ಕಥೆ-613
ಸೋಲಿನ ಪಾಠ ಪ್ರಶಸ್ತಿಯಾಗಲಿ
ದೊಡ್ಡ ಮತ್ತು ದುಬಾರಿ ಕಾಲೇಜುಗಳಲ್ಲಿ ಓದಿದರೆ ಜೀವನದಲ್ಲಿ ಯಶಸ್ವಿಯಾಗಬಹುದು ಎಂಬ ನಂಬಿಕೆ ಹಲವರಲ್ಲಿದೆ. ದೊಡ್ಡ ಕಾಲೇಜುಗಳಲ್ಲಿ ಓದಿದರೆ ಸಹಾಯವಾಗಬಹುದು. ಆದರೆ, ಅದರಿಂದ ಗುರಿ ಸಾಧಿಸಬಹುದು, ದೊಡ್ಡ ಹೆಸರು ಮಾಡಬಹುದು ಎನ್ನುವುದೆಲ್ಲವೂ ಸುಳ್ಳು.
ಗುರಿ ಸಾಧಿಸುವುದಕ್ಕೆ ಮುಖ್ಯವಾಗಿ ನೀವು ಕನಸು ಕಾಣಬೇಕು. ಕಂಡ ಕನಸನ್ನು ನನಸಾಗಿಸಿಕೊಳ್ಳುವುದಕ್ಕೆ ಸಾಕಷ್ಟು ಶ್ರಮ ಹಾಕಬೇಕು. ಹಗಲು, ರಾತ್ರಿ ಎನ್ನದೆ ಕೆಲಸ ಮಾಡಬೇಕು. ಕೆಲವೊಮ್ಮೆ ಕುಟುಂಬದವರಿಂದ ದೂರ ಉಳಿಯಬೇಕಾದ ಸಂದರ್ಭವೂ ಎದುರಾಗಬಹುದು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ತನು-ಮನವನ್ನು ಆ ಕೆಲಸಕ್ಕೆ ಅರ್ಪಿಸಬೇಕು. ಅಷ್ಟೆಲ್ಲಾ ಆದರೂ ನೀವು ಯಶಸ್ವಿಯಾಗಬಹುದು ಎಂದು ಹೇಳುವುದು ಕಷ್ಟ. ಏಕೆಂದರೆ, ನಿಮ್ಮ ತಲೆಯಲ್ಲಿನ ಐಡಿಯಾ ಅದ್ಭುತವಾಗಿರಬಹುದು. ಆದರೆ, ಅದು ಕಾರ್ಯರೂಪಕ್ಕೆ ಹೇಗೆ ಬರುತ್ತದೆ ಎಂಬುದು ಬಹಳ ಮುಖ್ಯ. ಸ್ವಲ್ಪ ಯಡವಟ್ಟಾದರೂ ನೀವು ಸೋಲುವ ಸಾಧ್ಯತೆಗಳು ಹೆಚ್ಚಿರುತ್ತವೆ.ಅಂತಹ ಸಂದರ್ಭದಲ್ಲಿ ಧೃತಿಗೆಡುವುದು ಹತಾಶರಾಗುವುದು ಸಹಜವೇ. ಇಂಥ ಸಂದರ್ಭದಲ್ಲಿ ನಮ್ಮನ್ನು ಕಾಪಾಡುವುದು ನಂಬಿಕೆ. ಸೋಲಿನ ಪಾಠವನ್ನು ಪ್ರಶಸ್ತಿಯಾಗಿ ಪರಿಗಣಿಸಿ. ನಾವು ಮಾಡುವ ಕೆಲಸದ ಮೇಲೆ ಮೊದಲಿಗೆ ನಮಗೆ ನೆನಪಿರಬಹುದು. ಒಂದು ಕೆಲಸದಲ್ಲಿ ಸೋಲು, ಗೆಲುವುಗಳು ಸಹಜ. ಸೋತ ತಕ್ಷಣ ನಂಬಿಕೆಯನ್ನೇ ಬಿಡಬಾರದು. ಎಷ್ಟೋ ಬಾರಿ, ಅದೇ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನ ಮಾಡಿದಾಗ. ನೀವು ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾಗಿ ಎಷ್ಟೇ ಕಷ್ಟವಾದರೂ ನಂಬಿಕೆ ಕಳೆದುಕೊಳ್ಳಬೇಡಿ ಮತ್ತು ನಿಮ್ಮ ಪ್ರಯತ್ನವನ್ನು ನಿಲ್ಲಿಸಬೇಡಿ. ಆ ಕ್ಷಣಕ್ಕೆ ಸೋತರೂ, ಗೆಲುವು ಖಂಡಿತ ನಿಮ್ಮದೇ.
-ಸುಂದರ್ ಪಿಚೈ ಗೂಗಲ್ ಸಿಇಒ