ಕಥೆ-586
ಮಕ್ಕಳ ದೃಷ್ಟಿಕೋನ ಬದಲಾಯಿಸಿ ...
ಮಕ್ಕಳು ಪ್ರತಿದಿನ ಮನೆಗೆ ಬಂದ ನಂತರ ಎಷ್ಟು ಅಂಕ ಪಡೆದೆ, ಯಾವುದರಲ್ಲಿ ಗೆದ್ದೆ, ಯಾವುದಕ್ಕೆ ಆಯ್ಕೆಯಾದೆ, ಬೇರೆಯವರು ಯಾರು ಎಷ್ಟು ಅಂಕ ಪಡೆದರು ಎಂದು _ ತಂದೆ-ತಾಯಿಯಾಗಿ ಕೇಳುತ್ತೇವೆ. ಹಾಗೆ ಪ್ರಶ್ನಿಸುವ ಬದಲು ಎಷ್ಟು ಜನರಿಗೆ ಸಹಾಯ ಮಾಡಿದೆ, ಎಷ್ಟು ಜನರ ಮುಖದಲ್ಲಿ ಮಂದಹಾಸ ತಂದೆ ಎಂದು ಕೇಳಿದರೆ... ಆಗ ಏನಾಗಬಹುದು ಯೋಚಿಸಿ? ಅದರಿಂದ ಮಕ್ಕಳ ದೃಷ್ಟಿಕೋನವೇ ಬದಲಾಗುತ್ತದೆ. ಸದಾ ತನ್ನ ಬಗ್ಗೆ ಯೋಚಿಸಿ,
ಸ್ವಾರ್ಥಿಗಳಾಗುವುದಕ್ಕಿಂತ ಬೇರೆಯವರ ಬಗ್ಗೆ ಯೋಚಿಸುವುದು ಅಭ್ಯಾಸವಾಗುತ್ತದೆ. ಎಲ್ಲಕ್ಕಿಂತ ಸಹಾಯ, ನಗು, ಸಂತೋಷ ಮುಂತಾದ ಪದಗಳ ಮಹತ್ವ ಅವರಿಗೆ ಅರ್ಥವಾಗುತ್ತದೆ. ಜೀವನದಲ್ಲಿ ಬರೀ ಓದು, ವೃತ್ತಿ ,rank, ಅಂಕ, ಸ್ಪರ್ಧೆ ಮುಂತಾದ ಒತ್ತಡಗಳ ವಿಷಯ ಹೋಗಿ, ಸ್ನೇಹ, ಪ್ರೀತಿ, ಮನುಷ್ಯತ್ವ ಮುಂತಾದ ವಿಷಯಗಳ ಬಗ್ಗೆ ಅರಿವು ಉಂಗುತ್ತದೆ. ಹಾಗಾಗಿ, ಬರೀ ಅಂಕಗಳು, ಸ್ಪರ್ಧೆ ಮಾತ್ರ ಮುಖ್ಯವಲ್ಲ ಎಂಬುದನ್ನು ಮೊದಲು ನಾವು, ತಂದೆ-ತಾಯಿ ಅರ್ಥ ಮಾಡಿಕೊಳ್ಳಬೇಕು. ಹಾಗಾದಾಗ, ಮಕ್ಕಳಿಗೆ ಓದುವುದರ ಜತೆಗೆ ಬೇರೆಯವರಿಗೆ ಸಹಾಯ ಮಾಡುವ ಗುಣವೂ ಬೆಳೆಯುತ್ತದೆ. ಮುಂದೆ ತಂದೆ ತಾಯಿಗಳಿಗೂ ಸಹಾಯ ಮಾಡುವ ಗುಣವು ಬೆಳೆಯುತ್ತದೆ.. ಒತ್ತಡ ರಹಿತ ಓದು ದೀರ್ಘಕಾಲ ಬಾಳುತ್ತದೆ.. ಒತ್ತಡದ ಓದು ಮಕ್ಕಳನ್ನು ಖಿನ್ನತೆಗೆ ತಳ್ಳುತ್ತದೆ... ಉಲ್ಲಾಸಭರಿತ ಒತ್ತಡ ರಹಿತ ಶಿಕ್ಷಣ ಹೊಂದಬೇಕೆನ್ನುವುದು ಮಕ್ಕಳ ಅಪೇಕ್ಷೆ....
-ಅಮೀರ್ ಖಾನ್ ನಟ