ಕಥೆ-598
ಚಪ್ಪಾಳೆ ನಿರೀಕ್ಷಿಸದೇ ಕೆಲಸ ಮಾಡಿ ...
ಇದು ಬರೀ ನಮ್ಮ ಕ್ಷೇತ್ರಕ್ಕೆ ಮಾತ್ರವಲ್ಲ, ಎಲ್ಲ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ನಾವು ಯಾವುದೋ ಒಂದು ಕೆಲಸ ಮಾಡಬೇಕು, ಅದನ್ನು ಎಲ್ಲರೂ ಗುರುತಿಸಬೇಕು ಎಂದು ಹಾತೊರೆಯುತ್ತಿರುತ್ತೇವೆ. ಎಷ್ಟೋ ಬಾರಿ ನಾವು ಅಂದುಕೊಂಡಿದ್ದು ಆಗುವುದೇ ಇಲ್ಲ. ನಾವು ಮಾಡಿದ ಕೆಲಸ ಯಾರಿಗೂ ಗೊತ್ತೇ ಆಗುವುದಿಲ್ಲ. ಗೊತ್ತಾದರೂ ಅದರ ಬಗ್ಗೆ ವಿಶೇಷವೆನಿಸುವುದಿಲ್ಲ. ನಮ್ಮ ಕೆಲಸವನ್ನು ಜನ ಗುರುತಿಸಬಹುದು,. ನಮ್ಮನ್ನು ಮೆಚ್ಚಿಕೊಳ್ಳಬಹುದು, ನಾಲ್ಕು ಒಳ್ಳೆಯ ಮಾತುಗಳನ್ನಾಡಬಹುದು ಎಂಬ ನಂಬಿಕೆಯಲ್ಲಿದ್ದ ನಮಗೆ, ಇದರಿಂದ ನಿರಾಶೆಯಾಗುತ್ತದೆ. ಅರ್ಧಕ್ಕೆ ಬಿಟ್ಟುಬಿಡುವ ಸಾಧ್ಯತೆ ಇರುತ್ತದೆ. ಯಾರು ಗುರುತಿಸಲಿ ಅಥವಾ ಗುರುತಿಸದಿರಲಿ.. ಯಾರಾದರೂ ಮೆಚ್ಚಲಿ ಅಥವಾ ಬಿಡಲಿ ಒಂದು ಕೆಲಸವನ್ನು ಮಾಡಬೇಕು ಎಂದು ಅನಿಸಿದರೆ, ನಿಮ್ಮ ಕೆಲಸವನ್ನು ನೀವು ಮಾಡಿ. ಏಕೆಂದರೆ, ಯಾರದೋ ಮರ್ಜಿಗೆ ಕಟ್ಟುಬಿದ್ದು ಮಾಡುತ್ತಿರುವ ಕೆಲಸವಲ್ಲ ಅದು. ನಿಮ್ಮ ಇಷ್ಟಕ್ಕೆ ಮಾಡುತ್ತಿರುವ ಕೆಲಸ ಅದು. ಅದು ಎಲ್ಲರಿಗೂ ಇಷ್ಟ ಆಗಬೇಕು ಎಂದು ನಿರೀಕ್ಷಿಸುವುದು ತಪ್ಪು. ಹಾಗಾಗಿ, ಯಾವುದೇ ನಿರೀಕ್ಷೆಗಳಿಲ್ಲದೆ ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದೇ ಆದರೆ ನಮಗೆ ಯಶಸ್ಸು, ಖ್ಯಾತಿ, ಜನಪ್ರಿಯತೆಯೆಲ್ಲ ತನ್ನಿಂತಾನೇ ಹುಡುಕಿಕೊಂಡು ಬರುತ್ತವೆ.