ಕಥೆ-817
ಮೊದಲು ಭಯವನ್ನು ಗೆಲ್ಲಿ ...
ನಾನು ನಮ್ಮ ತಂದೆ ಧೀರೂಭಾಯ್ ಅಂಬಾನಿ ಅವರಿಂದ ಹಲವು ವಿಷಯಗಳನ್ನು ಕಲಿತಿದ್ದೇನೆ. ನಾನು ಕಲಿತ ಮೊದಲ ಪಾರವೆಂದರೆ ಅದು ಧೈರ್ಯ. ಯಾರೇ ಆಗಲೀ, ಧೈರ್ಯವಿಲ್ಲದೆ ವೃತ್ತಿ ಜೀವನದಲ್ಲಾಗಲೀ, ವೈಯಕ್ತಿಕ ಜೀವನದಲ್ಲಾಗಲೀ ಏನನ್ನೂ ಸಾಧಿಸಲಾರರು. ನಾವೇ ಏನೇ ದೊಡ್ಡ ಪ್ರಯತ್ನ ಮಾಡುವುದಕ್ಕೆ ಹೊರಟರೂ, ಒಳಗೊಂದು ಸಣ್ಣ ಅಳುಕು ಇದ್ದೇ ಇರುತ್ತದೆ. ಎಲ್ಲಾದರೂ ನಾವಂದುಕೊಂಡಿದ್ದು .ಪ್ಲಾಪ್ ಆದರೆ ಅಥವಾ ಇರುವುದೆಲ್ಲವ ಬಿಟ್ಟು ಇನ್ನೇನೋ ಅರಸುತ್ತಾ ಹೋಗಿ ಸೋತರೆ ಏನು ಕಥೆ ಎಂಬ ಭಯ ನಾವು ಎಲ್ಲಿಯವರೆಗೂ ಹೆದರುತ್ತಿರುತ್ತೇವೋ, ಅಲ್ಲಿಯವರೆಗೂ ಏನೂ ಸಾಧಿಸುವುದಕ್ಕೆ ಸಾಧ್ಯವಿಲ್ಲ. ಆದರೆ, ನಮ್ಮೊಳಗಿರುವ ಒಬ್ಬ ಹೀರೋನನ್ನು ಕಂಡುಕೊಳ್ಳುವುದಕ್ಕೆ ಮೊದಲಿಗೆ ನಾವು ಆ ಭಯವನ್ನು ಗೆಲ್ಲಬೇಕು. ಹಾಗೆ ಗೆಲ್ಲಬೇಕು ಎಂದರೆ ನಮ್ಮಲ್ಲಿ ಧೈರ್ಯವಿರಬೇಕು, ಆತ್ಮವಿಶ್ವಾಸವಿರಬೇಕು.. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಏನನ್ನೋ ಸಾಧಿಸುತ್ತೀನಿ ಎಂಬ ಸ್ಪಿರಿಟ್ ಇರಬೇಕು. ಈ ಮೂರು ಅಂಶಗಳು ನಿಮ್ಮಲ್ಲಿ ಇದ್ದರೆ, ಎಂತಹ ಸಾಧನೆಯನ್ನಾದರೂ ಮಾಡಬಹುದು. ಹಾಗಾಗಿ, ಮೊದಲು ಭಯಬಿಡಿ. ನಾಳೆ ಏನಾಗುತ್ತದೋ ಎಂದು ಹೆದರಬೇಡಿ. ನಾಳೆ ನನ್ನದಾಗುತ್ತದೆ ಎಂಬ ಆತ್ಮವಿಶ್ವಾಸದಿಂದ ಮುನ್ನುಗ್ಗಿ ಆಗ ನೀವು ಅಂದುಕೊಂಡಿದ್ದ ಕೆಲಸ ಸಾಧಿಸದಿದ್ದರೆ ಕೇಳಿ,
| ಮುಕೇಶ್ ಅಂಬಾನಿ.