Sunday, November 9, 2025

 ಕಥೆ-939

ಭರವಸೆಯೇ ಬದುಕು

https://basapurs.blogspot.com/

ಬದುಕು ಎಲ್ಲವನ್ನೂ ಸಲೀಸಾಗಿ ಕಲಿಸಿ ಬಿಡುತ್ತದೆ. ಬಲು ಕಷ್ಟ ಎನಿಸುವುದನ್ನು ಕೂಡ. ಅದು ನೀಡುವ ಯಾವ ಟಾಸ್ಕನಿಂದ ನಾವು ಬಚಾವಾಗಲು ಸಾಧ್ಯವೇ ಇಲ್ಲ ಎನ್ನುವಂತೆ, ಹೌದು ಬದುಕು ನೀಡುವ ಟಾಸ್ಕಗಳಿಂದ ಬಚಾವಾಗುವ ಮಾತೇ ಇಲ್ಲ. ಬಂದಂತೆ ಸ್ವೀಕರಿಸಬೇಕಷ್ಟೇ. ಒಳಿತು ಕೆಡಕುಗಳ ನಂತರವೂ ತಾಳ್ಮೆ ಹಾಗೂ ಪ್ರಬುದ್ದತೆಯಿಂದ ಎಚ್ಚರದ‌‌ ಹೆಜ್ಜೆ ಇಟ್ಟವರು ಮಾತ್ರ ಇಲ್ಲಿ ಉಳಿಯುತ್ತಾರೆ, ಇಲ್ಲದಿದ್ದರೆ ಅಳಿಯುತ್ತಾರೆ. ಅದಕ್ಕೆ ಸಾವಿರ ನೆಪಗಳನ್ನು ನೀಡಿ, ಈ ಬದುಕಿನ ಓಟವನ್ನು ಅದು ಬಂದಂತೆ ಎದುರಿಸಲಾಗದೇ ಪಲಾಯನಗೈಯುತ್ತಾರೆ.

ಹುಟ್ಟಿರುವುದು ಸುಮ್ಮನೆ ಬಿಟ್ಟು ಹೋಗಲಲ್ಲ ಎನ್ನುವುದು ನಮ್ಮನ್ನು ಕಾಡಬೇಕು, ಅದು ಕಾಡಿದಷ್ಟು ಸಮಸ್ಯೆಗಳು ಹಾಗೂ ಸವಾಲುಗಳ‌ ನಡುವೆಯೇ ಈ ಬದುಕಿನ‌ ಮೆರಗು ಹೆಚ್ಚಿಸಿ ಸಾರ್ಥಕ‌ ಭಾವ ಮೂಡಿಸುವ ಪ್ರಯತ್ನಗಳನ್ನು ಬಿಡದೇ ಅರಂಭಿಸಲೇಬೇಕು. ಎದುರಿಸುವವನ ಬತ್ತದ ಆಶಾವಾದದ ರಭಸಕ್ಕೆ ಮಾತ್ರ ಈ ಬದುಕು ನೀಡುವ ಸವಾಲುಗಳನ್ನು ಹಿಮ್ಮೆಟ್ಟಿಸುವ ತಾಕತ್ತಿರುವುದು. ಸಂದಿಗ್ಧತೆಗಳು ಎದುರಾದಾಗ ನಮ್ಮೊಳಗಿನ ಗಟ್ಟಿತನ ಇನ್ನಷ್ಟು ಬಲವಾಗಬೇಕು, ಅದರ ಬಲದಿಂದಲೇ ಮತ್ತೇ ಮೊದಲಿನಂತೆ ಎದ್ದು ನಿಲ್ಲಬೇಕು. ನಮ್ಮ ಬದುಕಿನ ನೆಮ್ಮದಿಯನ್ನು ಇತರರು ನಿರ್ಧರಿಸಲಾಗದು, ಅದನ್ನು ನಾವೇ ನಮ್ಮ ಇತಿಮಿತಿಯೊಳಗೆ ನಿರ್ಧರಿಸಿಕೊಂಡರೆ ಅದರ ಆಯುಷ್ಯ ಜಾಸ್ತಿ. ನಮ್ಮೊಳಗಿನ ನಂಬಿಕೆ, ಆತ್ಮವಿಶ್ವಾಸ ಅಲುಗಾಡದಿದ್ದರೆ ಸಾಕು, ಸಾವಿರ ಸವಾಲುಗಳನ್ನು ಎದುರಿಸಿಯೂ ಮೊದಲಿನಂತೆಯೇ ಗಟ್ಟಿಯಾಗಿ ನಿಲ್ಲಬಹದು.

ನಂಬಿಕೆಯೇ ಉಸಿರು ಭರವಸೆಯೇ ಬದುಕು

ಕೃಪೆ :ನೆಟ್

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು