ಕಥೆ-610
ಚಂದಿರ ಗುರು ಹತ್ತಿರ
ಭೂಮಿಯಿಂದ 890 ದಶಲಕ್ಷ ಕಿಲೋಮೀಟರ್ ದೂರದಲ್ಲಿರುವ ಗುರು ಗ್ರಹವು ಸೌರಮಂಡಲದ ಅತಿ ದೊಡ್ಡ ಗ್ರಹವಾಗಿದೆ. ಗಾತ್ರದಲ್ಲಿ ಭೂಮಿಗಿಂತ 11 ಪಟ್ಟು ದೊಡ್ಡದಾಗಿದೆ. ಕ್ಷುದ್ರಗ್ರಹಗಳನ್ನು ತನ್ನತ್ತ ಸೆಳೆದುಕೊಂಡು ಉಪಗ್ರಹ ಮಾಡಿಕೊಂಡ ದೈತ್ಯ ಗ್ರಹ ಇದು. ಇಂಥ ಗುರು ಗ್ರಹ ಮೂರು ಪ್ರಧಾನ ಉಪಗ್ರಹಗಳನ್ನು ಹೊಂದಿದೆ. ಅವುಗಳೆಂದರೆ ಗ್ಯಾನಿಮೇಡಾ, ಯುರೋಪ ಮತ್ತು ಕ್ಯಾಲಿಸ್ಟೊ. ಈ ಉಪಗ್ರಹಗಳಲ್ಲಿ ಜೀವಿಗಳಿರುವ ಸಾಧ್ಯತೆ ಬಗ್ಗೆ ಪ್ರಬಲ ಶಂಕೆ ಇದೆ. ಈ ಕಾರಣದಿಂದಾಗಿ ಈ ಉಪಗ್ರಹಗಳ ಕುರಿತ ಹೆಚ್ಚಿನ ಸಂಶೋಧನೆಗಾಗಿ ಯೂರೋಪಿಯನ್ ಬಾಹ್ಯಾಕಾಶ ಏಜೆನ್ಸಿ(European Space Agency) ಜ್ಯೂಸ್ ಮಿಷನ್ (JUICE Mission) ಅನ್ನು ಗುರುವಿನ ಕಕ್ಷೆಗೆ ಕಳುಹಿಸಿದೆ. ಜ್ಯೂಸ್’ ಎಂದರೆ ಜ್ಯುಪಿಟರ್ ಐಸಿ ಮೂನ್ಸ್ ಎಕ್ಸ್‌ಪ್ಲೋರರ್(Jupiter Icy Moons Explorer– Juice). ಗುರುವಿನ ಚಂದ್ರಗಳ ಮೇಲ್ಮೈನಲ್ಲಿರುವ ಜೀವಿಗಳ ಕುರುಹು ಪತ್ತೆಗಾಗಿ ಯುರೋಪಿಯನ್ ಸ್ಪೇಸ್ ಏಜೆನ್ಸಿ ಇದನ್ನು ಸಿದ್ದಪಡಿಸಿದೆ..
ಗುರು ಗ್ರಹದ ವಾಯುಗೋಳವು ಜಲಜನಕ, ಮೀಥೇನ್ ಮತ್ತು ಹೀಲಿಯಂ ಗಳಿಂದ ಆವೃತವಾಗಿದೆ. ಈ ಗ್ರಹವನ್ನು ಕಂಡುಹಿಡಿದವರು ಗೆಲಿಲಿಯೋ ಗೆಲಲಿ. ಗೆಲಿಲಿಯೋ ಕಂಡು ಹಿಡಿದ ನಾಲ್ಕು ಉಪಗ್ರಹಗಳೆಂದರೆ ಕ್ಯಾಲಿಸ್ಟೊ, ಯುರೋಪ, ಗ್ಯಾನಿಮೆಡ ಮತ್ತು ಐಯೊ ಹೊ. ಇವುಗಳಲ್ಲಿ ಎಂಟು ಜೀವಂತ ಜ್ವಾಲಾಮುಖಿಗಳಿವೆ.
ಚಂದ್ರನ ನೆಲದಲ್ಲಿ ಮನುಷ್ಯ ಹಲವು ಗಂಟೆಗಳು ಕಳೆದ ಕಾರಣ, ಆ ಉಪಗ್ರಹದ ಬಗ್ಗೆ ತಕ್ಕಮಟ್ಟಿಗಿನ ತಿಳಿವಳಿಕೆ ಬಂದಿದೆ. ಮಂಗಳ ಮತ್ತು ಶುಕ್ರ ಗ್ರಹಗಳ ಮೇಲೆ ಆಗಾಗ್ಗೆ ರೋವರ್ ಗಳನ್ನು ಇಳಿಸಿದ ಮೇಲೆ ಹಲವಾರು ಸಂಶೋಧನೆಗಳಾಗಿವೆ. ಆದರೆ ಸೌರವ್ಯೂಹದ ಅತಿ ದೊಡ್ಡ ಗ್ರಹ ಗುರುವಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಕಾರಣ, ಅದು ಭೂಮಿಯಿಂದ ಸಾಕಷ್ಟು ದೂರದಲ್ಲಿದೆ. ಪ್ರಸ್ತುತ ನಾಸಾ ಕೈಗೊಳ್ಳುತ್ತಿರುವ ಸಂಶೋಧನೆಯಿಂದಲಾದರೂ ಗುರು ಗ್ರಹದ ಬಗೆಗಿನ ರಹಸ್ಯಗಳು ಹೊರಬರುತ್ತವೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಡಿಸೆಂಬರ್ 14 ಮತ್ತು 15 ರ ರಾತ್ರಿ ಗುರು ಗ್ರಹವು ಚಂದ್ರನ ಸಮೀಪ ಗೋಚರಿಸುತ್ತದೆ, ಇದು ಚಂದಿರನ ಹತ್ತಿರ ನಕ್ಷತ್ರದಂತೆ ಕಾಣುತ್ತದೆ, ಕಾರಣ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತದೆ. ಗುರು ಗ್ರಹವನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು.. ಹೆಚ್ಚು ವರ್ಧನೆ ಕ್ಯಾಮೆರಾ, ಟೆಲಿಸ್ಕೋಪ್ ಗಳನ್ನು ಬಳಸಿ ಸ್ಪಷ್ಟವಾಗಿ ನೋಡಬಹುದು...
-ಶಂಕರಗೌಡ ಬಸಾಪೂರ