Monday, March 10, 2025

 ಮಲ್ಟಿ ಟಾಸ್ಕಿಂಗ್ ಓದು ಕಷ್ಟ


ಸಮಯ ಸರಿದೂಗಿಸಿ, ಯೋಜಿಸಿರುವ ಎಲ್ಲವೂ ಕಾರ್ಯಗತವಾಗಲೇಬೇಕೆಂದು 'ಯೋಚಿಸಿ ಏಕಕಾಲಕ್ಕೆ ಹಲವು ಕೆಲಸ ಮಾಡಲು ಮುಂದಾಗುತ್ತೇವೆ. ಆದರೆ, ಇದರಿಂದ ನಿರ್ಧರಿತ ಕೆಲಸ ಮಾಡುವುದಕ್ಕಿಂತ, ಗುರಿಯಿಂದ ವಿಚಲಿತರಾಗುವುದೇ ಹೆಚ್ಚು. ಅಮೆರಿಕದ ವಾಣಿಜ್ಯೋದ್ಯಮಿ, ಖ್ಯಾತ ಲೇಖಕ ಗ್ಯಾರಿ ಕೆಲ್ಲರ್ ಹೇಳಿರುವಂತೆ, ಒಂದೇ ಸಮಯದಲ್ಲಿ 2 ಕೆಲಸಗಳನ್ನು ಮಾಡಬಹುದು ಆದರೆ ಎರಡರೆಡೆಗೂ ಸಮ ಪ್ರಮಾಣದಲ್ಲಿ ಗಮನ ಕೇಂದ್ರೀಕರಿಸಲು ಒಂದೇ ಸಮಯದಲ್ಲಿ ಸಾಧ್ಯವಾಗುವುದಿಲ್ಲ. ಒಂದೇ ಕಾರ್ಯದಲ್ಲಿ ತೊಡಗುವುದರಿಂದ ಒತ್ತಡ ಕಡಿಮೆಯಾಗಿ ಮಾಡುವ ಕೆಲಸದಲ್ಲಿ ಸೃಜನಶೀಲತೆ ಹೆಚ್ಚಾಗುತ್ತದೆ. ಹಾಗಾದ್ರೆ ಒಂದು ಸಮಯದಲ್ಲಿ ಒಂದೇ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಅದು ಕ್ಲಿಷ್ಟಕರವಾದದೇನು ಅಲ್ಲ. 20 ನಿಮಿಷದ ಸಮಯದಲ್ಲಿ ಮೊದಲಾರ್ಧ ಭಾಗವನ್ನು ಓದಲು, ದ್ವಿತೀಯಾರ್ಧ ಭಾಗವನ್ನು ಬರೆಯಲು ಉಪಯೋಗಿಸಿಕೊಳ್ಳಿ. ಒಂದೇ ವಿಷಯವನ್ನು ಓದಿ, ಬರೆಯುವುದರಿಂದ ಹೆಚ್ಚಿನ ಕಾಲ ನೆನಪಿನಲ್ಲಿ ಉಳಿಯುತ್ತದೆ. ಕೆಲಸ ಚಿಕ್ಕದಿರಲಿ ಅಥವಾ ದೊಡ್ಡದಿರಲಿ, ಸಮಯ ಅಲ್ಪಾವಧಿಯಿರಲಿ ಅಥವಾ ದೀರ್ಘವಾಗಿರಲಿ ಮನಸ್ಸು ಹಾಗೂ ದೇಹ ಒಂದೇ ವಿಷಯದಲ್ಲಿ ವ್ಯಸ್ತವಾಗಿದ್ದಾಗ ಮಾತ್ರ ಅಪೇಕ್ಷಿತ ಫಲಿತಾಂಶ ಸಿಗಲು ಸಾಧ್ಯ.

ಕೃಪೆ:ನೆಟ್

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು