ಕಥೆ-600
ಸಮಯದ ಹೊಂದಾಣಿಕೆ...
"ಆತ್ಮೀಯರೇ ಇಂದು ದಿನ ಕಥೆ ಅಡಿಯಲ್ಲಿ 600 ಕಥೆಗಳನ್ನು ಪೂರೈಸಿರೋದು ಖುಷಿ ನೀಡಿದೆ.. ತಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳು" 🙏🙏🙏💐💐💐💐💐💐💐💐💐
ಇವತ್ತಿನ ಕಥೆಯಲ್ಲಿ ಸಮಯದ ಹೊಂದಾಣಿಕೆ ಬಗ್ಗೆ ತಿಳಿಯಲಿದ್ದೇವೆ
"ನನಗೆ ಸಮಯವೇ ಸಿಗಲಿಲ್ಲ" ಅಂತೀವಿ, ಬಹಳಷ್ಟು ಜನ ಅನ್ನೋದನ್ನ ಕೇಳುತ್ತೇವೆ, ಎಲ್ಲ ವಿಷಯಗಳಿಗೂ ಸಮಯವೇ ಸಿಗಲಿಲ್ಲ ಎಂಬ ಸಬೂಬು ಹೇಳುವುದನ್ನು ಕೇಳಿರುತ್ತೇವೆ, ಇದು ಯಾಕೆ ಸಬುಬು, ಎಂದರೆ ಯಾವುದೇ ವಿಷಯದಲ್ಲಿ ಆಸಕ್ತಿ ಮತ್ತು ಪ್ರೀತಿ ಇದ್ದರೆ ಖಂಡಿತ ಸಮಯಕ್ಕಾಗಿ ಕಾಯುವುದಿಲ್ಲ, ಎಷ್ಟೇ ಒತ್ತಡದ ಕಾರ್ಯಗಳಿದ್ದರೂ ಒಂದಿಷ್ಟು ಸಮಯವನ್ನು ಹೊಂದಿಸಿಕೊಳ್ಳುತ್ತೇವೆ.. ಆದರೆ ಆಸಕ್ತಿ ಕಡಿಮೆ ಇದ್ದಾಗ ಸಮಯ ಸಿಗಲಿಲ್ಲ ಎಂಬ ಸಬೂಬು ಹೇಳಿಕೊಂಡು ಓಡಾಡುತ್ತೇವೆ.. (ಅತಿಯಾಗಿ ಆಸಕ್ತಿ ಕೆಲಸಗಳನ್ನು ಹೆಚ್ಚಿಸಿಕೊಂಡಾಗ ಕೆಲವು ಕೆಲಸಗಳು ಹಿನ್ನಡೆ ಅನುಭವಿಸುತ್ತವೆ..)
ಮನುಷ್ಯನಿಗೆ ಜಗತ್ತಿನಲ್ಲಿ ಏನು ಬೇಕಾದರೂ ಸಿಗಬಹುದು. ಆದರೆ, ಸಿಗದಿರುವುದು ಸಮಯ ಮಾತ್ರ. ಸಮಯ ಕಳೆದುಕೊಂಡರೆ ಮತ್ತೆ ಗಳಿಸುವುದು ಸಾಧ್ಯವಿಲ್ಲ. ಅದರಲ್ಲೂ ನಾವು ಸಮಯಕ್ಕಾಗಿ ಹುಡುಕುತ್ತಿದ್ದರೆ ಅದು ಸಿಗುವುದಿಲ್ಲ, ಹಾಗಾಗಿ ಸಮಯವನ್ನು ನಾವೇ ಹೊಂದಿಸಿಕೊಳ್ಳಬೇಕು. ಮನುಷ್ಯರ ನಿಜವಾದ ಯಶಸ್ಸು ಅಂದರೆ ಅದನ್ನು ಸರಿಯಾಗಿ ಬಳಸುವುದೇ ಆಗಿದೆ, ನಾವೇನು ಕನಸು ಕಂಡಿರುತ್ತೇವೆಯೋ ಅದನ್ನು ಈಡೇರಿಸಿಕೊಳ್ಳುವುದಕ್ಕೆ ಸಮಯ ಸಿಕ್ಕರೆ, ಆಗ ನಾವು ನಿಜಕ್ಕೂ ಯಶಸ್ವಿಯಾಗಿದ್ದೇವೆ ಎಂದರ್ಥ... ಆದರೆ, ಬಹಳಷ್ಟು ಸಂದರ್ಭಗಳಲ್ಲಿ ಸಮಯವನ್ನು ಸಮರ್ಥವಾಗಿ ನಿಭಾಯಿಸಲು ಬರುವುದಿಲ್ಲ, ಇರುವ ಸಮಯವನ್ನು ವ್ಯರ್ಥ ಮಾಡಿ, ಸಿಗದಿರುವ ಸಮಯದ ವಿರುದ್ಧ ದೂಷಣೆ ಮಾಡುತ್ತ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕೆ ಪ್ರಯತ್ನಿಸುತ್ತೇವೆ. ಹೀಗಾಗಿ ಸಮಯವನ್ನು ಹೊಂದಿಸಿಕೊಳ್ಳುವುದು ಸದಾ ನಮ್ಮ ಕೈಯಲ್ಲಿ ಇದೆ
"Time and Tidevwait for none"...
