ಕಥೆ-934
ಅವಕಾಶಗಳು ಬಂದೇ ಬರುತ್ತವೆ, ನಾವು ರೆಡಿ ಆಗಿರಬೇಕು ಅಷ್ಟೇ..
ಜೀವನದಲ್ಲಿ ಎಂತಹ ಅದ್ಭುತಗಳು ನಡೆಯುತ್ತದೆ ನೋಡಿ.. ಶಫಾಲಿ ವರ್ಮ ಎಂಬ 21 ವಯಸ್ಸಿನ ಆರಂಭಿಕ ಬ್ಯಾಟರ್ ಈ ಬಾರಿ ವಿಶ್ವಕಪ್ ತಂಡದಲ್ಲಿರಲಿಲ್ಲ.. ಆದರೆ ಅದ್ಭುತ ಲಯದಲಿದ್ದ ಸ್ಟಾರ್ ಬ್ಯಾಟರ್ ಪ್ರತಿಕಾ ರಾವಲ್ ಗಾಯಕ್ಕೆ ತುತ್ತಾಗಿದ್ದರಿಂದ ಆಕೆ ಜಾಗಕ್ಕೆ ಶಫಾಲಿ ಕೊನೆ 2 ಪಂದ್ಯಕ್ಕೆ ಆಯ್ಕೆಯಾದಳು.. ಸೆಮಿಫೈನಲ್ ಅಲ್ಲಿ ಕೇವಲ 10 ರನ್ ಗಳಿಗೆ ಔಟಾಗಿದ್ದ ಈಕೆ, ಫೈನಲ್ ಪಂದ್ಯದಲ್ಲಿ ಜಾದು ಮಾಡಿದ್ಲು.. 87 ರನ್ ಬಾರಿಸಿದ್ದಲ್ಲದೇ, 7 ಓವರ್ ಎಸೆದು, ಅಮೂಲ್ಯ 2 ವಿಕೆಟ್ ಕಿತ್ತಳು.. ಅದೂ ಭಾರತಕ್ಕೆ ವಿಕೆಟ್ ಅತೀ ಅಗತ್ಯವಿದ್ದ ಸಮಯದಲ್ಲಿ.. ಫೈನಲ್ ಪಂದ್ಯದಲ್ಲಿ ಭಾರತದ ಗೆಲುವಿನ ರೂವಾರಿಯಾದ ಈಕೆ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಳು.. ಜೊತೆಗೆ ವಿಶ್ವಕಪ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಕಿರಿಯ ಆಟಗಾರ್ತಿ ಎಂಬ ಖ್ಯಾತಿಗೊ ಭಾಜನಳಾದಳು.. ಬದುಕು ಅದ್ಭುತ ಅವಕಾಶವನ್ನು ಯಾವಾಗ ಬೇಕಾದರೂ ನೀಡಬಹುದು. ನಾವು ಅದನ್ನು ಬಳಸಿಕೊಳ್ಳಲು ಸಿದ್ಧರಿರಬೇಕು ಅಷ್ಟೇ.. ಎಲ್ಲಾ ಮುಗಿದು ಹೋಯ್ತು ಅಂತ ನಿರಾಶೆಯಿಂದ ಇರೋ ಅದೆಷ್ಟು ಜನರಿಗೆ ಶಫಾಲಿಯ ಈ ಕಥೆ ಸ್ಫೂರ್ತಿದಾಯಕ..
-ಪ್ರವೀಣ್ ಕುಸುರಿ
