Tuesday, July 22, 2025

 ಕಥೆ-799

5 ವರ್ಷದ ಬಾಲಕಿ ಬರೆದ ಪುಸ್ತಕ ಗಿನ್ನೀಸ್ ದಾಖಲೆ

5 ವರ್ಷದ ಮಕ್ಕಳಿಗೆ ಸರಿಯಾಗಿ ತಮ್ಮ ಗೊಣ್ಣೆಯನ್ನು ತೆಗೆಯಲೂ ಸಹ ಬರುವುದಿಲ್ಲ. ಅಂತದ್ದರಲ್ಲಿ " ಪುಸ್ತಕ ಬರೆಯುವುದೆಂದರೇನು?! ನಿಜಕ್ಕೂ ಆಶ್ಚ ರ್ಯವಾಗುತ್ತದೆ. ಹೌದು, ಈ 5 ವರ್ಷದ ಬಾಲಕಿ ಪುಸ್ತಕ ಬರೆದು, ಅದರ ಸಾವಿರಕ್ಕೂ ಹೆಚ್ಚು ಪ್ರತಿ ಗಳು ಮಾರಾಟವಾಗಿ ಈಗ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರಿದೆ. ಹೌದು, ಯುನೈಟೆಡ್ ಕಿಂಗಮ್ಮಿನ ವೆಮೌತ್‌ನಲ್ಲಿರುವ ಬೆಲ್ಲಾ ಜೆ.ಡಾರ್ಕ್‌ಳೇ ಆ ಪುಟ್ಟ ಬಾಲಕಿ. ಜನವರಿ 31, 2022 ರಂದು ಬೆಲ್ಲಾ ಬರೆದ, ದಿ ಲಾಸ್ಟ್ ಕ್ಯಾಟ್ ಪುಸ್ತಕವನ್ನು ಲೋಕಾರ್ಪಣೆ ಮಾಡಿತು. ಅಂದಿನಿಂದ 1,000 ಪ್ರತಿಗಳು ಮಾರಾಟ ವಾಗಿವೆ. ಇದರ ಬೆಲೆ 6 ಪೌಂಡ್ (ಸುಮಾರು 571 ರು.) ಇದ್ದು, ಈ ಪುಸ್ತಕವನ್ನು ವಾಟರ್ಸ್ಟೋನ್ಸ್ ಅಥವಾ ಅಮೇಝಾನ್‌ನಲ್ಲಿ ಖರೀದಿಸಬಹುದು. ಬೆಲ್ಲಾ, ಸದಾ ಕನಸು ಕಾಣುತ್ತಾ, ಕಾಲ್ಪನಿಕ ಲೋಕದಲ್ಲಿ ವಿಹರಿಸುವ ಹುಡುಗಿ.


 ಅದೊಂದು ದಿನ ಅಮ್ಮಾ, ನಾನು ಪುಸ್ತಕ ಬರೀತಿನಿ ಅಂದಳು ತಾಯಿ ಚೆಲ್ಸಿ ಸೈಮ್ ಗೆ. ಆಗ ರೂಪುಗೊಂಡಿದ್ದೇ ಈ ದಿ ಲಾಸ್ಟ್ ಕ್ಯಾಟ್ ಪುಸ್ತಕ. ಇನ್ನೂ ವಿಚಿತ್ರವೆಂದರೆ ಬೆಲ್ಲಾ, ಈ ಪುಸ್ತಕವನ್ನು ಕೇವಲ 5 ದಿನಗಳಲ್ಲಿ ಬರೆದು ಮುಗಿಸಿದ್ದಾಳಂತೆ! ಮನೆ ಬಿಟ್ಟು ಹೊರಗೆ ಬರುವ ಸ್ಕೋವಿ ಹೆಸರಿನ ಬೆಕ್ಕಿನ ಮರಿಯೊಂದು ಅನಾಥವಾಗಿ, ಒಬ್ಬಂಟಿಯಾಗಿ ಪಯಣಿಸುವ ಬಗೆ ದಾರಿತಪ್ಪಿ ಹೋಗುತ್ತಿರುವ ಈ ಪುಟ್ಟ ಬೆಕ್ಕು, ತನ್ನ ಅಮ್ಮನಿಲ್ಲದೆ ಹೊರಗೆ ಹೋಗಬಾರದು ಎಂದು ಅರಿತುಕೊಂಡ ಬಗೆ. ಅದರಿಂದ ಸ್ಕೋವಿಗೆ( ಬೆಕ್ಕಿನ ಮರಿಗೆ) ಆಗುವ ಸಮಸ್ಯೆ. ಹೀಗೆ, ಓದುಗರಿಗೆ ಉತ್ತಮ ಸಂದೇಶದ ಕಥಾಹಂದರವನ್ನು ಈ ಪುಸ್ತಕ ಒಳಗೊಂಡಿದೆ. ಪುಸ್ತಕದ ಬೆನ್ನುಪುಟಕ್ಕೆ ಬೆಲ್ಲಾಳ ಸಹೋದರಿ ಲೇಸಿ-ಮೆ ರೇಖಾಚಿತ್ರವನ್ನು ಬರೆದುಕೊಟ್ಟರೆ ಒಳಪುಟ, ಮುಖಪುಟಗಳಲ್ಲಿ ಕಂಡುಬರುವ ಎಲ್ಲಾ ಚಿತ್ರಗಳನ್ನು ಸ್ವತಃ ಬೆಲ್ಲಾಳೇ ರಚಿಸಿದ್ದಾಳೆಂಬುದು ವಿಶೇಷ.

ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಈ ಪುಟ್ಟ ಬಾಲಕಿ ನಮಗೆ ಪ್ರೇರಣೆಯಾಗುತ್ತಾಳೆ..


-ಎಲ್.ಪಿ.ಕುಲಕರ್ಣಿ

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು