ಕಥೆ-948
ಇರುವ ಭಾಗ್ಯವ ನೆನೆದು ಬಾರನೆಂಬುದನು ಬಿಡು
ಕೃತಜ್ಞತೆ ಎಂದರೆ ಮಾಡಿದ ಉಪಕಾರವನ್ನು ಸಹಾಯವನ್ನು ನೆನೆಸಿಕೊಳ್ಳುವವನು.... ಕೃತಘ್ನತೆ ಎಂದರೆ ಮಾಡಿದ ಉಪಕಾರ ಅಥವಾ ಸಹಾಯವನ್ನು ಮರೆತು ಮಾತನಾಡುವವನು..
ನಮ್ಮ ತಂದೆ ತಾಯಿಗಳಿಗೆ ಎಷ್ಟು ಕೃತಜ್ಞರಾಗಿದ್ದರೂ ಕಡಿಮೆ...
ಭಿಕ್ಷುಕನೋರ್ವ ಒಂದು ಮನೆಗೆ ಭಿಕ್ಷೆ ಬೇಡಲು ಹೋಗುತ್ತಾನೆ... ಆತ ಆ ಮನೆಯನ್ನು ನೋಡುತ್ತಾನೆ ಅದು ಮನೆ ಅಲ್ಲˌ ಅರಮನೆ. ನೋಡಿ ಮುಗಿಸಲು ಎರಡು ಕಣ್ಣು ಸಾಲದು.. ಹೊರಗಡೆ ಐಶರಾಮಿ ಕಾರುಗಳು ಸಾಲುಗಟ್ಟಿ ನಿಂತಿವೆ.
ಕೊಟ್ಟಾರದ ಹೊರಾಂಗಣದಲ್ಲಿ ಅರಮನೆಯ ಒಡೆಯ ಕಪ್ಪು ಕೂಲಿಂಗ್ ಗ್ಲಾಸೊಂದನ್ನ ಹಾಕಿ ಐಶಾರಾಮಿ ಕುರ್ಚಿಯಲ್ಲಿ ಕುಳಿತಿದ್ದಾನೆ....
ಅವನ ಪಕ್ಕದಲ್ಲಿ ಸುಂದರಿಯಾದಂತಹ ಪತ್ನಿಯೂ ಇದ್ದಾಳೆ......
ತಂದೆ—ತಾಯಿಯ ಸೇವೆಗೆ ಸದಾ ಸಿಧ್ಢರಾಗೋ ಮಕ್ಕಳೂ ಇದ್ದಾರೆ.......
ಇದನ್ನೆಲ್ಲಾ ಗಮನಿಸಿದ ಭಿಕ್ಷುಕ ಹೇಳಿದ "ಓ ಯಜಮಾನರೇ. ಓ ಯಜಮಾನರೇ. ನೀವೆಷ್ಟು ಭಾಗ್ಯವಂತರುˌ ನಿಮಗೆ ಬಹಳ ಅನುಗ್ರಹವಾಗಿದೆ . ನಿಜಕ್ಕೂ ನೀವು ಭಾಗ್ಯವಂತರು...
ನಿಮಗೆ ದೊಡ್ಡ ಅರಮನೆ ಇದೆ ಅಲ್ಲವೇ..? ನನಗೆ ಒಂದಿಂಚು ಭೂಮಿಯೂ ಇಲ್ಲ.
ನಿಮಗೆ ಐಶಾರಾಮಿ ಕಾರು ಇದೆ ಅಲ್ಲವೇ.....? ನನಗೆ ಸರಿಯಾದ ಚಪ್ಪಲಿಯೂ ಇಲ್ಲ...
ನಿಮಗೆ ಸುಂದರಿಯಾದ ಪತ್ನಿಯೂ ಇದ್ದಾಳೆˌ ನನಗೆ ಯಾರು ಹೆಣ್ಣು ಕೊಡುವವರು, ಆದ್ದರಿಂದ ಮಕ್ಕಳೂ ಇಲ್ಲ.
ನಿಜಕ್ಕೂ ನೀವು ಭಾಗ್ಯವಂತರು...
ಇದನ್ನ ಕೇಳಿದ ಯಜಮಾನ ಭಿಕ್ಷುಕನೊಂದಿಗೆ ಹೇಳಿದ " ನನಗೆ ನೀಡದಂತಹ ಒಂದು ದೊಡ್ಡ ಅನುಗ್ರಹ ನಿನಗಿದೆ..
ಭಿಕ್ಷುಕ ಅಚ್ಚರಿಯೊಂದಿಗೆˌ ಅದೇನೆಂದು ಕೇಳುತ್ತಾನೆ.
ಯಜಮಾನˌ ತನ್ನ ಕನ್ನಡಕವನ್ನ ತೆಗೆದು ಹೇಳುತ್ತಾನೆˌ ನನಗೆ ಎರಡೂ ಕಣ್ಣು ಬಿಟ್ಟು ಎಲ್ಲಾ ಇದೆ, ನಾನು ಕುರುಡ" ನನ್ನ ಎಲ್ಲಾ ಅನುಗ್ರಹವನ್ನ ನಿನಗೆ ನೀಡುವೆ. ನಿನ್ನ ಎರಡೂ ಕಣ್ಣುಗಳನ್ನು ನನಗೆ ನೀಡುವೆಯಾ...?
ಭಿಕ್ಷುಕ ಏನೂ ಮಾತನಾಡದೇ ಅಲ್ಲಿಂದ ಹೊರಬಂದ...
ಆ ಯಜಮಾನನಿಗೆ ನೀಡಿದಂತಹ ಅನುಗ್ರಹ ನನ್ನ ಎರಡು ಕಣ್ಣಿಗೆ ಸಮಾನವಲ್ಲ ಎಂಬ ವಾಸ್ತವವನ್ನು ಭಿಕ್ಷುಕ ಮನದಟ್ಟು ಮಾಡಿಕೊಂಡ...
ಮನುಷ್ಯ ಎಲ್ಲದಕ್ಕೂ ಬೆಲೆಕಟ್ಟುತ್ತಾನೆ... ಆದರೆ ನಮಗೆ ಪುಕ್ಕಟೆಯಾಗಿ ತಂದೆ ತಾಯಿಗಳು ಕೊಟ್ಟಂತಹ ಬೆಲೆಕಟ್ಟಲಾಗದ ನಮ್ಮ ದೇಹದ ಒಂದೊಂದು ಅಂಗಾಂಗದ ಬಗೆಗೆ ನಮಗೆ ಎಚ್ಚರವೇ ಇರೋಲ್ಲ...
The world fastest driver ವಿಶ್ವದ ಅತ್ಯಂತ ವೇಗದ ಚಾಲಕ ಎಂಬ ಖ್ಯಾತಿಯ "ಮೈಕಲ್ ಚುಮಾಕರ್" ಒಮ್ಮೆ ಅಫಘಾತಕ್ಕೊಳಗಾಗಿ ಕೋಮದಲ್ಲಿದ್ದರು. ಕುತ್ತಿಗೆಯ ಭಾಗದ ನರಗಳು ಛಿದ್ರಗೊಂಡ ಕಾರಣˌ ಅದನ್ನ ಸರಿಪಡಿಸಲು ಆಸ್ಪತ್ರೆಯಲ್ಲಿ ತಗುಲಿದಂತಹ ಒಟ್ಟು ಮೊತ್ತ 109 ಕೋಟಿ ರೂ. ಆದರೂ ಸರಿಯಾದ ರೀತಿಯಲ್ಲಿ ಚುಮಾಕರ್ ನಿಗೆ ಇಂದು ತಲೆಎತ್ತಲು ಸಾಧ್ಯವಿಲ್ಲ...
ಹಾಗಾದರೆ ಕುತ್ತಿಗೆಯಲ್ಲಿನ ನರಗಳ ಬೆಲೆ ಎಷ್ಟು.....?
ನಮ್ಮ ಎರಡು ಕಣ್ಣುಗಳ ಬೆಲೆ...? Brain ಅಥವಾ ಕಿಡ್ನಿಯ ಬೆಲೆ...?
ನಮ್ಮ ಶರೀರದ ಕುರಿತು ಚಿಂತಿಸುವಾಗ ನಾವು ಕೋಟ್ಯಧಿಪತಿಗಳೇ.!
"ಇರುವ ಭಾಗ್ಯವ ನೆನೆದು ಬಾರೆನೆಂಬುವುದನು ಬಿಡು" ಹರುಷಕ್ಕಿದೆ ದಾರಿ ಎಂಬ ಡಿ.ವಿ.ಜಿ.ಯವರ ವಚನ ಅಕ್ಷರಶಃ ಸತ್ಯ...
ಕೃಪೆ: ಅಂತರ್ಜಾಲ.