ಕಥೆ-607
ಬದಲಾವಣೆ ಜಗದ ನಿಯಮ
ಅವರು ಒಳ್ಳೆಯವರು, ಇವರು ಕೆಟ್ಟವರು ಎಂದು ಕೆಲವೊಮ್ಮೆ ನಾವು ತೀರ್ಮಾನ ಮಾಡಿಬಿಡುತ್ತೇವೆ. ಇಷ್ಟಕ್ಕೂ ಒಳ್ಳೆಯವರು ಮತ್ತು ಕೆಟ್ಟವರು ಎಂದು ನಿರ್ಧರಿಸುವುದು ಹೇಗೆ? ಯಾರೂ ಸಹ ಒಂದು ಕಾರಣವಿಲ್ಲದೆ ಕೆಟ್ಟವರಾಗುವುದಕ್ಕೆ ಸಾಧ್ಯವಿಲ್ಲ. ಒಳ್ಳೆಯರಾಗುವುದಕ್ಕೆ ಹೇಗೆ ಒಂದು ಕಾರಣವಿರುತ್ತದೋ, ಕೆಟ್ಟವರಾಗುವುದಕ್ಕೆ ಸಹ ಒಂದಿಲ್ಲೊಂದು ಕಾರಣ ಇದ್ದೇ ಇರುತ್ತದೆ. ಅವರ ಮನಸ್ಸು ಯಾವುದೋ ಕಾರಣಕ್ಕೆ ಘಾಸಿಯಾಗಿರುತ್ತದೆ. ಅವರನ್ನು ನೆಗೆಟಿವಿಟಿ ಆಕ್ರಮಿಸಿಕೊಂಡಿರುತ್ತದೆ ಮತ್ತು ಆ ಕಾರಣಕ್ಕೆ ಅವರು ಆ ರೀತಿ ಆಡುತ್ತಿರುತ್ತಾರೆ. ಅಂಥವರಿಂದ ಜನ ದೂರ ಇದ್ದುಬಿಡುತ್ತಾರೆ. ಅವರ ಸಹವಾಸವೇ ಬೇಡ ಎಂದು ಉಳಿದುಬಿಡುತ್ತಾರೆ. ಒಬ್ಬ ಶಿಕ್ಷಕ ಯಾರೋ ಒಬ್ಬರಿಗೆ ಪಾಠ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳುವುದಕ್ಕೆ ಆಗುವುದಿಲ್ಲ. ಒಬ್ಬ ವೈದ್ಯ ಯಾರಿಗೋ ಚಿಕಿತ್ಸೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಲು ಆಗುವುದಿಲ್ಲ. ಬದಲಾವಣೆ ಜಗದ ನಿಯಮ ಬದಲಾಗಬೇಕು ಅದು ಒಳ್ಳೆಯದರ ಕಡೆಗೆ....