Saturday, February 8, 2025

 ಕಥೆ-661

ಬೇರುಗಳನ್ನು ಮರೆಯದಿರೋಣ -ಕ್ರಿಶ್ಚಿಯಾನೋ ರೊನಾಲ್ಡೋ

ಖ್ಯಾತ ಫುಟ್‌ಬಾಲ್‌ ತಾರೆ ಕ್ರಿಶ್ಚಿಯಾನೋ ರೊನಾಲ್ಡೋ ಬಹಳ ಕಷ್ಟದಿಂದ ಎತ್ತರಕ್ಕೇರಿದವರು. ಕುಡಿತದ ದಾಸನಾದ ತಂದೆ, ಮನೆಗೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದ ತಾಯಿ, ಮುರುಕು ಮನೆ! ಅರೆಹೊಟ್ಟೆ! ಬದುಕು ಕಷ್ಟವಿತ್ತು! ಭವಿಷ್ಯ ಅಸ್ಪಷ್ಟವಾಗಿತ್ತು! ಬಹುತೇಕರ ಪ್ರಕಾರ ಈ ಪರಿಸ್ಥಿತಿ ಮೇಲೇಳಲಾಗದ ಪ್ರಪಾತ! ಆದರೆ ರೊನಾಲ್ಡೋ ತಮ್ಮ ಭವಿಷ್ಯದ ಶಿಲ್ಪಿ ತಾವೇ ಆಗುವ ದೃಢ ನಿರ್ಧಾರ ಕೈಗೊಂಡರು. ತನ್ನ ಭವಿಷ್ಯ ಇರುವುದು ಫುಟ್‌ಬಾಲ್‌ನಲ್ಲಿಯೇ ಎಂಬುದು ಅವರಿಗೆ ಸ್ಪಷ್ಟವಾಗಿತ್ತು! ಫುಟ್‌ಬಾಲ್‌ ಅಭ್ಯಾಸ ನಡೆಸಿ ಹಸಿವಾದಾಗ ತಿನ್ನಲು ಹಣವಿಲ್ಲದೇ ಹೋಟೇಲಿನ ಹಿಂಭಾಗಕ್ಕೆ ಹೋಗಿ ಉಳಿದ ಆಹಾರ ಕೊಡುವಂತೆ ರೊನಾಲ್ಡೋ ಕೇಳಿದ್ದೂ ಇದೆ. ಇಂತಹ ರೊನಾಲ್ಡೋ ಈಗ ಜಗತ್ತಿನ ನಂಬರ್‌ ಒನ್‌ ಫುಟ್‌ಬಾಲ್‌ ಆಟಗಾರ. ಬಯಸಿದ್ದೆಲ್ಲ ಪಡೆಯುವ ಅವಕಾಶವಿರುವವರು. ಇತ್ತೀಚೆಗೆ ರೊನಾಲ್ಡೋ ಲಿಸ್ಬನ್‌ನಲ್ಲಿ ತಾವು ಬಾಲ್ಯದಲ್ಲಿ ವಾಸಿಸುತ್ತಿದ್ದ ಸ್ಥಳವನ್ನು ತೋರಿಸಲೆಂದು ಮಗನನ್ನು ಕರೆದುಕೊಂಡು ಹೋಗಿದ್ದರು. “ಅಪ್ಪಾ ನಿಜವಾಗಿಯೂ ನೀನು ಇಲ್ಲಿದ್ದೆಯಾ “ಎಂದು ಅಚ್ಚರಿಯಿಂದ ಕೇಳಿದ ಮಗ! ಅದಕ್ಕೇ ರೊನಾಲ್ಡೋ ಹೇಳುತ್ತಾರೆ, “ಈಗಿನ ಮಕ್ಕಳು ಎಲ್ಲವೂ ಬಹಳ ಸುಲಭವಾಗಿ ಸಿಗುತ್ತದೆ ಎಂದು ತಿಳಿದಿದ್ದಾರೆ. ಅತ್ಯುತ್ತಮ ಬದುಕು, ಮನೆ, ಕಾರು ಎಲ್ಲವೂ ಆಕಾಶದಿಂದ ಉದುರುತ್ತವೆಂದೂ ಭ್ರಮಿಸುತ್ತಾರೆ. ಇವೆಲ್ಲ ಸುಮ್ಮನೇ ಸಿಗುವುದಿಲ್ಲ. ಕೇವಲ ಪ್ರತಿಭೆಯಿಂದಲೂ ಸಿಗುವುದಿಲ್ಲ. ಎಡಬಿಡದೇ ಪ್ರಯತ್ನಿಸುವುದರಿಂದ ಮಾತ್ರವೇ ಸಿಗಲು ಸಾಧ್ಯ. ದೃಢ ನಿರ್ಧಾರ ಮತ್ತು ಪರಿಶ್ರಮದಿಂದ ಏನನ್ನು ಬೇಕಾದರೂ ಸಾಧಿಸಬಹುದೆಂದು ಕೇವಲ ನನ್ನ ಮಕ್ಕಳಿಗೆ ಮಾತ್ರವಲ್ಲ ನಾನು ಭೇಟಿಯಾಗುವ ಯುವಕರಿಗೆಲ್ಲ ಹೇಳಲಿಚ್ಛಿಸುತ್ತೇನೆ.”   

ತಮಗಿಲ್ಲದಿದ್ದರೂ ಮಕ್ಕಳಿಗಾದರೂ ಎಲ್ಲ ಸೌಲಭ್ಯ ಸಿಗಲಿ ಎಂದು ಪಾಲಕರು ಮಾಡುವ ಪ್ರಾಮಾಣಿಕ ಪ್ರಯತ್ನಗಳೇ ಇಂದು ಮಕ್ಕಳ ಪಾಲಿಗೆ ಶಾಪವಾಗುತ್ತಿವೆ. ದುಡ್ಡು ಮೊಬೈಲ್‌ನಲ್ಲೋ ಎಟಿಎಮ್‌ನಲ್ಲೋ ಇದೆ ಎಂಬುದವರಿಗೆ ಗೊತ್ತೇ ಹೊರತು ಅದಕ್ಕೆ ತಂದೆತಾಯಿ ಎಷ್ಟು ಕಷ್ಟಪಟ್ಟು ದುಡಿಯಬೇಕು ಎಂಬ ಅರಿವಿರುವುದಿಲ್ಲ. ಪಾಲಕರೂ ಅಷ್ಟೇ, ಒಂದು ಪೆನ್ಸಿಲ್‌ ಕೇಳಿದರೆ ಒಂದು ಬಾಕ್ಸ್‌, ಒಂದು ಪೆನ್ನು ಕೇಳಿದರೆ ನಾಲ್ಕು ಪೆನ್ನು ಕೊಡಿಸಿ ಹಣದ ಮೌಲ್ಯವನ್ನು ಇಳಿಸಿಬಿಟ್ಟಿದ್ದಾರೆ. . ಹಾಗಾಗಿ ತಮ್ಮ ವಸ್ತುಗಳನ್ನು ಕಾಳಜಿಯಿಂದ ಇಟ್ಟುಕೊಂಡು ಉಪಯೋಗಿಸುವ ಬದಲು ಕಳೆದರೆ ಹೊಸದು ಕೊಂಡರಾಯಿತು ಎನ್ನುವ ಯೋಚನೆ ಈಗಿನ ಮಕ್ಕಳಿಗೆ. ಮಕ್ಕಳು ಆಕಾಶ ಮುಟ್ಟಬೇಕೆನ್ನುವ ಕನಸು ಸಹಜವೇ, ಆದರೆ ಬೇರುಗಳನ್ನು ಮರೆತರೆ ಬದುಕಿಲ್ಲವೆಂಬ ವಾಸ್ತವವನ್ನು, ಮುನ್ನಗ್ಗುವ ಧಾವಂತದಲ್ಲಿ ಹಿಂದಿರುಗಿ ನೋಡುವ ಅಗತ್ಯವನ್ನು ಜತೆಗೆ ಹಣದ ಮೌಲ್ಯವನ್ನು ಹಿರಿಯರೂ ನೆನಪಿಟ್ಟುಕೊಂಡು ಮಕ್ಕಳಿಗೂ ಕಲಿಸಬೇಕಿದೆ.   

ಜೊತೆಗೆ ದೃಢ ನಿರ್ಧಾರ ಮತ್ತು ಪರಿಶ್ರಮದಿಂದ ಏನನ್ನು ಬೇಕಾದರೂ ಸಾಧಿಸಬಹುದೆಂದು ತಿಳಿಸಿಕೊಡಬೇಕಿದೆ...

-ಕ್ರಿಶ್ಚಿಯಾನೋ ರೊನಾಲ್ಡೋ

(ಸಂಗ್ರಹ-ದೀಪಾ ಹಿರೇಗುತ್ತಿ)

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು