ಕಥೆ-604
ಯಾರೂ ಜತೆಗಿಲ್ಲವೆಂದು ವಿಚಲಿತರಾಗಬೇಡಿ
ನಾನು ಇದುವರೆಗೂ ಹಲವಾರು ಬಿಜಿನೆಸ್ಗಳಲ್ಲಿ ತೊಡಗಿಸಿ ಕೊಂಡಿದ್ದೇನೆ. ಆದರೆ, ಅಷ್ಟೂ ವ್ಯಾಪಾರಗಳಲ್ಲಿ ನನಗೆ ಬಹಳ ಇಷ್ಟವಾಗಿದ್ದು, ಆಟೋಮೊಬೈಲ್ ಬಿಜಿನೆಸ್. ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ಬೇರೆ ದೇಶಗಳ ಕಾರುಗಳೇ ಹೆಚ್ಚಾಗಿ ಇರುತ್ತಿದ್ದವು. ನಾವು ನಮ್ಮದೇ ಸ್ವಂತ ಕಾರು ಯಾಕೆ ಮಾಡಬಾರದು ಎಂದಾಗ ಬಹಳಷ್ಟು ಜನ ಅದು ಸಾಧ್ಯವಿಲ್ಲ ಎಂದರು.
ಸ್ವಂತ ಮಾಡುವುದಕ್ಕಿಂತ ಬೇರೆ ದೇಶಗಳ ದೊಡ್ಡ ಕಾರು ಕಂಪೆನಿಗಳ ಸಹಯೋಗದಿಂದ ನಿರ್ಮಿಸಿ ಎಂದು ಸಲಹೆ ಕೊಟ್ಟರು. ಇನ್ನೂ ಕೆಲವರು ನಾನು ಈ ಪ್ರಯೋಗದಲ್ಲಿ ದೊಡ್ಡ ಮಟ್ಟಿಗೆ ಸೋಲುತ್ತೇನೆ ಎಂದು ಭವಿಷ್ಯ ನುಡಿದರು. ಆದರೆ, ನನಗೆ ಭಾರತದ್ದೇ ಆದ ಒಂದು ಸ್ವಂತ ಕಾರು ನಿರ್ಮಿಸಬೇಕು ಎಂಬ ಆಸೆ ಇತ್ತು. ಅದರಂತೆ ಸ್ವದೇಶಿ ಕಾರಿನ ನಿರ್ಮಾಣಕ್ಕೆ ತಯಾರಿ ಶುರುವಾಯಿತು.
ಕೆಲವು ವರ್ಷಗಳ ನಂತರ ಕಾರು ಬಿಡುಗಡೆ ಆಗುವ ಹೊತ್ತಿನಲ್ಲಿ, ಯಾರೂ ನನ್ನ ಜತೆಗೆ ಇರಲಿಲ್ಲ. ಆದರೆ, ಒಳಮನಸ್ಸಿನಲ್ಲಿ ಇಂಥದ್ದೊಂದು ಯೋಜನೆ ಗೆಲ್ಲುತ್ತದೆ ಎಂಬ ವಿಶ್ವಾಸವಿತ್ತು. ಕ್ರಮೇಣ ಕಾರು ಬಿಡುಗಡೆಯಾಗಿ, ತಕ್ಕಮಟ್ಟಿಗೆ ಯಶಸ್ವಿಯೂ ಆಯಿತು. ಸೋಲು-ಗೆಲುವುಗಳಿಗಿಂಥ ಹೆಚ್ಚಾಗಿ, ಇಂಥದ್ದೊಂದು ಯೋಜನೆ ಬಹಳ ತೃಪ್ತಿ ಕೊಟ್ಟಿತ್ತು. ಜೀವನದಲ್ಲಿ ಎಷ್ಟೋ ಬಾರಿ ನಮ್ಮ ಮಹತ್ವಾಕಾಂಕ್ಷೆಯನ್ನು ಕಾರ್ಯರೂಪಕ್ಕೆ ತರಲು ಮುಂದಾಗುತ್ತೇವೆ. ಆದರೆ, ಆ ಸಂದರ್ಭದಲ್ಲಿ ಬಹಳ ಆಪ್ತರು ಕೈಜೋಡಿಸುವುದಿಲ್ಲ. ಅದರಿಂದ ವಿಚಲಿತರಾಗಬೇಡಿ. ನೀವು ಪ್ರಾಮಾಣಿಕರಾಗಿದ್ದರೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ, ಆಗ ಕಂಡಿದ್ದ ಕನಸು ನನಸಾಗುತ್ತದೆ. ನಿಮ್ಮ ಯೋಜನೆ ಯಶಸ್ವಿಯಾಗದಿದ್ದರೆ, ಏನೋ ಹೊಸದು ಮಾಡಿದ ತೃಪ್ತಿ ಇರುತ್ತದೆ. ಹೀಗಾಗಿ
ನೀವಂದುಕೊಂಡಿದ್ದನ್ನು ಸಾಧಿಸುಲು ಎದೆಗುಂದದೆ ಹೆಜ್ಜೆ ಇಡಿ.👍
-ರತನ್ ಟಾಟಾ