Tuesday, December 10, 2024

 ಕಥೆ-606

ಗುರಿ ಸಾಧನೆಗೆ ಮೊದಲ ಹೆಜ್ಜೆಯಿದು..

ನಾವು ಗುರಿ ಸಾಧನೆ ಬಗ್ಗೆ ಸಾಕಷ್ಟು ವಿಷಯಗಳನ್ನು ಕೇಳಿರುತ್ತೇವೆ. ಓದಿರುತ್ತೇವೆ. ಪ್ರತಿಯೊಬ್ಬ ಮನುಷ್ಯನಿಗೂ ಗುರಿ ಎನ್ನುವುದು ಇರಲೇಬೇಕಾ? 

ಇರಲೇಬೇಕು... ಎನ್ನುವುದಕ್ಕಿಂತ ಗುರಿ ಇದ್ದರೆ, ಆಗ ಬದುಕುವುದಕ್ಕೊಂದು ಅರ್ಥವಿರುತ್ತದೆ. ಆದರೆ, ಯಾವುದೇ ಗುರಿ, ಲಕ್ಷ್ಯ ಅಥವಾ ಧೈರ್ಯವಿಲ್ಲದ ಮನುಷ್ಯ ಏನು ತಾನು ಮಾಡುವುದಕ್ಕೆ ಸಾಧ್ಯ? ಕೆಲವರಿಗೆ ತಮ್ಮ ಜೀವನದಲ್ಲಿ ಯಾವುದೇ ಗುರಿಯನ್ನು ಇಟ್ಟುಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಇನ್ನೂ ಕೆಲವರಿಗೆ ಗುರಿಯೇನೋ ಇರುತ್ತದೆ. ಆದರೆ, ಅದನ್ನು ಸಾಧಿಸುವುದಕ್ಕೆ ಅವರಿಂದ ಅಷ್ಟು ಸುಲಭಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಯಾವತ್ತೂ ಮೊದಲಿಗೆ ದೊಡ್ಡ ಗುರಿ ಇಟ್ಟುಕೊಳ್ಳಬಾರದು. ಸಣ್ಣಸಣ್ಣ ಗುರಿಗಳನ್ನಿಟ್ಟುಕೊಂಡು, ಮೊದಲು ಅದನ್ನು ಸಾಧಿಸಿ, ಆ ನಂತರ ದೊಡ್ಡ ಗುರಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಅನಾರೋಗ್ಯ ಉಂಟಾಗಬಹುದು.. ಏಕೆಂದರೆ ನಾನೊಂದು ಕೋಟಿ ಸಂಪಾದಿಸಿಬಿಡುತ್ತೇನೆ ಎಂದು ಗುರಿ ಹಾಕಿಕೊಂಡರೆ ಆ ಒಂದು ಕೋಟಿ ಸಂಪಾದಿಸುವುದಕ್ಕೆ ಸಾಕಷ್ಟು ಸಮಯ ಬೇಕು. ಅದಕ್ಕೆ ಹಗಲು- ರಾತ್ರಿ ಕಷ್ಟಪಡಬೇಕು. ಆರೋಗ್ಯದ ಕಡೆ ಗಮನ ಕೊಡಬೇಕು ಏಕೆಂದರೆ ದೊಡ್ಡ ಗುರಿ ಕೇವಲ ಒಂದು ದಿನ ಎರಡು ದಿನದಲ್ಲಿ ಆಗುವಂತ ಕೆಲಸವಲ್ಲ..

 ಅದಕ್ಕೆ ಹಂತಹಂತವಾಗಿ ಬೆಳೆಯಬೇಕು. ಹಾಗೆಯೇ ಯಾವುದೋ ಒಂದು ರಂಗದಲ್ಲಿ ಸಾಧನೆ ಮಾಡಬೇಕೆಂದುಕೊಂಡರೆ ಅದಕ್ಕೆ ಬೇಕಾಗಿರುವುದು ಆರೋಗ್ಯಕರ ದೇಹ, ಚುರುಕಾದ ಬುದ್ಧಿ, ಗಟ್ಟಿ ಮನಸ್ಥಿತಿ ಎಲ್ಲವೂ ಬೇಕಾಗುತ್ತದೆ. ಪ್ರಮುಖವಾಗಿ ಆರೋಗ್ಯಕರ ದೇಹವಿಲ್ಲದವನು ಜೀವನದಲ್ಲಿ ಏನೂ ಸಾಧಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಏನೇ ಮಾಡುವುದಕ್ಕೂ ಮೊದಲು ನಮ್ಮ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಮೊದಲು ಆರೋಗ್ಯ ಚೆನ್ನಾಗಿದ್ದರೆ, ಎಂತಹ ದೊಡ್ಡ ಗುರಿಯನ್ನಾದರೂ ಬೆನ್ನತ್ತಬಹುದು. ಹೀಗಾಗಿ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಬೇಕಿದೆ.

 ರಾಮದೇವ್ ಯೋಗಗುರು

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು