ಕಥೆ-816
ಅಧಿಕಾರದ ಮದ ಅಪಾಯಕಾರಿ
ಅಧಿಕಾರದ ಮದವೆನ್ನುವುದು ಸುಮ್ಮನೇ ಅಲ್ಲ. ಅಲ್ಪರಿಗೆ ಅಧಿಕಾರ ದೊರೆತಾಗ ಅರಿವಿಗೆ ಬಾರದೇನೇ ನಡೆ-ನುಡಿಗಳಲ್ಲಿ, ಭಾವ-ಭಂಗಿಗಳಲ್ಲಿ ಮಾತಿನ ಧಾಟಿ ಧ್ವನಿಯಲ್ಲಿ ಬೆಂತದ ವಾಸನೆ ಸೇರಿಕೊಂಡು ಗಮನಾರ್ಹವಾದ ಬದಲಾವಣೆಗಳು ಕಂಡು ಬರುತ್ತವೆ.
ಜನರ ಸೇವೆ ಮಾಡಲು ಕೈಗೆ ಸಿಕ್ಕಿರುವ ತಾತ್ಕಾಲಿಕ ಅವಕಾಶವೆಂದು ಮರೆತು ಈ ಅಧಿಕಾರ ಶಾಶ್ವತವೆಂಬಂತೆ ವರ್ತಿಸುತ್ತಾರೆ. ಅಂಥವರಲ್ಲಿ ದುರಹಂಕಾರ ಎದ್ದು ಕಾಣುತ್ತದೆ ಹಾಗೂ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ ಹೆಚ್ಚಿನವರು ಏರಲು ನೆರವಾದ ಏಣಿಯನ್ನೇ ಒದ್ದು ಬಿಸಾಕುವಂತೆ.
ತನಗೆ ನೆರವಾದರನ್ನೇ ಮರೆಯುತ್ತಾರೆ ಅಧಿಕಾರವನ್ನು ಸದುಪಯೋಗ ಪಡಿಸಿಕೊಳ್ಳಬೇಕು.
ಮನುಷ್ಯನ ನಿಜರೂಪವನ್ನು ಕಾಣಬೇಕಾದರೆ, ಅವನಿಗೆ ಅಧಿಕಾರ ಕೊಟ್ಟ ನೋಡು ಎಂಬ ನಾಣ್ಣುಡಿ ಇದೆ.. ಕಾರಣ ಕೆಲವರಿಗೆ ಅಧಿಕಾರದ ಪಿತ್ತ ಬೇಗ ನೆತ್ತಿಗೆ ಏರಿ ಬಿಡುತ್ತದೆ. ಇದು ಅಧಿಕಾರದಲ್ಲಿದ್ದವರಿಗೆ ಗೊತ್ತಾಗದಿದ್ದರೂ, ಇತರರ ಗಮನಕ್ಕೆ ಬೇಗನೆ ಬಂದು ಬಿಡುತ್ತದೆ. ಸಾಮಾನ್ಯವಾಗಿ ಅಧಿಕಾರಕ್ಕೆ ಎರಡು ಸಾಮರ್ಥ್ಯಗಳಿವೆ ಒಂದು ಇತರರಲ್ಲಿ ಭಯ ಹುಟ್ಟಿಸುವಂತಹದು ಇನ್ನೊಂದು ಗೌರವ ಹುಟ್ಟಿಸುವಂತಹದು. ಮೊದಲನೆಯದು ತಾತ್ಕಾಲಿಕ. ಏಕೆಂದರೆ ಅಧಿಕಾರವಿಲ್ಲದಿದ್ದಾಗ ಭಯವೂ ಇಲ್ಲವಾಗುತ್ತದೆ ಎರಡನೇದು ಶಾಶ್ವತ ಅಧಿಕಾರದಲ್ಲಿದ್ದಾಗ ಗೌರವಯುತವಾಗಿ ನಯ ವಿನಯದಿಂದ ನಡೆದುಕೊಂಡರೆ ನಡೆದುಕೊಂಡರೆ, ಅಧಿಕಾರ ಕಳೆದುಕೊಂಡಮೇಲೂ, ಅದೇ ಪ್ರೀತಿ, ವಿಶ್ವಾಸ, ಗೌರವ ಮುಂದುವರೆಯುತ್ತದೆ.. *"ಅಧಿಕಾರಂಚ ಗರ್ಭಂಚ ಆಗಮನೆ ಆನಂದಂ ನಿರ್ಗಮನೇ ಪ್ರಾಣಸಂಕಟಂ"* ಎಂಬ ಸುಭಾಷಿತದಂತೆ. ಅಧಿಕಾರ ಮತ್ತು ಗರ್ಭತನ ಅಗಮಿಸುವಾಗ ಆನಂದವನ್ನೇ ನೀಡಿದರೂ ನಿರ್ಗಮಿಸುವಾಗ ಪ್ರಾಣ ಸಂಕಟವನ್ನು ನೀಡುತ್ತದೆ...
ಅಧಿಕಾರ ಅನ್ನೋದು ನಮಗೆ ಸೇವೆ ಮಾಡಲು ಮಾಡಲು ಸಿಕ್ಕ ಒಂದು ಅವಕಾಶ....
- ಡಾ: ಕೆಪಿ ಪುತ್ತುರಾಯ