Thursday, October 23, 2025

 ಕಥೆ-921

ನಮ್ಮ ಬ್ಲಡ್ ಗ್ರೂಪ್‌ನಲ್ಲೇ ಇದೆ-ದಾನದ ಗುಣ


ಸಾವು ಬದುಕಿನ ಮಧ್ಯೆ ಹೋರಾಡುವ ಜೀವಕ್ಕೆ ರಕ್ತ ಅನಿವಾರ್ಯ, ರಕ್ತಕ್ಕೆ ರಕ್ತವೇ ಪರ್ಯಾಯ. ಮನುಷ್ಯನ ರಕ್ತದ ಗುಂಪಿನಲ್ಲಿಯೇ ಇದೆ ದಾನದ ಗುಣ, ಸ್ವಭಾವ, ಅದುವೇ ಅದ್ಭುತ ಸೃಷ್ಟಿ,


ಹೌದು, ಒ ಪಾಸಿಟಿವ್ ಗ್ರೂಪ್ ಯುನಿವರ್ಸಲ್ ಡೋನರ್. ಉಳಿದ ಎಲ್ಲ ಗ್ರೂಪ್ ನವರಿಗೂ ಒ ಪಾಸಿಟಿವ್ ಜೀವಧಾತು ಇದ್ದಂತೆ. ಪ್ರಪಂಚದಲ್ಲಿ ಒ ಪಾಸಿಟಿವ್ ರಕ್ತ ಹೊಂದಿದ ಜನಸಂಖ್ಯೆ ಹೆಚ್ಚು, ರಕ್ತದ ಗುಂಪಿನಲ್ಲೇ ದಾನದ ಮನೋಭಾವ ಇದೆ ಎಂದರೆ ತಪ್ಪಾಗಲಾರದು. ಎಬಿ ಗುಂಪಿನವರ ಜನಸಂಖ್ಯೆ ಕಡಿಮೆ ಇದ್ದು, ಇತರೆ ಎಲ್ಲ ಗ್ರೂಪ್ ಗಳಿಂದಲೂ ಇವರಿಗೆ ರಕ್ತ ಸಿಗುತ್ತದೆ. 

ಊಟದಿಂದ ಶರೀರಕ್ಕೆ, ಪಾಠದಿಂದ ಮೆದುಳಿಗೆ, ಆಟದಿಂದ ಮನಸ್ಸಿಗೆ ತೃಪ್ತಿ ದೊರೆತರೆ, ಆತ್ಮಕ್ಕೆ ತೃಪ್ತಿ ಯಾವುದರಿಂದ ದೊರೆಯುತ್ತದೆ, ಅದುವೇ ನಿಸ್ವಾರ್ಥ ಸೇವೆಯಿಂದ. ಹಾಗಾಗಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವವರ ನಿಜವಾಗಿಯೂ ಜೀವದ ದಾನಿಗಳು ಬೇರೊಬ್ಬರ ಜೀವ ಉಳಿಸಿದ ಪುಣ್ಯವಂತರು..


ವಿಜ್ಞಾನ ಸಾಕಷ್ಟು ಮುಂದುವರಿದಿದೆಯಾದರೂ ಕೃತಕ ರಕ್ತ ಸೃಷ್ಟಿ ಸಾಧ್ಯವಾಗಿಲ್ಲ. ರಕ್ತಕ್ಕೆ ಯಾವುದೇ ಪರ್ಯಾಯವಿಲ್ಲ. ಆದರೆ, ಮನುಷ್ಯನ ರಕ್ತದ ಗ್ರೂಪ್ ಮಾತ್ರ ಹಲವು. ಪ್ರಪಂಚದ ಜನಸಂಖ್ಯೆಯ ಬ್ಲಡ್‌ ಗ್ರೂಪ್‌ನ ವಿಭಜನೆಯೇ ಒಂದು ವಿಶೇಷ. ಒಂದು ಅಧ್ಯಯನದ ಪ್ರಕಾರ ನಮ್ಮಲ್ಲಿ ಒ, ಎ, ಬಿ ಮತ್ತು ಎಬಿ ಜೊತೆಗೆ ಆರ್ ಹೆಚ್ ಪಾಸಿಟಿವ್ ಮತ್ತು ಆರ್ ಹೆಚ್ ನೆಗೆಟಿವ್ ರಕ್ತದ ಗುಂಪುಗಳಿವೆ. ಒ ಪಾಸಿಟಿವ್ ಅಂದಾಜು ಶೇ.37.12 ರಷ್ಟಿದ್ದರೆ, ಬಿ ಪಾಸಿಟಿವ್ ಶೇ. 32.26 ರಷ್ಟಿದೆ. ಎ ಪಾಸಿಟಿವ್ ಶೇ.22.88 ರಷ್ಟು, ಎಬಿ ಪಾಸಿಟಿವ್ ಶೇ. 7.74 ರಷ್ಟು, ಒ ನೆಗೆಟಿವ್ ಶೇ.2.5, ಎ ನೆಗೆಟಿವ್ ಶೇ.1.9, ಬಿ ನೆಗೆಟಿವ್ ಶೇ. 1.1, ಎಬಿ ನೆಗೆಟಿವ್ ಶೇ. 0.36 ರಷ್ಟಿದೆ.


ಒ ನೆಗೆಟಿವ್ ಮತ್ತು ಒ ಪಾಸಿಟಿವ್ ಗ್ರೂಪ್ ಯುನಿವರ್ಸಲ್ ಡೋನರ್. 


ಒ ಪಾಸಿಟಿವ್ ರಕ್ತವನ್ನು ಎ ಪಾಸಿಟಿವ್, ಬಿ ಪಾಸಿಟಿವ್, ಎಬಿ ಪಾಸಿಟಿವ್ ಗುಂಪಿನವರಿಗೂ ಕೊಡಬಹುದು. ವಿಶ್ವದಲ್ಲಿ ಒ ಪಾಸಿಟಿವ್ ಗ್ರೂಪ್‌ನ ಜನಸಂಖ್ಯೆಯೇ ಹೇರಳ. ಒ ನೆಗೆಟಿವ್ ರಕ್ತವನ್ನು ಬೇರೆ ಯಾವುದೇ ಗುಂಪಿನವರಿಗೆ ನೀಡಬಹುದು. 

ಎಬಿ ಬ್ಲಡ್ ಗ್ರೂಪ್ ನವರ ಜನಸಂಖ್ಯೆ ಕಡಿಮೆ ಇದ್ದು, ಬೇರೆ ಬ್ಲಡ್ ಗುಂಪಿನವರಿಗೆ ಕೊಡಲು ಸಾಧ್ಯವಿಲ್ಲ. ಎ,ಬಿ ರಕ್ತ ಗುಂಪಿನವರು ಅವರ ಗುಂಪಿನವರಿಗೆ ಮಾತ್ರ ರಕ್ತವನ್ನು ನೀಡಬಹುದು. ಹಾಗಾಗಿ ಒ ಗ್ರೂಪ್‌ ನವರು ಯುನಿವರ್ಸಲ್ ಡೋನರ್ ಇದ್ದಂತೆ. ಎಬಿ ಗುಂಪಿನವರು ಯುನಿವರ್ಸೆಲ್ ರಿಸಿಪಿಯಂಟ್ ಆಗಿರುತ್ತಾರೆ. ಎಬಿ ಗುಂಪಿನವರ ಜನಸಂಖ್ಯೆಯೂ ಕಡಿಮೆ ಇದ್ದು, ಇವರು ಬೇರೆ ಗ್ರೂಪ್ ನವರಿಗೆ ರಕ್ತವನ್ನು ಕೊಡಲಾಗುವುದಿಲ್ಲ.


ಯಾರು ರಕ್ತದಾನ ಮಾಡಬಹುದು? : 18ರಿಂದ 60 ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿ, ಪುರುಷರು 3

ತಿಂಗಳಿಗೊಮ್ಮೆ, ಮಹಿಳೆಯರು 6 ತಿಂಗಳಿಗೊಮ್ಮೆ, ಪುರುಷರ ತೂಕ 45 ಕೆ.ಜಿ. ಹಾಗೂ ಮಹಿಳೆಯರ ತೂಕ 50 ಕೆ.ಜಿ ಗಿಂತ ಹೆಚ್ಚು ಇರಬೇಕು, ದಾನಿಗಳ ಸಿಸ್ಟಾಲಿಕ್ ರಕ್ತದ ಒತ್ತಡ 120 ರಿಂದ 160 ಹಾಗೂ ಡಯಾಸ್ಟಾಲಿಕ್ ರಕ್ತದ ಒತ್ತಡ 70ರಿಂದ 100 ಇರಬೇಕು, ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5ಕ್ಕಿಂತ ಹೆಚ್ಚಿರಬೇಕು. ಪಲ್ಸ್ ರೇಟ್ ನಿಮಿಷಕ್ಕೆ 50 ರಿಂದ 100 ಇರಬೇಕು.


ಯಾರು ರಕ್ತದಾನ ಮಾಡುವಂತಿಲ್ಲ?: ಸಾಂಕ್ರಾಮಿಕ ಕಾಯಿಲೆಯಿಂದ ಬಳಲುತ್ತಿದ್ದರೆ, ಆಲ್ಕೋಹಾಲ್ ಅಥವಾ

ಆ್ಯಂಟಿಬಯೋಟಿಕ್‌ಗಳನ್ನು ಸೇವಿಸಿದ 72 ಗಂಟೆಗಳವರೆಗೆ, ಕಾಯಿಲೆ ವಿರುದ್ಧ ವ್ಯಾಕ್ಸಿನೇಷನ್ ಮಾಡಿಸಿಕೊಂಡಿದ್ದವರು ನಾಲ್ಕು ವಾರದವರೆಗೆ ಹಾಗೂ ಆಸ್ಪಿರಿನ್ ಮಾತ್ರೆ ಸೇವಿಸಿದ್ದರೆ 3 ದಿನಗಳವರೆಗೆ. ಸ್ವತಃ ರಕ್ತಪಡೆದಿದ್ದರೆ, 3 ತಿಂಗಳ ಮೊದಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ರಕ್ತದಾನ ಮಾಡುವಂತಿಲ್ಲ.


ಇನ್ನು ಹೃದ್ರೋಗ, ಡಯಾಬಿಟಿಕ್, ಕ್ಯಾನ್ಸರ್, ಜಾಂಡೀಸ್, ಹೆಪಟೈಟಿಸ್ ಬಿ ಮತ್ತು ಸಿ, ಅಸ್ವಾಭಾವಿಕ ರಕ್ತಸ್ರಾವ, ಕಿಡ್ನಿ-ಲಿವರ್ ಸಂಬಂಧಿ ಕಾಯಿಲೆ, ಬ್ರಾಂಕೈಟಿಸ್, ಮೂರ್ಛಿ ರೋಗ, ಇದ್ದಕ್ಕಿಂತೆ ತೂಕ ಕಡಿಮೆ ಆಗುವುದು ಹಾಗೂ ಮಾನಸಿಕ ಅಸ್ವಸ್ಥರು ಹಾಗೂ ಎಚ್ ಐವಿ/ಏಡ್ಸ್ ರೋಗಿಗಳು ರಕ್ತದಾನ ಮಾಡುವಂತಿಲ್ಲ.


ರಕ್ತದಾನದಿಂದಾಗುವ ಲಾಭ: ಬೈನ್ ಸ್ಟೋಕ್, ಹೃದಯಾಘಾತ ಕಡಿಮೆ ಆಗುತ್ತದೆ. ರಕ್ತದಾನದ ನಂತರ ರಕ್ತ ತಿಳಿಯಾಗುವ ಮೂಲಕ ಹೃದಯದಲ್ಲಿ ಬ್ಲಾಕೇಜ್ ತಡೆಯುತ್ತದೆ. ಹೃದಯಾಘಾತದ ಪ್ರಮಾಣ ಶೇ. 88ರಷ್ಟು ಕಡಿಮೆ ಆಗುತ್ತದೆ. ಅಲ್ಲದೇ ಶೇ.3 ರಿಂದ 5 ಪ್ರಮಾಣದಲ್ಲಿ ಕ್ಯಾನ್ಸರ್ ಸಾಧ್ಯತೆ ಕಡಿಮೆ ಮಾಡುತ್ತದೆ. ಮಾಂಸಹಾರಿಗಳಲ್ಲಿ ಆಗುವ ಕಬ್ಬಿಣದ ಅಂಶದ ಹೆಚ್ಚುವಿಕೆಯನ್ನು ನಿಯಂತ್ರಿಸುತ್ತದೆ. ಹೆಚ್ಚು ರಕ್ತದಾನ ಮಾಡುವುದರಿಂದ ಆಯಸ್ಸು ಕೂಡ ವೃದ್ಧಿಸುತ್ತದೆ. ಕೊಲೆಸ್ಟ್ರಾಲ್ ಪ್ರಮಾಣ ವೃದ್ಧಿಯಾಗುವುದಲ್ಲದೇ, ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗಿ ಕೆಟ್ಟ ಕೊಲೆಸ್ಟ್ರಾಲ್‌ ನ್ನು ನಿಯಂತ್ರಣದಲ್ಲಿಡುತ್ತದೆ.


ಎಲ್ಲದಕ್ಕಿಂತ ಮಿಗಿಲಾದ ಆತ್ಮ ಸಂತೃಪ್ತಿ. ರಕ್ತಕ್ಕೆ ಯಾವುದೇ ಜಾತಿ, ಮತ, ಪಂಥ, ಧರ್ಮವಿಲ್ಲ. ಕೊಡುವುದರ ಮೂಲಕ ರಕ್ತ ಸಂಬಂಧಿಗಳಾಗಬಹುದು


ಡಾ|| ಧನಂಜಯ

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು