ಕಥೆ-664
ಮಾನಸಿಕ ಸ್ವಾಸ್ಥ್ಯ ಮುಖ್ಯ (ಪರೀಕ್ಷಾ ಪೇ ಚರ್ಚೆ)
---ದೀಪಿಕಾ ಪಡುಕೋಣೆ
ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸುವ ಸಂಭಾಷಣೆ ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದಲ್ಲಿ ನಟಿ ದೀಪಿಕಾ ಪಡುಕೋಣೆ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಮಾತನಾಡಿದರು. '2015ರಲ್ಲಿ ನಾನು ಖಿನ್ನತೆಗೆ ಒಳಗಾಗಿದ್ದಾಗ ಅದರ ಕುರಿತು ಮಾತನಾಡುವುದಕ್ಕೆ ಅವಕಾಶವಿರಲಿಲ್ಲ. ಆದರೆ ಮನಬಿಚ್ಚಿ ಮಾತನಾಡತೊಡಗಿ ದಾಗ ನಾನು ಹಗುರಳಾಗುತ್ತಿದ್ದೆ. ಅಲ್ಲಿಂದ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಶುರು ಮಾಡಿದೆ' ಎಂದರು.
ಖಿನ್ನತೆ ಎದುರಿಸುವ ಬಗೆಯನ್ನು ತಮ್ಮ ಅನುಭವದೊಂದಿಗೆ ವಿವರಿಸಿದ ನಟಿ, 'ಪ್ರಧಾನಿ ಮೋದಿಯವರ 'Exam ವಾರಿಯರ್ಸ್' ಪುಸ್ತಕದಲ್ಲಿ ಹೇಳಿರುವಂತೆ ಭಾವನೆ ನಿಗ್ರಹಿಸುವ ಬದಲು ವ್ಯಕ್ತಪಡಿಸಬೇಕು. 2014ರಲ್ಲಿ ನಿರಂತರವಾಗಿ ಕೆಲಸದಲ್ಲಿ ತೊಡಗಿದ್ದ ನಾನು ಇದ್ದಕ್ಕಿದ್ದಂತೆ ಒಂದು ದಿನ ಪ್ರಜ್ಞಾಹೀನಳಾದೆ. ಆಗ ನನ್ನ ತಾಯಿಗೆ ಏನೋ ಸಮಸ್ಯೆ ಇರುವುದು ತಿಳಿಯಿತು. ಆ ಬಗ್ಗೆ ವಿಚಾರಿಸಿದಾಗ ನನಗೆ ಏನಾಗುತ್ತಿತ್ತೆಂದು ತಿಳಿಯದೆ, ಜೀವನ ಸಾಕೆನಿಸುತ್ತಿದೆ ಎಂದೆ. ಆಗ ಅವರು ನನ್ನನ್ನು ಮನಶ್ಯಾಸ್ತ್ರಜ್ಞರ ಬಳಿ ಕರೆದೊಯ್ದರು' ಎಂದರು.
ಆರೋಗ್ಯಕರ ಸಲಹೆ ಏನೆಂದರೆ
ಅಧಿಕ ಬಿಸಿಲು, ಸ್ವಚ್ಛ ಗಾಳಿಗೆ ಒಡ್ಡಿಕೊಳ್ಳಿ. ಆಗಾಗ ಸಣ್ಣ ವಿರಾಮ ಪಡೆದು ಮನಸ್ಸಿಗೆ ವಿಶ್ರಾಂತಿ ನೀಡಿ, ಸಂಯಮ ದಿಂದಿರಿ. ಹೆಚ್ಚು ನೀರು ಕುಡಿದು, ಒಳ್ಳೆನಿದ್ದೆ, ವ್ಯಾಯಾಮ, ಧ್ಯಾನ ಮಾಡಿ' ಮಾನಸಿಕ ಆರೋಗ್ಯ ಚೆನ್ನಾಗಿದ್ದರೆ ನಿಮ್ಮ ಪರೀಕ್ಷೆಯ ಫಲಿತಾಂಶ ಉತ್ತಮವಾಗಿರುತ್ತದೆ
....ದೀಪಿಕಾ ಪಡುಕೋಣೆ
👍💐💐💐💐