ಕಥೆ-674
Be positive &
Think positive..
"ಒಮ್ಮೆ ಒಬ್ಬ ಕಲಾವಿದ 3 ದಿನಗಳ ಕಾಲ ಕಷ್ಟಪಟ್ಟು ಒಂದು ಅಧ್ಭುತವಾದ ಪೇಂಟಿಂಗ್
ಅನ್ನು ರಚಿಸಿದ.
ಆ ಪೇಂಟಿಂಗ್ ಹೇಗಿದೆ ಎಂದು ಜನಗಳ ಅಭಿಪ್ರಾಯ ತಿಳಿಯ ಬೇಕೆಂದು ಆಸೆಪಟ್ಟ
ನಾಲ್ಕು ರಸ್ತೆ ಸೇರುವ ವೃತ್ತದಲ್ಲಿ ಅದನ್ನು ಪ್ರದರ್ಶನ ಮಾಡಿದ. ಅದರ ಕೆಳಗೆ ಹೀಗೊಂದು ಸಾಲನ್ನು ಬರೆದಿದ್ದ "ನಾನು ಮೊದಲ ಬಾರಿ ಬರೆದ ಪೇಂಟಿಂಗ್ ಇದು.
ಇದರಲ್ಲಿ ಲೋಪಗಳು ನಿಮಗೆ ಕಾಣಿಸಬಹುದು. ಎಲ್ಲಿ ಲೋಪ ಕಾಣುತ್ತದೆಯೋ ಅಲ್ಲಿ '×' ಚಿಹ್ನೆ ಬರೆಯಿರಿ "ಎಂದು ಅದರಲ್ಲಿತ್ತು .
ಸಂಜೆಯ ಹೊತ್ತಿಗೆ ಆ ಚಿತ್ರಕಾರ ಪುನಃ ಬಂದು ಚಿತ್ರವನ್ನು ನೋಡಿದ. ಆತನಿಗೆ ಒಮ್ಮೆಲೇ ಅಳು ಬಂದಿತು.ಕಾರಣ ಏನಂದರೆ ಆ ಚಿತ್ರದ ತುಂಬಾ '×' ಚಿನ್ಹೆಗಳೇ ತುಂಬಿ ಹೋಗಿತ್ತು.
ಚಿತ್ರಕಾರ ಅಳುತ್ತಾ ತನಗೆ ಚಿತ್ರಕಲೆ ಹೇಳಿಕೊಟ್ಟ ಗುರುವಿನ ಬಳಿಗೆ ಬಂದು ಈ ರೀತಿ ಹೇಳಿದ "ನಾನು ಪೇಂಟಿಂಗ್ ಮಾಡಲು ಸಾಧ್ಯವಿಲ್ಲ ಎಂದು ಈ ದಿನ ನನಗೆ ತಿಳಿಯಿತು" ಎಂದು ನಡೆದ ವಿಷಯ ತಿಳಿಸಿ ವಿಷಾದಿಸಿದ.
ಗುರುಗಳು ಆತನಿಗೆ ಸಮಾಧಾನ ಮಾಡಿ ಮತ್ತೆ ಆದೇ ಪೇಂಟಿಂಗ್ ಅನ್ನು ಪುನಃ ರಚನೆ ಮಾಡು ಎಂದು ಹೇಳಿದರು. ಮತ್ತೊಮ್ಮೆ ಆ ಪೇಂಟಿಂಗ್ ಬರೆದು ತಂದನು.
ಈ ಬಾರಿ ಕೂಡ ಅದೇ ಸ್ಥಳದಲ್ಲಿ ಇಟ್ಟು ಕೆಳಗೆ ಹೀಗೆ ಬರೆಯಲು ಗುರುಗಳು ಸೂಚಿಸಿದರು::;; .."ನಾನು ಬರೆದ ಮೊದಲ ಪೇಂಟಿಂಗ್ ಇದು. ಇದರಲ್ಲಿ ನಿಮಗೆ ಲೋಪಗಳು ಕಾಣಿಸಬಹುದು . ಎಲ್ಲಿ ಲೋಪ ಕಾಣುತ್ತದೆಯೋ ಅಲ್ಲಿ ಕೆಳಗೆ ಇಟ್ಟಿರುವ ಕುಂಚ ಹಾಗೂ ವರ್ಣಗಳನ್ನು ಉಪಯೋಗಿಸಿ ಸರಿ ಮಾಡಿ" ಎಂದು. ಗುರುಗಳು ಹೇಳಿದಂತೆ ಬರೆದು ಅಲ್ಲಿಟ್ಟನು.
ಒಂದು ವಾರ ಕಾಲ ಕಳೆದರೂ..
ಒಬ್ಬರೂ ಅದರಲ್ಲಿರುವ ಲೋಪಗಳನ್ನು ಸರಿಪಡಿಸಲಿಲ್ಲ..
ಆತನಿಗೆ ಆಶ್ಚರ್ಯವಾಯಿತು..
ತಪ್ಪುಗಳನ್ನು ಕಂಡುಹಿಡಿದವರು ಅದನ್ನು ಸರಿಪಡಿಸಿ ಎಂದು ಹೇಳಿದಾಗ ಒಬ್ಬರಿಂದಲೂ ಆಗಲಿಲ್ಲವೇಕೆ ..? ಯೋಚಿಸಿದನು.
ನಂತರ ಅವನಿಗೆ ಅರ್ಥವಾಯಿತು..
ಇದು ನಮಗೂ ಅರ್ಥವಾಗಬೇಕಿದೆ...
ನಮ್ಮಲ್ಲಿ ತಪ್ಪುಗಳು ಇರದೇ ಇದ್ದರೂ ಕೂಡ ತೋರಿಸಲು ಅನೇಕರು ಇದ್ದಾರೆ.
ಆದರೆ ಸರಿಪಡಿಸಲು
ಅದು ಅವರಿಂದಾಗದು...!!
ಕೆಲ ಜನರ ನಿಂದನೆಗಳಿಗೆ, ಅವಮಾನಗಳಿಗೆ ಸುಳ್ಳು ಆರೋಪಗಳಿಗೆ ತಲೆಕೆಡಿಸಿಕೊಳ್ಳಬೇಡಿ,
ನಿಮ್ಮ ಸ್ವಾಭಿಮಾನ, ಆತ್ಮವಿಶ್ವಾಸದೊಂದಿಗೆ ಈ ಜಗತ್ತನ್ನು ನೋಡುತ್ತಾ ಮುಂದೆ ಸಾಗಿರಿ.
You Will win..👍
Be positive &
Think positive..!!