ಕಥೆ-922
ಪಂಜರದ ಹೊರಗಿರುವುದೇ ಇಷ್ಟ..
https://basapurs.blogspot.com/
ಬದುಕಿಗೆ ಎರಡು ಅಂಗ. ಒಂದು ಬಹಿರಂಗ, ಇನ್ನೊಂದು ಅಂತರಂಗ, ಒಂದು ದೇಹ, ಇನ್ನೊಂದು ಮನಸ್ಸು. ಅವೆರಡೂ ಅವಿಭಾಜ್ಯ ಅಂಗಗಳು, ಒಂದನ್ನು ಬಿಟ್ಟು ಒಂದು ಇರಲಾರವು. ಈ ದೇಹ, ಮನಸ್ಸು ಇಲ್ಲದಿದ್ದರೆ ಬದುಕೇ ಇಲ್ಲ. ಇವೆರಡರ ಸಮನಾದ ವಿಕಾಸವೇ ಪರಿಪೂರ್ಣ
ಬದುಕು. ಬಹಿರಂಗದಲ್ಲಿ ಸಮೃದ್ಧಿ, ಅಂತರಂಗದಲ್ಲಿ ಸಂತೃಪ್ತಿ, ಸಮಾಧಾನ,ಅದು ಸಾರ್ಥಕ ಬದುಕು.
ನಾವು ಎಷ್ಟು ದಿವಸ ಬದುಕಿದೆವು, ಎಷ್ಟು ಗಳಿಸಿದೆವು, ಎನ್ನುವುದು ಮುಖ್ಯವಲ್ಲ, ಎಷ್ಟು ಅನುಭವಿಸಿದೆವು, ಎಷ್ಟು ಆನಂದಿಸಿದೆವು ಎಂಬುವುದು ಮುಖ್ಯ. ನಾವು ರಾಜ -ಮಹಾರಾಜರೇ ಆಗಿರಬಹುದು, ಅಧಿಕಾರ ಅಂತಸ್ತು, ಮಾನ-ಮರ್ಯಾದೆ ಏನೆಲ್ಲ ಇರಬಹುದು. ಆದರೆ, ಅಂತರಂಗದಲ್ಲಿ
ಶಾಂತಿ-ಸಮಾಧಾನ ಇಲ್ಲದಿದ್ದರೆ ಬಹಿರಂಗದ ಆ ಸಿರಿಸಂಪದಕ್ಕೆ ಏನರ್ಥ?
ಒಂದು ಪಕ್ಷಿ, ಅದಕ್ಕೆ ಅರಮನೆ-ಅರಸೊತ್ತಿಗೆ, ಪದವಿ-ಪ್ರಶಸ್ತಿ, ಘನತೆ-ಗೌರವ ಏನೂ ಇಲ್ಲ. ಆದರೆ ಅದರ ಸಂತಸಕ್ಕೆ ಏನೂ ಕೊರತೆಯಿಲ್ಲ. ಯಾವಾಗಲೂ ಹಾಡಿ ನಲಿಯುತ್ತದೆ. ಕೂಡಿ ಆಡುತ್ತದೆ!
ಒಬ್ಬ ಸಿರಿವಂತ ಅದನ್ನು ಮನೆಗೆ ತಂದು ಸಾಕಿದ. ಒಂದು ದಿನ ಆತ ಅದಕ್ಕೆ ಕೇಳಿದ“ ನಿನಗೆ ಈ ಬಂಗಾರದ ಪಂಜರದ ಒಳಗೆ ಇರುವುದು ಇಷ್ಟವೋ ಅಥವಾ ಪಂಜರದ ಹೊರಗೆ ಇರುವುದು ಇಷ್ಟವೋ” ಗಿಳಿ ಹೇಳಿತು -“ಮನುಷ್ಯನೇ, ನಿಮ್ಮಂತೆ ನಾನು ನಾಲ್ಕು ಗೋಡೆಗಳ ಮಧ್ಯದಲ್ಲಿ ಇರುವವನಲ್ಲ. ನನಗೆ ಬಂಗಾರದ ಪಂಜರ ಬೇಡ, ಅನಂತ ಆಗಸದಲ್ಲಿ ಹಾರಿ-ಹಾಡಿ ನಿಸರ್ಗ ಸ್ವರ್ಗದಲ್ಲಿ ನಲಿಯುವವ. ನನಗೆ ಪಂಜರದ ಹೊರಗಿರುವುದೇ ಇಷ್ಟ!”
ಶ್ರೀ *ಸಿದ್ಧೇಶ್ವರ ಸ್ವಾಮೀಜಿ*