ಕಥೆ-594
ಝಣ್- ಝಣ್ ಕಲ್ಲು
🎼🎼🎼🎼🎼🥁
ನಮ್ಮೂರಿನಲ್ಲಿ ಲೋಹದ ಜಾಗಟಯೆಂತೆ ಶಬ್ದ ಹೊರಡಿಸುವ ಕಲ್ಲು ಬಂಡೆಯೊಂದಿದೆ.
ನಾವು ಬಾಲ್ಯದಿಂದಲೂ ಇದನ್ನು ನೋಡುತ್ತಾ ಬಂದಿದ್ದೇವೆ.
ಬೇರೆ ಯಾವ ಕಲ್ಲುಗಳು ಇಲ್ಲಿ ಈ ರೀತಿ ಇಲ್ಲ.
ಕಲ್ಲು ರಚನೆಯಾಗುವಾಗಲೇ ಈ ತರದ ವಿಶಿಷ್ಟ ರಾಸಾಯನಿಕ ಕ್ರಿಯೆಯಾಗಿರುವದಾಗಿ ತಜ್ಞರ ಅಭಿಪ್ರಾಯ.
ಈ ತರಹದ ವಿಶೇಷ ಪ್ರಕರಣವಿದು.
ಭೂಮಿಯೊಳಗಿನ ಕುದಿಯುವ ಶಿಲಾಪಾಕ ಹೊರಗೆ ಬಂದಾಗ ಲಾವಾರಸದಿಂದ ರಚನೆಯಾದ ಕಲ್ಲುಗಳು ಅಗ್ನಿಜನ್ಯ ಶಿಲೆಗಳು.
ನಮ್ಮ ಊರಿನಿಂದ ( ಮುಧೋಳದಿಂದ) ೪-೫ ಕಿ.ಮೀ ದೂರ ಇರುವ ಪ್ರದೇಶದಲ್ಲಿ ಮಿತವಾಗಿ ಕಂಡುಬರುವದು.
ಕರಿ ಕಲ್ಲು ಕಂಡುಬರುವ ಈ ಭಾಗವನ್ನು ಕಗ್ಗಲ್ಲು ಭಾಗ ಎಂದು ಕರೆಯುವದು ವಾಡಿಕೆ.
ಹಂಪೆಯ ವಿಜಯವಿಠ್ಠಲ ಮಂದಿರದ ಕಂಬಗಳನ್ನು ನೆನಪಿಸಿಕೊಳ್ಳಬಹುದು.ಅವು ಗ್ರಾನೈಟ್ ಕಲ್ಲಿನ ರಚನೆಗಳು.
ಈ ಭೂಮಿಯಲ್ಲಿ ಇಂತಹ ನಿಗೂಢತೆ ಹುಡುಕಿ ಬಗೆಹರಿಸಿದರೂ ಇನ್ನೂ ಇವೆ.
ಸಾಮಾನ್ಯವಾಗಿ ಲೋಹಗಳು ನಾದವನ್ನು ಹೊಮ್ಮಿಸುತ್ತವೆ, ಶಿಲಾಪಾಕದಿಂದ ಉಂಟಾದ ಬಂಡೆ ಕಲ್ಲುಗಳು, ಸಾಂದ್ರತೆ ಮತ್ತು ಹೆಚ್ಚಿನ ಮಟ್ಟದ ಆಂತರಿಕ ಒತ್ತಡದ ಸಂಯೋಜನೆಯಿಂದ ಈ ರೀತಿ ನಾದವನ್ನು ಹೊಮ್ಮಿಸುತ್ತವೆ ಎಂದು ಹೇಳಲಾಗುತ್ತದೆ.. ಇಂತಹ ಅಪರೂಪದ ಕಲ್ಲುಗಳನ್ನು ಸಂರಕ್ಷಿಸುವ ಅಗತ್ಯವಿದೆ.... ಅದು ಮುಧೋಳದಲ್ಲಿ ದೊರೆತಿರುವುದು ಖುಷಿ ನೀಡಿದೆ..
- ಶ್ರೀ ಶಿವಶರಣಪ್ಪ ಬಳೆಗಾರ ಮುಧೋಳ 💐💐💐