ಕಥೆ-608
ಹಠ, ಛಲವಿದ್ದರಷ್ಟೇ ಇತಿಹಾಸ
ಆತ ಇತಿಹಾಸ ಸೃಷ್ಟಿಸಿದ, ಈತ ಇತಿಹಾಸ ಬರೆದ ಅಂತೆಲ್ಲ ನಾವು ಓದುತ್ತಿರುತ್ತೀವಿ, ಕೇಳುತ್ತಿರುತ್ತೀವಿ. ಆದರೆ, ಇತಿಹಾಸ ಸೃಷ್ಟಿಸಿದ್ದು ಯಾರು ಅಂತ ಒಮ್ಮೆ ಸೂಕ್ಷ್ಮವಾಗಿ ಗಮನಿಸಿ. ಹಠ ಇದ್ದೋರು ಮಾತ್ರ ಇತಿಹಾಸ ಸೃಷ್ಟಿಸುವುದಕ್ಕೆ ಸಾಧ್ಯ ಮತ್ತು ಇತಿಹಾಸದ ಪುಟಗಳನ್ನು ನೋಡಿದರೆ, ಹಠವಿದ್ದವರು ಮಾತ್ರ ಇತಿಹಾಸ ಸೃಷ್ಟಿಸಿರುವುದನ್ನು ನೋಡಬಹುದು. ಸಂಸ್ಥೆ, ವ್ಯಕ್ತಿ ಯಶಸ್ವಿಯಾಗಿದ್ದರೆ, ಜಗತ್ತಿನಲ್ಲಿ ದೊಡ್ಡ ಪರಿವರ್ತನೆಯಾಗಿದ್ದರೆ, ಅದಕ್ಕೆ ಮುಖ್ಯ ಕಾರಣ ಹಠ. ದಶರಥ್ ಮಾಂಜಿ ಹೆಸರು ಕೇಳಿರಬಹುದು. 22 ವರ್ಷಗಳ ಕಾಲ ಬೆಟ್ಟ ಕೊರೆದು ರಸ್ತೆ ಮಾಡಿದವರು. ನಂಬಿಕೆ ಮತ್ತು ಹಠದಿಂದಲೇ ಅವರು ಇಂಥದ್ದೊಂದು ಅಸಾಧ್ಯವನ್ನು ಸಾಧಿಸಿದರು. ನೆಲ್ಸನ್ ಮಂಡೇಲರನ್ನು 28 ವರ್ಷ ಜೈಲಿಗೆ ತಳ್ಳಲಾಗಿತ್ತು. ಮುಂದೊಂದು ದಿನ ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯೊಂದು ಅವರನ್ನು ಅಷ್ಟು ದಿನ ಜೈಲಿನಲ್ಲಿರುವಂತೆ ಮಾಡಿತ್ತು. ಗಾಂಧೀಜಿಯನ್ನು ಬ್ರಿಟಿಷರು ರೈಲಿನಿಂದ ನೂಕಿ ಅವಮಾನ ಮಾಡಿದ್ದರಿಂದಲೇ, ಅವರು ಮುಂದೊಂದು ದಿನ ಭಾರತದಿಂದ ಬ್ರಿಟಿಷರು ಬಿಟ್ಟು ಹೋಗುವಂತೆ ಮಾಡಿದರು. ಭಗತ್ ಸಿಂಗ್, ಮೇರಿ ಕೋಮ್, ಮಲಾಲ ಉದಾಹರಣೆಯನ್ನಾದರೂ ತೆಗೆದುಕೊಳ್ಳಿ.
ಜನರ ಮನಸ್ಸಿನಲ್ಲಿ ಹಸಿರಾಗಿ ಉಳಿದಿದ್ದಾರೆಂದರೆ ಅವರೆಲ್ಲದ ಹಠ ಮತ್ತು ಕೆಲಸದಲ್ಲಿ ಅವರಿಟ್ಟಿದ್ದ ನಂಬಿಕೆ ಮಾತ್ರ.