Thursday, October 16, 2025

 ಕಥೆ-913

ಯಶಸ್ಸಿಗೆ ಶತ್ರುಗಳು ಬಹಳ ಮುಖ್ಯ

ಜೀವನದಲ್ಲಿ ಯಶಸ್ವಿಯಾಗುವುದಕ್ಕೆ ಏನು ಮಾಡಬೇಕು? ಇಂಥದ್ದೊಂದು ಪ್ರಶ್ನೆ ಎಲ್ಲರಲ್ಲೂ ಇರುತ್ತದೆ. ಅದಕ್ಕೆ ಉತ್ತರಗಳು ಸಹ ಹಲವಿದೆ. ಶ್ರದ್ದೆ, ಕಠಿಣ ಪರಿಶ್ರಮ, ಪ್ರಾಮಾಣಿಕತೆ ಇವೆಲ್ಲದರಿಂದ ಖಂಡಿತವಾಗಿಯೂ ಜೀವನದಲ್ಲಿ ಯಶಸ್ವಿಯಾಗುವುದಷ್ಟೇ ಅಲ್ಲ, ಏನು ಬೇಕಾದರೂ ಸಾಧಿಸಬಹುದು. ನಾವು ಯಶಸ್ವಿಯಾಗುವುದಕ್ಕೆ ಒಳ್ಳೆಯ ಸ್ನೇಹಿತರು ಬೇಕು. ಅದೇ ರೀತಿ ಇನ್ನಷ್ಟು ಯಶಸ್ವಿಯಾಗುವುದಕ್ಕೆ ಶತ್ರುಗಳು ಬೇಕು. ಶತ್ರು ಎನ್ನುವುದಕ್ಕಿಂತ ನಮ್ಮನ್ನು ಬಡಿದೆಬ್ಬಿಸುವವರು ಬೇಕು. ಸ್ನೇಹಿತರು ನಮ್ಮನ್ನು ಪ್ರೋತ್ಸಾಹಿಸುತ್ತಾರೆ. ಆದರೆ, ಶತ್ರುಗಳನ್ನು ನಮ್ಮನ್ನು ಪ್ರೇರೇಪಿಸುತ್ತಾರೆ. ಪ್ರೋತ್ಸಾಹದಿಂದ ಸ್ವಲ್ಪ ಸಾಧಿಸಬಹುದು. ಅದೇ ಪ್ರೇರೇಪಣೆಯಿಂದ ನಾವು ಇನ್ನೂ ಎತ್ತರಕ್ಕೆ ಹಾರಬಹುದು. ಹಾಗಾಗಿ, ನಾವು ನಮ್ಮ ಶತ್ರುಗಳನ್ನು ಪ್ರೀತಿಸುವುದನ್ನು, ಅವರನ್ನು ಗೌರವಿಸುವುದನ್ನು ಕಲಿಯಬೇಕು.


ಅವರಿಂದಾಗಿ ನಾವು ನಮ್ಮ ವೀಕ್‌ನೆಸ್‌ಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಬಹಳ ಸಹಾಯವಾಗುತ್ತದೆ. ಅಷ್ಟೇ ಅಲ್ಲ, ನಮ್ಮ ಅಪೂರ್ಣವಾದ ವ್ಯಕ್ತಿತ್ವವನ್ನು ಪೂರ್ಣಗೊಳಿಸಿ ಕೊಳ್ಳುವುದಕ್ಕೂ ಅವರಿಂದ ಬಹಳ ಸಹಾಯವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅವರು ನಿಮ್ಮನ್ನು ಪ್ರಶ್ನೆ ಮಾಡುತ್ತಾರೆ. ಉತ್ತರಗಳನ್ನು ಕಂಡುಕೊಳ್ಳುವುದಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಾಯ ಮಾಡುತ್ತಾರೆ.


ಸಿಡ್ನಿ ಶೆಲ್ಡನ್

ಕಾದಂಬರಿಕಾರ

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು