ಕಥೆ-682
ಸವಾಲುಗಳ ದೋಣಿಯಲ್ಲಿ
ದೋಣಿಯಲ್ಲಿ
ಪ್ರಯಾಣಿಸುವಾಗ ತೂತು ಬಿದ್ದರೆ ಮುಳುಗುವುದು ನಿಶ್ಚಿತ. ಆದರೆ, ಬದುಕುಳಿಯಲು ಇರುವ ಚಿಕ್ಕ ಸಮಯದಲ್ಲಿ ಆಗುತ್ತಿರುವ ತೂತು ಮುಚ್ಚಬೇಕೋ ಅಥವಾ ಹೇಗಾದರೂ ದೋಣಿಯೊಳಗೆ ತುಂಬುತ್ತಿರುವ ನೀರನ್ನು ಹೊರಗೆ ಹಾಕಬೇಕೋ ಎಂಬ ಗೊಂದಲ. ಗುರಿ ಮುಟ್ಟುವ ಪ್ರಯತ್ನದಲ್ಲಿ ಪ್ರಯತ್ನದಲ್ಲಿ ಕೆಲವೊಮ್ಮೆ ಏಕಕಾಲಕ್ಕೆ ಅನೇಕ ಸವಾಲುಗಳು ಎದುರಾಗುತ್ತವೆ. ಇವುಗಳನ್ನು ಸರಿಯಾಗಿ ನಿರ್ವಹಿಸುವ ತಂತ್ರ ತಿಳಿದಿಲ್ಲದಿದ್ದರೆ ಸಮಯವೂ ಸುಮ್ಮನೆ ವ್ಯರ್ಥವಾಗುತ್ತದೆ. ಆದ್ದರಿಂದ ಮೊದಲೇ ಎಲ್ಲದಕ್ಕೂ ಅಣಿಯಾಗಿರಬೇಕು. ಇವೆಲ್ಲದರ ಜತೆಗೆ ಒಂದು ದೋಣಿಯಲ್ಲಿ ಪ್ರಯಾಣ ಮಾಡುತ್ತಿರುವಾಗಲೇ ಇನ್ನೊಂದು ದೋಣಿಗೆ ಕಾಲಿಡಬಾರದು ಎಂಬ ವಿವೇಚನೆ ಇರುವುದು ಅತ್ಯಗತ್ಯ. ಯಾವ ಸವಾಲು ತಕ್ಷಣಕ್ಕೆ ಅಪಾಯ ತಂದೊಡ್ಡುತ್ತದೆ ಎಂಬುದನ್ನು ಗುರುತಿಸಬೇಕು. ಬಳಿಕ ಅದನ್ನು ಮೊದಲು ಎದುರಿಸಿದರೆ ಸಮಯ ಉಳಿತಾಯ ಆಗುವುದರ ಜತೆಗೆ ಕೆಲಸವೂ ಸುಸೂತ್ರವಾಗಿ ನೆರವೇರುತ್ತದೆ. ಸವಾಲುಗಳನ್ನು ಎದುರಿಸುವಾಗ ಸಮಯ ಪ್ರಜ್ಞೆಯೊಂದಿಗೆ ದೂರದಾಲೋಚನೆ ಇರಲಿ, ಇಲ್ಲವಾದಲ್ಲಿ ಎಲ್ಲವನ್ನೂ ಮೀರಿದ ಸಮಯದಲ್ಲಿ ಭವಿಷ್ಯ ಮುಳುಗಿ ಹೋಗಬಹುದು..
ಕೃಪೆ : ನೆಟ್