Tuesday, March 4, 2025

 ಕಥೆ-681

ತಂದೆ -ತಾಯಿಯರ ಪ್ರೀತಿ ಅನನ್ಯ

ವಿದೇಶಿ ಪತ್ರಿಕೆಯೊಂದರಲ್ಲಿ ಇತ್ತೀಚೆಗೆ ಒಂದು ವಿಶಿಷ್ಟ ಜಾಹೀರಾತು ಪ್ರಕಟಗೊಂಡಿತ್ತು ಶೀರ್ಷಿಕೆ ಹೀಗಿತ್ತು....

ವೃದ್ಧ ದಂಪತಿ ಬೇಕಾಗಿದ್ದಾರೆ

ನಮ್ಮ ಜೊತೆಯಲ್ಲಿ ಇರಬೇಕು

ಜಾಹೀರಾತಿಗೆ ಪ್ರತಿಕ್ರಿಯೆ ಬಂತು

ವೃದ್ಧೆಯೊಬ್ಬರು ಕರೆ ಮಾಡಿ ಕೇಳಿದರು..

ನಿಮ್ಮ ಜಾಹೀರಾತಿನಂತೆ ನಮಗೆ ಕೆಲಸ ಬೇಕು ಏನು ಮಾಡಬೇಕು ಎಂದು... 

ಪತ್ರಿಕಾ ಜಾಹಿರಾತು ನೀಡಿದವರು ಹೇಳಿದರು

ನೀವು ಏನೂ ಕೆಲಸ ಮಾಡಬೇಕಿಲ್ಲ ನಾವು ಇಬ್ಬರಿದ್ದು ಇಬ್ಬರೂ ವೈದ್ಯರಾಗಿದ್ದೇವೆ. ನಮ್ಮ ಕೆಲಸಕ್ಕೆ ಹೋಗುತ್ತೇವೆ. ನಮ್ಮ ತಾಯಿ ಇತ್ತೀಚೆಗೆ ನಿಧನ ಹೊಂದಿದರು.

ನಮಗೆ ತಂದೆ-ತಾಯಿ ಆಗಿ ಇರುವುದೇ ನಿಮ್ಮ ಕೆಲಸ. ಮನೆಯಲ್ಲಿ ಎಲ್ಲ ಕೆಲಸಕ್ಕೂ ಸೇವಕರಿದ್ದಾರೆ. ಆದರೆ ನಮ್ಮನ್ನು ಕೇಳುವವರು ಯಾರೂ ಇಲ್ಲ.

ಮಕ್ಕಳೇ ಇಂದು ತಡವಾಗಿ ಏಕೆ ಬಂದಿರಿ? ಊಟ ಮಾಡಿದಿರೋ ಇಲ್ಲವೋ? ಎಂದೆಲ್ಲ ನಮ್ಮನ್ನು ಕೇಳುವವರೇ ಇಲ್ಲ.

ಕೆಲಸ ಮುಗಿಸಿ ಮನೆಗೆ ಬಂದಾಗ ನಮ್ಮನ್ನು ಪ್ರೀತಿ ವಾತ್ಸಲ್ಯಗಳಿಂದ ಮಾತನಾಡಿಸುವವರು ನಮಗೆ ಬೇಕು.... ಈ ಕೆಲಸವನ್ನೇ ನೀವು ಮಾಡಬೇಕು

ಎಂದು ಪತ್ರಿಕಾ

ಜಾಹಿರಾತು ನೀಡಿದವರು

ಹೇಳಿದಾಗ .... ವೃದ್ಧ ದಂಪತಿಗಳ ಕಣ್ಣುಗಳು ತೇವಗೊಂಡವು.


ಜಗತ್ತಿನ ವಿಚಿತ್ರ ಹೇಗಿದೆ ಎಂದರೆ

ಯಾರ ಮನೆಯಲ್ಲಿ ವೃದ್ಧ

ತಂದೆ ತಾಯಿಯರು ಇರುವರೋ ಅವರ ಬಗ್ಗೆ ಮಕ್ಕಳ ಕಾಳಜಿಯೇ ಇಲ್ಲ. ಯಾರ ಮನೆಯಲ್ಲಿ ತಂದೆ

ತಾಯಿ ಇಲ್ಲವೋ ಅವರು ಅಯ್ಯೋ ಅಪ್ಪ ಇರಬೇಕಿತ್ತು. ಅಯ್ಯೋ ಅಮ್ಮ ಇರಬೇಕಿತ್ತು ಅಂತೀವಿ

ನೆನಪಿರಲಿ.. ಇದ್ದಾಗ ಅದಕ್ಕೆ ಬೆಲೆ ಇರೋದಿಲ್ಲ. ಕಣ್ಮರೆಯಾದಾಗ ಅದರ ಮಹತ್ವ ಗೊತ್ತಾಗೋದು... ಆದರೆ ಕಣ್ಮರೆಯಾಗೋವರೆಗೂ ಅದರ ಕೊರತೆಯ ಅನುಭವ ಗೊತ್ತಾಗೋದಿಲ್ಲ.


ತಂದೆ -ತಾಯಿಯರ ಪ್ರೀತಿ ಮಾತ್ರ ಯಾವಾಗಲೂ ಉಚಿತ ಮತ್ತು ಧಾರಾಳ. ಆನಂತರದ ಎಲ್ಲ ಸಂಬಂಧಗಳಿಗೂ ಯಾವುದೇ ರೂಪದಲ್ಲಿ ಬೆಲೆ ತೆರಬೇಕಾಗುತ್ತದೆ. ಸಂಪೂರ್ಣ ಸೃಷ್ಟಿಯಲ್ಲೇ ತಂದೆ ತಾಯಿಗೆ ಮಿಗಿಲಾದುದು ಬೇರೆನೂ ಇಲ್ಲ ....

ಸಂಗ್ರಹ :ಸೌಜನ್ಯ

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು