ಕಥೆ-690
ಭವಿಷ್ಯದತ್ತ ಚಿಕ್ಕ ಚಿಕ್ಕ ಹೆಜ್ಜೆಗಳು
ನಿರಂತರವಾಗಿ ಚಿಕ್ಕ ಚಿಕ್ಕ ಮೆಟ್ಟಿಲುಗಳೇರಿದರೆ ಎತ್ತರಕ್ಕೆ ಏರಲು ಸಾಧ್ಯ
ಭವಿಷ್ಯಕ್ಕಾಗಿ ಈಗಿನಿಂದಲೇ ಸಾಧ್ಯವಾದಷ್ಟು ಸಮಯ ವಿನಿಯೋಗಿಸುತ್ತಾ ಸಾಗಿದರೆ ಅನಾಯಾಸವಾಗಿ ಗುರಿ ತಲುಪಬಹುದು. ವಿಜ್ಞಾನ ಅಭ್ಯಾಸ ಮಾಡುವವರಿಗೆ CET, NEET, JEE ಪರೀಕ್ಷೆ ಬರೆಯಬೇಕೆಂಬ ಆಸೆ, ವಾಣಿಜ್ಯ ವಿದ್ಯಾರ್ಥಿಗಳಿಗೆ CA ಹಲವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಬೇಕೆಂಬ ದೊಡ್ಡ ಕನಸು ಇದ್ದೇ ಇರುತ್ತದೆ. ಕನಸುಗಳನ್ನು ಕಾಣುವುದು ಒಳ್ಳೆಯದೇ. ನಮ್ಮ ಕನಸು ನಮ್ಮ ಗುರಿ ಸ್ಪಷ್ಟವಾಗಿರಬೇಕು...
ಭವಿಷ್ಯಕ್ಕಾಗಿ ಈಗಿನಿಂದಲೇ ಸಾಧ್ಯವಾದಷ್ಟು ಸಮಯ ವಿನಿಯೋಗಿಸುತ್ತಾ ಸಾಗಿದರೆ ಅನಾಯಾಸವಾಗಿ ಗುರಿ ತಲುಪಬಹುದು. ವಿಜ್ಞಾನ ಅಭ್ಯಾಸ ಮಾಡುವವರಿಗೆ NEET, JEE ಒಳ್ಳೆಯದೇ, ಆದರೆ ಅದನ್ನು ಸಾಧಿಸುವ ದಾರಿಯಲ್ಲಿ ಬಂದೊದಗುವ ಕಷ್ಟಗಳನ್ನು ಕಡಿಮೆ ಮಾಡಿಕೊಳ್ಳಬೇಕೆಂದರೆ ಈಗಿನಿಂದಲೇ ಸಮಯದ ವಿನಿಯೋಗ ಮಾಡಲೇಬೇಕಾಗುತ್ತದೆ. ಮೊದಲು ಭವಿಷ್ಯದ ಗುರಿಯನ್ನು ಸ್ಪಷ್ಟ ಪಡಿಸಿಕೊಂಡು ಅದಕ್ಕಾಗಿ ನಿತ್ಯವೂ ಎಷ್ಟು ಸಮಯ ಮೀಸಲಿಡಬೇಕೆಂಬ ಅರಿವು ಇರಬೇಕು. ಕೆಲ ವರ್ಷಗಳಲ್ಲಿ ಬರೆಯಬೇಕೆಂದುಕೊಂಡಿರುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯಬೇಕೆಂದರೆ ಅದಕ್ಕಾಗಿ ನಿತ್ಯ ಕೆಲ ಸಮಯವನ್ನು ವಿನಿಯೋಗಿಸಿದರೆ, ಪರೀಕ್ಷೆ ಸುಲಭವಾಗುತ್ತದೆ. ಹಿಂದಿನ ದಿನಗಳಲ್ಲಿ ಓದಿದ್ದು ನಿಜಕ್ಕೂ ಪ್ರಯೋಜನಕಾರಿಯಾಗಬಲ್ಲದು. ದೀರ್ಘಾವಧಿಯ ಗುರಿಗೆ ಸಣ್ಣ ಸಣ್ಣ ಅವಧಿ ಭಾರಿ ಬೆಂಬಲ ನೀಡಬಲ್ಲುದು. ಇಲ್ಲವಾದಲ್ಲಿ ಒಮ್ಮೆಲೇ ಒತ್ತಡವುಂಟಾಗಿ ಸೋಲಿಗೆ ಕಾರಣವಾಗಬಹುದು. ಉಳಿಯುವ ವೇಳೆಯನ್ನು ಮುಂದಿನ ಗುರಿ 10ನೇ ತರಗತಿ ಪರೀಕ್ಷೆ ಉತ್ತೀರ್ಣರಾಗುವುದು ಅದನ್ನು ಸರಿಯಾಗಿ ಬಳಸಿಕೊಳ್ಳಿ, ಎಲ್ಲಾ ವಿಷಯಗಳಿಗೂ ಆದ್ಯತೆ ಕೊಡಿ, ಇಲ್ಲದಿದ್ದರೆ ನಿಮ್ಮ ಫಲಿತಾಂಶ ಉಲ್ಟಾ ಹೊಡೆಯುವುದು, ನೀವು ಉತ್ತಮ ಫಲಿತಾಂಶಕ್ಕಾಗಿ ಸಮಯ ಬಳಸಿಕೊಳ್ಳಿ.
ಕೃಪೆ- ನೆಟ್