ಕಥೆ-796
ಗಿಡ ಬೆಳೆಸುವುದು ಸಾರ್ಥಕ ಬದುಕೆ
ಬಹಳಷ್ಟು ಜನರು ಸಾವಿನ ನಂತರ ಏನಾಗುತ್ತದೆ ಎಂಬ ಚಿಂತೆಯಲ್ಲಿ ಇರುತ್ತಾರೆ, ಅದು ಯಾರಿಗೂ ಗೊತ್ತಿಲ್ಲ, ಯಾರೂ ನೋಡಿಲ್ಲ. ಸಾವಿನ ನಂತರ ನಮ್ಮ ಜೀವನ ಮುಕ್ತಾಯ ಅಷ್ಟೇ, ಸಾವಿನ ಬಳಿಕ ನಾವು ಏನಾಗುತ್ತೇವೆ ಎಂದು ಅದರ ಕುರಿತೇ ಗಂಟೆಗಟ್ಟಲೆ ಚರ್ಚಿಸುತ್ತ ಕೂಡುವುದರಲ್ಲಿ ಅರ್ಥವಿಲ್ಲ. ಸಾವಿಗೆ ಮುನ್ನ ನಮಗೊಂದು ಬದುಕಿದೆಯಲ್ಲ! ಅದನ್ನು ನಾವು ಸಾರ್ಥಕವಾಗಿ ಬದುಕಬೇಕಾಗಿದೆ. ಸಮಾಜದಿಂದ ಪಡೆದು, ನಮ್ಮ ಬದುಕನ್ನು ರೂಪಿಸಿಕೊಂಡಿರುತ್ತೇವೆ, ನಾವಿರುವಷ್ಟು ದಿನ ಸಮಾಜಕ್ಕೆ ಉಪಯುಕ್ತರಾಗಿ ಬದುಕಬೇಕು. ಸಾಧ್ಯವಿರುವಲ್ಲೆಲ್ಲ ನೆರವಿನ ಹಸ್ತವನ್ನು ಚಾಚಬೇಕು. ನಮ್ಮಸಾವಿನಬಳಿಕವೂ ಜನ ನಮ್ಮನ್ನು ನೆನೆಯುವಂತೆ ಮಾಡಲು ನಾವೊಂದು ಗಿಡವನ್ನು ನೆಡಬಹುದು. ನಮ್ಮ ಸಾವಿನ ನಂತರವೂ ಅದು ದಾರಿಯಲ್ಲಿ ಹೋಗುವವರಿಗೆ ನೆರಳಾಗುತ್ತದೆ, ಹಕ್ಕಿಗಳಿಗೆ ಆಶ್ರಯದ ತಾಣವಾಗುತ್ತದೆ, ಹಣ್ಣು ಬಿಡುತ್ತದೆ. ಹಸಿದವರಿಗೆ ಆಹಾರವಾಗುತ್ತದೆ. ಸಾವಿನ ನಂತರದ ಸ್ಥಿತಿಯ ಬಗ್ಗೆ ಯೋಚಿಸದೆ ಸಾರ್ಥಕ ಬದುಕನ್ನು ಬದುಕಬೇಕಿದೆ.
-Shankargouda Basapur