Sunday, December 28, 2025

 ಕಥೆ-988

ಏಕಾಂತದಲ್ಲೇ ಹುಟ್ಟಿದ ಮಹಾನ್ ಆವಿಷ್ಕಾರ.. (ಭಾಗ-2)

https://basapurs.blogspot.com

ಒಮ್ಮೆ ಇಂಗ್ಲೆಂಡ್‌ನಲ್ಲಿ ಭಯಾನಕ ಪ್ಲೇಗ್ ರೋಗ ಹರಡಿತು. ಆ ಸಮಯದಲ್ಲಿ (1665–1666) ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯವನ್ನು ಮುಚ್ಚಬೇಕಾಯಿತು. ಅನೇಕ ಪದವಿ ವಿದ್ಯಾರ್ಥಿಗಳು ಈ ಪರಿಸ್ಥಿತಿಯಲ್ಲಿ ತಮ್ಮ ಓದನ್ನು ನಿಲ್ಲಿಸಿ ಮನೆಗೆ ಹಿಂತಿರುಗಿದರು.


ಆ ಸಮಯದಲ್ಲಿ ಪದವಿ ವಿದ್ಯಾರ್ಥಿಯೊಬ್ಬ ತನ್ನ ಹಳ್ಳಿಯಾದ ವೂಲ್ಸ್‌ಥಾರ್ಪ್‌ಗೆ ಹಿಂತಿರುಗಿದ. ಅದು ಅತ್ಯಂತ ಕಠಿಣ ಕಷ್ಟಕರ ಜೀವನದ ಕಾಲ. ಬದುಕಿದರೆ ಸಾಕು ಎನ್ನುವ ಪರಿಸ್ಥಿತಿ.. ವಿಶ್ವವಿದ್ಯಾಲಯ ಮುಚ್ಚಿದೆ, ಅಧ್ಯಯನಕ್ಕೆ ಮಾರ್ಗದರ್ಶನ ಇಲ್ಲ, ಸಮಾಜದಲ್ಲಿ ಭಯ ಮತ್ತು ಅನಿಶ್ಚಿತತೆ.. ಈ ಸಂಕಷ್ಟವನ್ನು ಹೇಗೆ ನಿಭಾಯಿಸಬೇಕು ಎಂಬ ಯೋಚನೆ... ಈ ಸಂಕಷ್ಟ, ನನಗೆ ಅವಕಾಶ ಅಂದುಕೊಂಡರೆ ಹೇಗೆ ? ಎಂಬ ಮನಸ್ಥಿತಿ ಮೂಡಿತು. ಮನೆಯಲ್ಲಿ ಏಕಾಂತದಲ್ಲೇ ಕುಳಿತು, ದಿನದ ಬಹುತೇಕ ಸಮಯವನ್ನು ಆಲೋಚನೆ, ಲೆಕ್ಕಾಚಾರ ಮತ್ತು ಪ್ರಯೋಗಗಳಿಗೆ ಮೀಸಲಿಟ್ಟ.

ಇದೇ ಅವಧಿಯಲ್ಲಿ ಕ್ಯಾಲ್ಕುಲಸ್ ಎಂಬ ಗಣಿತದ ಹೊಸ ವಿಧಾನವನ್ನು ರೂಪಿಸಿದ..


ಬೆಳಕಿನ ಮೇಲೆ ಪ್ರಯೋಗ ಮಾಡಿ, ಬಿಳಿ ಬೆಳಕು ಏಳು ಬಣ್ಣಗಳಿಂದ ಕೂಡಿದೆ ಎಂಬ ಸತ್ಯವನ್ನು ಕಂಡುಹಿಡಿದ. ಗುರುತ್ವಾಕರ್ಷಣೆಯ ಆಳವಾದ ಚಿಂತನೆ ನಡೆಸಿದ..

ಈ ಅವಧಿಯನ್ನು ಇತಿಹಾಸದಲ್ಲಿ “ ವಿಜ್ಞಾನದ ಅದ್ಭುತ ವರ್ಷಗಳು ಎಂದು ಕರೆಯಲಾಗಿದೆ. ಈ ಎಲ್ಲಾ ಐತಿಹಾಸಿಕ ಸಂಶೋಧನೆಗಳನ್ನು ಮಾಡಿದ ವಿದ್ಯಾರ್ಥಿಯೇ ಸರ್ ಐಸಾಕ್ ನ್ಯೂಟನ್ ..


ಬಹುಜನರಿಗೆ ಏಕಾಂತ ದುಃಖವಾಗಬಹುದು, ಆದರೆ ನ್ಯೂಟನ್ ಅವರಿಗೆ ಅದು ಸೃಜನಶೀಲತೆಯ ಶಕ್ತಿಕೇಂದ್ರ ಆಗಿತ್ತು. ಕಷ್ಟಕಾಲವೂ ಸಾಧನೆಗೆ ಕಾರಣವಾಗಬಹುದು


 ಸಮಯವನ್ನು ಸರಿಯಾಗಿ ಬಳಸಿದರೆ, ಸಣ್ಣ ಅವಕಾಶವೂ ದೊಡ್ಡ ಫಲ ನೀಡುತ್ತದೆ

ಪರಿಸ್ಥಿತಿ ನಮ್ಮನ್ನು ನಿಯಂತ್ರಿಸಬಾರದು, ನಾವು ಪರಿಸ್ಥಿತಿಯನ್ನು ಬಳಸಿಕೊಳ್ಳಬೇಕು


“ಸಂಕಷ್ಟದ ಸಮಯದಲ್ಲಿ ಕೈಕಟ್ಟಿ ಕುಳಿತರೆ ಏನೂ ಆಗದು, ಅದನ್ನೇ ಅವಕಾಶ ಮಾಡಿಕೊಂಡರೆ ಇತಿಹಾಸ ಬರೆಯಬಹುದು.” ಎಂಬುದು ನ್ಯೂಟನ್ ಅವರ ಜೀವನದಿಂದ ನಮಗೆಲ್ಲರಿಗೂ ಒಂದು ದೊಡ್ಡ ಪಾಠ..

-ಶಂಕರಗೌಡ ಬಸಾಪೂರ

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು