Thursday, February 27, 2025

 ಕಥೆ-676

ಯಶಸ್ವಿ ಆಗಬೇಕು ಎಂದರೆ 

ಗುರಿ ಮತ್ತು ನಿಯಮಗಳಿಗೆ ಬದ್ದರಾಗಿರಿ...


ಬಿಲ್‌ ಗೇಟ್ಸ್‌ ಹೆಸರು ಜಗತ್ತಿನಾದ್ಯಂತ ಜನಪ್ರಿಯ. ಮೈಕ್ರೊಸಾಫ್ಟ್‌ ಎಂಬ ಕಂಪನಿಯ ಸಹ ಸ್ಥಾಪಕರಾದ ಇವರಿಗೆ ಯಶಸ್ಸು ಸುಲಭವಾಗಿ ಬಂದಿರುವುದಲ್ಲ. ಉದ್ಯಮಿಯಾದ ಬಿಲ್‌ ಗೇಟ್ಸ್‌ ತನ್ನ ಸ್ನೇಹಿತ ಪಾಲ್‌ ಅಲೆನ್‌ ಜತೆ ಸೇರಿ ಮೈಕ್ರೊಸಾಫ್ಟ್‌ ಕಂಪನಿಯನ್ನು ಕಟ್ಟಿ ಬೆಳೆಸಿದರು. 1975ರಲ್ಲಿ ಕಂಪನಿ ಆರಂಭಿಸಿದ ಇವರಿಗೆ ಯಶಸ್ಸು ಸುಲಭವಾಗಿ ದೊರಕಲಿಲ್ಲ...

ಬಿಲ್ ಗೇಟ್ಸ ಅವರು ತಮ್ಮ ಅನುಭವದಿಂದ ಹೇಳುವ ಯಶಸ್ಸಿನ ಏಳು ಸೂತ್ರಗಳೆಂದರೆ


1..ಏನೇ ಕೆಲಸ ಮಾಡಿದರೂ ಅದನ್ನು ಎಂಜಾಯ್ ಮಾಡಿಕೊಂಡು ಮಡಬೇಕು. ನನಗೆ ಹೊಸಬರ ಜತೆ ಕೆಲಸ ಮಾಡುವುದು, ಹೊಸ ಸಮಸ್ಯೆಗಳನ್ನು ಬಗೆಹರಿಸುವುದು ಎಂದರೆ ಖುಷಿ....

2...ಛಲ ಬಿಡದೇ ದುಡಿಯಬೇಕು. ನನ್ನ ಇಪ್ಪತ್ತನೇ ವಯಸ್ಸಿನಲ್ಲಿ ವಾರಾಂತ್ಯ ರಜೆ ಎಂದು ನೋಡುತ್ತಿರಲಿಲ್ಲ. ಪ್ರತಿ ದಿನ ಕಷ್ಟ ಪಟ್ಟು ದುಡಿಯುತ್ತಿದ್ದೆ. 

3... ನಮ್ಮನ್ನು ನಾವು ಆಗಾಗ ಅವಲೋಕನ ಮಾಡಿಕೊಳ್ಳುತ್ತಿರಬೇಕು. ನನ್ನ ಜಾಗದಲ್ಲಿ ಇನ್ನೊಬ್ಬರು ಇದ್ದಿದ್ದರೆ ಇದಕ್ಕಿಂತ ವಿಭಿನ್ನವಾಗಿ ಹಾಗೂ ಪರಿಣಾಮಕಾರಿ ಏನು ಮಾಡುತ್ತಿದ್ದರು ಎಂದು ಆಲೋಚಿಸುತ್ತಿದ್ದೆ. 

4... ಕಷ್ಟಗಳು ಅಡಚಣೆ ಆಗಬಾರದು ಎಷ್ಟೇ ಸವಾಲಿನ ಸಮಸ್ಯೆ ಎದರು ಇದ್ದರು ಅದನ್ನು ಬಗೆಹರಿಸುತ್ತೇನೆ ಎನ್ನುವ ಛಲ ನಮ್ಮೊಳಗಿರಬೇಕು.

5... ಕಲಿಯುವುದನ್ನು ನಿಲ್ಲಿಸಬಾರದು. ನನಗೆ ಎಂದಿಗೂ ವಿದ್ಯಾರ್ಥಿ ಅಗಿರುವುದು ಖುಷಿ. ಹೊಸತನ್ನು ಕಲಿಯುತ್ತಿರಬಹುದು..

6... ಪುಸ್ತಕಗಳನ್ನು ಓದಬೇಕು. ನಮಗೆ ಗೊತ್ತಿಲ್ಲದಂಥ ಅದೆಷ್ಟೋ ವಿಷಯಗಳನ್ನು ಪುಸ್ತಕಗಳು ಕಲಿಸುತ್ತವೆ. 

7... ಸಾಮಾಜಿನ ಕೆಲಸಗಳನ್ನು ಮಾಡಬೇಕು. ಪ್ರಪಂಚದಲ್ಲಿ ಅದೆಷ್ಟೋ ಜನರು ಕಷ್ಟಪಡುತ್ತಿರುತ್ತಾರೆ. ಬದುಕಿಗೆ ಹೋರಾಡುತ್ತಿರುತ್ತಾರೆ. ಅವರ ಜತೆ ಸಮಯ ಕಳೆದು ಅವರಿಗೆ ಸಹಾಯವಾಗುವಂಥ ಕೆಲಸ ಮಾಡಬೇಕು. ಇವಿಷ್ಟು ಯಶಸ್ಸಿನ ಸೂತ್ರಗಳು.

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು