Monday, July 28, 2025

 ಕಥೆ-804

ಮೆದಳು

https://basapurs.blogspot.com


 ಸೃಷ್ಟಿಯಲ್ಲಿನ ಅತ್ಯಂತ ಹೆಚ್ಚು ವಿಸ್ಮಯಕಾರಿ ಮತ್ತು ಬೆಲೆ ಕಟ್ಟಲು ಸಾಧ್ಯವಾಗದಂತಹ ಒಂದು ಅಂಗದ ಬಗ್ಗೆ ತಿಳಿದುಕೊಳ್ಳೋಣ. ನಮ್ಮ ದೇಹದ ಇತರ ಎಲ್ಲ ಅಂಗಗಳನ್ನೂ ಸದಾ ಕಾಲ ತನ್ನ ಹತೋಟಿಯಲ್ಲಿ ಇಟ್ಟು ಕೊಂಡಿರುವ ಮತ್ತು ಇಡೀ ದೇಹದ ಎಲ್ಲ ಕೆಲಗಳನ್ನು ಮಾಡಲು ನಿರ್ದೇಶನ ನೀಡುವಂತಹ ಅಂಗ, ಯೋಚಿಸುವ ಮತ್ತು ಸರಿ, ತಪ್ಪುಗಳನ್ನು ತಿಳಿಸುವ ಅಂಗ ಇದುವೇ ಮೆದುಳು. ಇದು ತೂಕದಲ್ಲಿ ಸುಮಾರು 1.5 ಕಿಲೋ ಗ್ರಾಂ ನಷ್ಟು ಇರುತ್ತದೆ.


ಮನುಷ್ಯನ ದೇಹದ ತೂಕ ಸುಮಾರು ಎಪ್ಪತ್ತರಿಂದ ಎಂಬತ್ತು ಕಿಲೋಗ್ರಾ ಇರುವವರಲ್ಲಿಯೂ ಸಹಾ ಮೆದುಳಿನ ತೂಕ ಸುಮಾರು 1.5 ಕೆ.ಜಿ ಯಷ್ಟು ಇರುತ್ತದೆ. ಬೇರೆ ಪ್ರಾಣಿಗಳಿಗೆ ಹೋಲಿಸಿ ನೋಡಿದರೆ ಮನುಷ್ಯನ ಮೆದುಳು ದೊಡ್ಡದೇ. ಈಗ ದೊಡ್ಡ ದೇಹದ ಆನೆಗೆ ಹೋಲಿಸಿ ನೋಡೋಣ. ವಯಸ್ಕ ಅನೆಯ ತೂಕ ಸರಾಸರಿ 4000ಕೆ.ಜಿ ಯಿಂದ 50000 ಕೆ.ಜಿ ಗಳು. ಆದರೆ ಇಷ್ಟು ತೂಕವನ್ನು ಹೊಂದಿರುವ ಆನೆಯ ಮೆದುಳಿನ ತೂಕವನ್ನು ನೋಡುವುದಾದರೆ ಇದು ಕೇವಲ 4.5 ರಿಂದ 5 ಕೆ.ಜಿಗಳು ಮಾತ್ರ. ಅಂದರೆ ಮಾನವನ ಮೆದುಳಿಗಿಂತ ಕೇವಲ 3.3 ರಷ್ಟು ಮಾತ್ರ ಎಂಬುದು ಗಮನಾರ್ಹ. ಆನೆಯಲ್ಲೂ ಮನುಷ್ಯನ ತರಹ ಮೆದುಳು ವಿಕಸಿತವಾಗಿದ್ದಿದ್ದರೆ ಆಗ ಆನೆಯ ದೇಹದಲ್ಲಿಯೂ ಮೆದುಳು ಕನಿಷ್ಟ ಸುಮಾರು 100 ಕೆ.ಜಿ ಇರಬೇಕಾಗಿತ್ತು. ಆದರೆ ಅದು ಕೇವಲ 4 ರಿಂದ 5 ಕೆ.ಜಿ ಗಳು ಮಾತ್ರ.


ಆದರೆ ಚಿಂಪಾಂಜಿಗಳಲ್ಲಿ ಮೆದುಳಿನ ತೂಕ ಸುಮಾರು ಅರ್ಧ ಕೆ.ಜಿ. ಯಷ್ಟು ಇರುತ್ತದೆ. ಇದರ ದೇಹದ ತೂಕ ಸುಮಾರು ನಲವತ್ತರಿಂದ ಅರವತ್ತು ಕೆ.ಜಿಗಳು. ಹೆಚ್ಚು ಕಡಿಮೆ ಮಾನವನ ದೇಹದಷ್ಟೇ. ಬುದ್ದಿಯಲ್ಲಿ ಚಿಂಪಾಂಜಿಗಳು ಆನೆಗಿಂತ ಹೆಚ್ಚು ಬುದ್ದಿಶಾಲಿಗಳು. ಡಾಲ್ವಿನ್ ನ ಮೆದುಳು ಸುಮಾರು 1.6 ಕೆ.ಜಿಗಳಷ್ಟು ಇರುತ್ತದೆ. ಮನುಷ್ಯನ ಮೆದುಳಿನ ತೂಕಕ್ಕಿಂತ ಸ್ವಲ್ಪ ಹೆಚ್ಚು. ಬುದ್ದಿ ಮಟ್ಟದಲ್ಲಿ ಮಾನವನನ್ನು ಬಿಟ್ಟರೆ ನಂತರ ಬರುವುದೇ ಒರಾಂಗುಟನ್ ಎಂಬ ವಾನರ ಜಾತಿಯ ಪ್ರಾಣಿ. ನಂತರ ಡಾಲ್ಟಿನ್ ಬರುತ್ತದೆ. ಆನಂತರ ಚಿಂಪಾಂಜಿಗಳು, ಆನಂತರವೇ ಆನೆ ಬರುತ್ತದೆ. ಇನ್ನು ಅತ್ಯಂತ ಕ್ರೂರ ಪ್ರಾಣಿಗಳಾದ ಹುಲಿ, ಸಿಂಹಗಳ ಮೆದುಳಿನ ತೂಕ ಕೇವಲ ಕಾಲು ಕೆ.ಜಿ ಮಾತ್ರ. ಎಷ್ಟು ವಿಚಿತ್ರ ಅಲ್ಲವೇ? ಅವುಗಳ ಚುರುಕು ತನವೆಲ್ಲಾ ಇತರೆ ಪ್ರಾಣಿಗಳನ್ನು ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಮತ್ತು ತನ್ನನ್ನು ರಕ್ಷಿಸಿಕೊಳ್ಳುವುದಕ್ಕೆ ಮಾತ್ರ ಎನ್ನಿಸುತ್ತದೆ.


ಗಾತ್ರದಲ್ಲಿ ಸಣ್ಣದಾದ ಒಂದು ಮಂಗ ತನ್ನ ಮಂಗ ಚೇಷ್ಟೆಯಿಂದ ಕಾಡಿನಲ್ಲಿ ಮರದ ಕೊಂಬೆರನ್ನು ಹಿಡಿದುಕೊಂಡು, ಕ್ರೂರವಾದ ಹುಲಿ, ಚಿರತೆಯ ಬಾಲವನ್ನು ಎಳೆದು ಎಳೆದು ಅದನ್ನು ಕಾಡುತ್ತದೆ. ಆದರೆ ಕೊಂಬೆಯಿಂದ ಕೊಂಬೆಗೆ ಕ್ಷಣ ಮಾತ್ರದಲ್ಲಿ ಹಾರಿ ತಪ್ಪಿಸಿಕೊಳ್ಳುತ್ತದೆ. ವಿಧಿ ಇಲ್ಲದೇ ಹುಲಿಯು ಮಂಗನ ಚೇಷ್ಟೆಯನ್ನು ಸಹಿಸಿಕೊಳ್ಳಲೇಬೇಕು.


ಮಾನವ ತನ್ನ ದೇಹದ ಗಾತ್ರದಲ್ಲಿ ಕಡಿಮೆ ಇದ್ದರೂ, ಇತರ ಎಲ್ಲ ಪ್ರಾಣಿಗಳನ್ನೂ ತನ್ನ ಹತೋಟಿಗೆ ತೆಗೆದುಕೊಳ್ಳುತ್ತಾನೆ ಮತ್ತು ಎಲ್ಲದಕ್ಕಿಂತ ಹೆಚ್ಚು ಕ್ರೂರಿ, ಏಕೆಂದರೆ ಆತನ ಯೋಚನಾ ಲಹರಿ ಮತ್ತು ಮೆದುಳಿನ ಸಾಮರ್ಥ್ಯ ಹಾಗೆ ಇದೆ.


ಮಾನವನ ಮೆದುಳಿನಲ್ಲಿ ಹರಿಯುವ ತರಂಗಗಳ ವೇಗ ದೂರವಾಣಿಯ ವೇಗಕ್ಕಿಂತಲೂ ಹೆಚ್ಚು. ನಮ್ಮ ಮೆದುಳಿನಲ್ಲಿ 100 ಬಿಲಿಯನ್ ಗಳಷ್ಟು ಜೀವಕೋಶಗಳಿವೆ. ಇದು ತನ್ನ ಕಾರ್ಯವೈಖರಿಯಲ್ಲಿ ಯಾವ ಸೂಪರ್ ಕಂಪ್ಯೂಟರಿಗಿಂತಲೂ ಕಡಿಮೆಯಿಲ್ಲ.

ಆದರೆ ನಾವೆಲ್ಲ ಬಳಸುವ ಆಧಾರದ ಮೇಲೆ ಕೆಲಸ ಮಾಡುತ್ತದೆ.

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು