ್ರತಿ ವರ್ಷ ಹಿಂದೂ ತಿಂಗಳ ಕಾರ್ತಿಕ್ 18 ನೇ ದಿನದಂದು ಕನಕ ಜಯಂತಿಯನ್ನು ಆಚರಿಸಲಾಗುತ್ತದೆ


ದಾಸ ಪರಂಪರೆಯಲ್ಲಿ ಬರುವ ಇನ್ನೂರೈವತ್ತಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರು ಒಬ್ಬರೇ ಶೂದ್ರರು. 


ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿಟ್ಟವರು. 


ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ.


ಕನಕದಾಸರ ತಂದೆ ಬೀರಪ್ಪ ನಾಯಕ ಮತ್ತು ತಾಯಿ ಬಚ್ಚಮ್ಮ ತಿರುಪತಿ ತಿಮ್ಮಪ್ಪನ ಭಕ್ತರಾದ ದಂಪತಿಗಳು ಜನಿಸಿದ ತಮ್ಮ ಮಗುವಿಗೆ ತಿಮ್ಮಪ್ಪ ಎಂದೇ ನಾಮಕರಣ ಮಾಡಿದರು.( ಜನನ ಸ್ಥಳ : ಹಾವೇರಿ ಜಿಲ್ಲೆ ಶಿಗ್ಗಾವ್ ತಾಲೂಕು ಬಾಡ ಗ್ರಾಮದಲ್ಲಿ ಕ್ರಿ.ಶ.1509)


ತಂದೆ ಬೀರಪ್ಪ ನಾಯಕ ಸೇನಾಧಿಪತಿಯಾಗಿದ್ದರಿಂದ ಕನಕದಾಸರಿಗೆ ಬಾಲ್ಯದಲ್ಲೇ ಅಕ್ಷರಾಭ್ಯಾಸದ ಜೊತೆಗೆ ಕತ್ತಿವರಸೆ , ಕುದುರೆ ಸವಾರಿಯನ್ನು ಕೂಡಾ ಕಲಿಸಿದರು. ತಿಮ್ಮಪ್ಪನಾಯಕ ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಗಳನ್ನು ಕಳೆದುಕೊಂಡರು. ಬಂಕಾಪುರ ಪಾಂತ್ಯಕ್ಕೆ ಸೇನಾನಾಯಕನಾದರು. ಒಮ್ಮೆ ತಿಮ್ಮಪ್ಪ ನಾಯಕ ಜೀರ್ಣೋದ್ಧಾರ ಕೆಲಸ ಮಾಡುವಾಗ ಅವರಿಗೆ ಭೂಮಿಯಲ್ಲಿ ಬಂಗಾರ ದೊರೆಯಿತು. ಅದನ್ನು ಅವರು ತಮ್ಮ ವಿಲಾಸಿ ಜೀವನಕ್ಕೆ ಬಳಸುವ ಬದಲಾಗಿ ಜನರ ಕಲ್ಯಾಣ ಕಾರ್ಯಗಳಿಗೆ ಬಳಸಿದರು. ಆಗಿನಿಂದ ಜನರು ಅವರನ್ನು ಕನಕ ನಾಯಕ ಎಂದು ಕರೆಯಲು ಆರಂಭಿಸಿದರು.


ಶತ್ರುಗಳ ಜೊತೆ ಯುದ್ಧದಲ್ಲಿ ಕನಕನಾಯಕನಿಗೆ ದೊಡ್ಡ ಪೆಟ್ಟಾಯಿತು ಪ್ರಾಣಪಾಯದಿಂದ ಪಾರಾದರು. ತಾವು ಆರಾಧಿಸುತ್ತಿದ್ದ ಕಾಗಿನೆಲೆ ಆದಿಕೇಶವನೇ ನನ್ನನ್ನು ಕಾಪಾಡಿದ್ದು ಎಂಬ ನಂಬಿಕೆಯಿಂದ ಅಂದಿನಿಂದ ಕನಕನಾಯಕ ಸೈನ್ಯದ ಕೆಲಸ ಬಿಟ್ಟು ವ್ಯಾಸರಾಯರ ಗುರುಗಳನ್ನಾಗಿ ಸ್ವೀಕರಿಸಿ ಹರಿದಾಸ ಪಂಥ ಸೇರಿಕೊಂಡರು. ಕನಕನಾಯಕರು ಕನಕದಾಸರಾಗಿ ಬದಲಾದರು


ಒಮ್ಮೆ ವ್ಯಾಸತೀರ್ಥರ ಮುಖಾಮುಖಿಯಲ್ಲಿ, ಯಾರಿಗೆ ಮೋಕ್ಷ ಅಥವಾ ಮುಕ್ತಿ ಸಿಗುತ್ತದೆ ಎಂದು ಕನಕದಾಸರು ವಿನಮ್ರವಾಗಿ ಹೇಳಿದ್ದು ಪಂಡಿತರನ್ನು ಬೆರಗಾಗುವಂತೆ ಮಾಡಿತು.


ಸ್ಪಷ್ಟನೆ ಕೇಳಿದಾಗ, ಕನಕದಾಸರು ವೇದಾಂತದ ಸಾರವನ್ನು ತಮ್ಮ ಉತ್ತರದಲ್ಲಿ ಬಹಿರಂಗಪಡಿಸುತ್ತಾರೆ, ‘ನಾನು’ (ಅಹಂಕಾರ) ಕಳೆದುಕೊಂಡವನು ಮಾತ್ರ ಮೋಕ್ಷವನ್ನು ಪಡೆಯುತ್ತಾನೆ. (ಅಹಂಕಾರ ಸ್ವಾರ್ಥ ಇರಬಾರದೆಂದು ಪ್ರತಿಪಾದಿಸುತ್ತಾರೆ)


ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು, ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತ ಗೊಳಿಸಿದ್ದಲ್ಲದೆ ಅಲ್ಲದೆ ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ಮೂಲಕ ನೀಡಿದ್ದಾರೆ. 


ಅವರ ಮುಖ್ಯ ಕಾವ್ಯ ಕೃತಿಗಳು


ಮೋಹನ ತರಂಗಿಣಿ, ನಳ ಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತ ಸಾರ ಇತ್ಯಾದಿ


ರಾಮ ಧಾನ್ಯ ಚರಿತೆಯಲ್ಲಿ


ಭತ್ತ ಹಾಗೂ ರಾಗಿಗಳ ಸಂವಾದ ಜಾತಿಗಳ ನಡುವಿನ ವಿಷಮತೆಯನ್ನೂ, ಬಂಡಾಯದ ಧ್ವನಿಯಾಗಿಯೂ, ಶ್ರೀಮಂತ ಬಡವರ ಪ್ರತಿನಿಧಿಗಳಾಗಿ ಜಾತಿ ವಿಷ ಬೀಜದ ಮತ್ತು ಬಡವ ಬಲ್ಲಿದರ ಬೇದ ಭಾವಗಳನ್ನು ಹೊಡೆದೋಡಿಸುವ ಪ್ರಯತ್ನ ಮಾಡಿದ್ದಾರೆ..


ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮಕುಲದ ನೆಲೆಯನೆನಾದರೂ ಬಲ್ಲಿರಾ? ಎಂದು ಪ್ರಶ್ನಿಸುವ ಮೂಲಕ ನಾವೆಲ್ಲರೂ ಒಂದೇ ಕುಲ ಅದು ಮಾನವ ಕುಲ ಎಂಬ ಸಂದೇಶವನ್ನು ಕನಕದಾಸರು ಸಾರಿದ್ದಾರೆ..👍🙏💐💐💐

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು