Tuesday, March 11, 2025

 ಕಥೆ-686

ಸಂಭ್ರಮಕ್ಕೂ ಮಿತಿಯಿರಲಿ 


ಸಂಭ್ರಮಕ್ಕೂ ಮಿತಿಯಿರಲಿ ಪ್ರತಿ ಗೆಲುವನ್ನು ಸಂಭ್ರಮಿಸಬೇಕು. ಆದರೆ ಅವುಗಳನ್ನು ಸಂಭ್ರಮಿಸುವುದರಲ್ಲಿಯೇ ಕಾಲ ಕಳೆಯಬಾರದು. ಬದಲಾಗಿ ಆ ಸಮಯವನ್ನು ಮತ್ತೊಂದು ಮೆಟ್ಟಿಲು ಹತ್ತುವುದಕ್ಕೆ ಉಪಯೋಗಿಸಿಕೊಳ್ಳಬಹುದು. ಕೂಸು ಹುಟ್ಟೋಕು ಮುನ್ನವೇ ಕುಲಾವಿ ಹೊಲಿಸಿದ ಹಾಗೆ, ಸಂಪೂರ್ಣವಾಗಿ ಸಾಧಿಸುವ ಮುನ್ನವೇ ಸವಾಲುಗಳನ್ನು ಎದುರಿಸುವತ್ತ ಗಮನ ನೀಡಬೇಕು. ಅಂದುಕೊಂಡಿದ್ದನ್ನು ಸಾಧಿಸುವಾಗ ಎಲ್ಲರಿಗೂ ಹೇಳಿಕೊಳ್ಳುವುದರಲ್ಲೇ ಸಮಯ ವ್ಯರ್ಥ ಮಾಡಿಕೊಂಡರೆ ಮುಂದಿನ ಹಂತಕ್ಕೆ ಅಣಿಯಾಗಲು ಕಾಲಾವಕಾಶವೇ ಸಿಗುವುದಿಲ್ಲ. ಹೀಗಾದಾಗ ಸೋಲನ್ನು ಕಾಣುವ ಪ್ರಮೇಯವೂ ಬರಬಹುದು.


ಗೆದ್ದೇಬಿಟ್ಟೆ ಎಂದು ಸಂಭ್ರಮಿಸುವಷ್ಟು ಅತಿಯಾದ ವಿಶ್ವಾಸವೂ ಇರಬಾರದು. ಅದರ ಬದಲಾಗಿ ಯಾವಾಗಲೂ ಸಮಚಿತ್ತತೆಯನ್ನು ಕಾಯ್ದುಕೊಂಡು ಸೋಲು ಹಾಗೂ ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿದರೆ ಪರೋಕ್ಷವಾಗಿ ಅವಧಿಯ ಉಳಿತಾಯವೂ ಸಾಧ್ಯವಾಗುತ್ತದೆ. ಆದ್ದರಿಂದ ಯಾವುದಕ್ಕೂ ಆತುರ ಬೇಡ. ಗೆದ್ದ ಖುಷಿಯಲ್ಲಿ ತೇಲಾಡಿ ಕಾಲಹರಣ ಮಾಡಿ ಭವಿಷ್ಯಕ್ಕೆ ಹಾನಿ ತಂದುಕೊಳ್ಳುವ ಬದಲಾಗಿ ಗುರಿ ತಲುಪಲು ಸಿದ್ಧತೆ ನಡೆಸುವುದು ಒಳ್ಳೆಯದು.

ಕೃಪೆ-ನೆಟ್

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು